Bengaluru Bulls: ಹೊಸ ಜೆರ್ಸಿ ಅನಾವರಣ; ಹಳದಿ-ಕೆಂಪು ಕವಚದಲ್ಲಿ ಕಂಗೊಳಿಸಿದ ಗೂಳಿಗಳು
ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) 11ನೇ ಆವೃತ್ತಿಗೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಬೆಂಗಳೂರು ಬುಲ್ಸ್ ಕೂಡ ಬಲಿಷ್ಠ ತಂಡದೊಂದಿಗೆ ಈ ಬಾರಿಯ ಚಾಂಪಿಯನ್ ಆಗಲು ರೆಡಿಯಾಗುತ್ತಿದೆ. ಇದಕ್ಕಾಗಿ ಇಬ್ಬರು ಸ್ಟಾರ್ ರೈಡರ್‌ಗಳನ್ನು ಬೆಂಗಳೂರು ತನ್ನ ಅಖಾಡಕ್ಕೆ ಕರೆ ತಂದಿದೆ.
ಪಿಕೆಎಲ್ 2024ರ ಮೆಗಾ ಹರಾಜಿನಲ್ಲಿ ಬೆಂಗಳೂರು ಬುಲ್ಸ್ 70 ಲಕ್ಷ ರೂ.ಗಳಿಗೆ ರೆಕಾರ್ಡ್ ಬ್ರೇಕರ್ ಖ್ಯಾತಿಯ ಪರ್ದೀಪ್ ನರ್ವಾಲ್ ಅವರನ್ನು ಬಿಡ್ ಮಾಡಿದೆ. ಈ ಹಿಂದೆ 2ನೇ ಆವೃತ್ತಿಯಲ್ಲಿ ಅವರು ಇದೇ ತಂಡದಲ್ಲಿದ್ದರು. ಇದೀಗ ಮತ್ತೊಮ್ಮೆ ಬೆಂಗಳೂರು ತಂಡ ಸೇರಿಕೊಂಡಿರುವ ಅವರು ಮತ್ತಷ್ಟು ದಾಖಲೆಗಳನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ.

ಮತ್ತೊಂದೆಡೆ ಸ್ಟಾರ್ ರೈಡರ್ ಅಜಿಂಕ್ಯ ಅಶೋಕ್ ಪವಾರ್ ಅವರಿಗೆ ಬೆಂಗಳೂರು ಬುಲ್ಸ್ ಕೂಡ 1.107 ಕೋಟಿ ರೂ. ನೀಡಿದೆ. ಈ ಮೂಲಕ ಇಲ್ಲಿವರೆಗೆ ನಡೆದ ಹರಾಜು ಪ್ರಕ್ರಿಯೆಗಳಲ್ಲಿ ಬೆಂಗಳೂರು ಬುಲ್ಸ್ ಆಟಗಾರನೊಬ್ಬನಿಗೆ ದುಬಾರಿ ಬೆಲೆ ನೀಡಿರುವುದು ಇದೇ ಮೊದಲು.
ಹಳದಿ-ಕೆಂಪು ಜೆರ್ಸಿ
ಇದೀಗ ಪಿಕೆಎಲ್ 11ನೇ ಆವೃತ್ತಿಯನ್ನು ಮತ್ತಷ್ಟು ರಂಗುಗೊಳಿಸಲು ಬೆಂಗಳೂರು ಬುಲ್ಸ್ ತನ್ನ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಈ ಜೆರ್ಸಿ ನೋಡಿದ ಬುಲ್ಸ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕದ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ಈ ಜೆರ್ಸಿ ಹೋಲುತ್ತಿದೆ. ಹಳದಿ-ಕೆಂಪು ಜರ್ಸಿಯಲ್ಲಿ ಯುಗಾದಿ ಮತ್ತು ಸಂಕ್ರಾತಿ ಹಬ್ಬಕ್ಕೆ ಸಿಂಗಾರಗೊಂಡ ಗೂಳಿಗಳಂತೆ ಆಟಗಾರರು ಕಂಗೊಳಿಸುತ್ತಿದ್ದಾರೆ.
ಬೆಂಗಳೂರು ಬುಲ್ಸ್ ಆನಾವರಣಗೊಳಿಸಿರುವ ಹೊಸ ಜೆರ್ಸಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಧ್ವಜ ಹೋಲುವ ಜೆರ್ಸಿ ಅನಾವರಣ ಮಾಡುವ ಮೂಲಕ ಬೆಂಗಳೂರು ಬುಲ್ಸ್ ತಂಡದ ಕರ್ನಾಟಕ ಜನತೆಗೆ ಇನ್ನಷ್ಟು ಹತ್ತಿರವಾಗಿದೆ.
ಪಿಕೆಎಲ್ 2024- ಬೆಂಗಳೂರು ಬುಲ್ಸ್ ತಂಡ
ರೈಡರ್‌ಗಳು : ಅಜಿಂಕ್ಯ ಅಶೋಕ್ ಪವಾರ್, ಪ್ರರ್ದೀಪ್ ನರ್ವಾಲ್, ಪ್ರಮೋತ್ ಸಾಯಸಿಂಗ್, ಜೈ ಭಗವಾನ್, ಜತಿನ್, ಸುಶೀಲ್, ಅಕ್ಷಿತ್
ಡಿಫೆಂಡರ್‌ಗಳು : ಹಸುನ್ ಥಾಂಗ್ಕ್ರೂಯಾ, ಸೌರಭ್ ನಂದಲ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ರೋಹಿತ್ ಕುಮಾರ್, ಆದಿತ್ಯ ಶಂಕರ್ ಪೊವಾರ್, ಅರುಳ್ನಂತಬಾಬು, ಪಾರ್ಟಿಕ್,
ಆಲ್‌ರೌಂಡರ್: ನಿತಿನ್ ರಾವಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications