Pro kabaddi: ಸತತ ಸೋಲಿನಿಂದ ಕಂಗೆಟ್ಟಿದ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವು
ಪ್ರೋ ಕಬಡ್ಡಿ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಮೊದಲ ಗೆಲುವು ಸಾಧಿಸಿದೆ. 11ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 24ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ ತಂಡವನ್ನು ಬೆಂಗಳೂರು ಬುಲ್ಸ್ ಮಣಿಸಿದೆ.
ಮಂಗಳವಾರ ಹೈದರಾಬಾದ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 34-33 ಅಂಕಗಳ ಅಂತರದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ ವಿರುದ್ಧ ಗೆಲುವಿನ ನಗೆ ಬೀರಿದೆ. ಸತತ ಸೋಲಿನಿಂದ ಕಂಗೆಟ್ಟಿದ ಬೆಂಗಳೂರು ಬುಲ್ಸ್ ಕೊನೆಗೂ ಗೆಲುವಿನ ಟ್ರ್ಯಾಕ್‌ಗೆ ಮರಳಿರುವುದು ಅಭಿಮಾನಿಗಳಿಗೆ ಸಂತಸ ತರಿಸಿದೆ.

ಸ್ಟಾರ್ ರೈಡರ್ ಪರ್ದೀಪ್ ನರ್ವಾಲ್ ಮುನ್ನಡೆಸುತ್ತಿರುವ ಬೆಂಗಳೂರು ಬುಲ್ಸ್ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತರೆ 1ರಲ್ಲಿ ಗೆಲುವು ಕಂಡಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ದಬಾಂಗ್ ಡೆಲ್ಲಿ ಕೆ.ಸಿ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಜಯ ಕಂಡಿದ್ದು, 2ರಲ್ಲಿ ಸೋತಿದೆ.
ಆರಂಭದಿಂದಲ್ಲೂ ಉಭಯ ತಂಡಗಳ ನಡುವೆ ಏರ್ಪಾಟ್ಟಿತ್ತು. ಆದರೆ ಬೆಂಗಳೂರು ಬುಲ್ಸ್ ಮೊದಲಾರ್ಧದಲ್ಲಿ ಅಂಕಗಳನ್ನು ಗಳಿಸುವಲ್ಲಿ ಎಡುವಿತು. ಇದನ್ನೇ ಲಾಭವಾಗಿ ಪಡೆದ ಡೆಲ್ಲಿ ಸತತ ಅಂಕಗಳನ್ನು ಪಡೆಯುವ ಮೂಲಕ ಮುನ್ನಡೆ ಸಾಧಿಸಿತ್ತು. ದ್ವೀತಿಯಾರ್ಧದಲ್ಲಿ ಬೆಂಗಳೂರು ಭರ್ಜರಿ ಪುನರಾಗಮನ ಮಾಡಿತು. ಇದಕ್ಕೆ ಡೆಲ್ಲಿ ಕೂಡ ಪ್ರತ್ಯುತ್ತರ ನೀಡಿತು. ಆದರೆ ಬುಲ್ಸ್ ಎದುರು ಡೆಲ್ಲಿ ಗೆಲುವು ಸಾಧಿಸಿಲು ಆಗಲಿಲ್ಲ.
ಬೆಂಗಳೂರು ಬುಲ್ಸ್ ಪರ ಜೈ ಭಗವಾನ್ ಅದ್ಭುತ ರೈಡ್ ಮಾಡುವ ಮೂಲಕ 11 ಅಂಕಗಳನ್ನು ಕಲೆ ಹಾಕಿದರು. ಆದರೆ ನಾಯಕ ಪರ್ದೀಪ್ ನರ್ವಾಲ್ ಅವರಿಂದ ಕೇವಲ 7 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ನಿತಿನ್ ರಾವಲ್ ಅವರು ಕೂಡ 5 ಅಂಕಗಳ ಬೇಟೆ ಆಡಿದರು. ದಬಾಂಗ್ ಡೆಲ್ಲಿ ಕೆ.ಸಿ ಪರ ಆಶು ಮಲಿಕ್ ಮಿಂಚಿನ ಪ್ರದರ್ಶನ ನೀಡಿದರು. ಒಟ್ಟು 13 ಅಂಕಗಳನ್ನು ಬೇಟೆಯಾಡಿದ ಆಶು ಮಲಿಕ್ ಡೆಲ್ಲಿಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇವರಲ್ಲದೆ, ವಿನಯ್ ವೀರೇಂದ್ರ 6 ಅಂಕಗಳನ್ನು ಗಳಿಸಿದರು.
ಬೆಂಗಾಲ್ ವಾರಿಯರ್ಜ್ vs ಪುಣೇರಿ ಪಲ್ಟನ್
ಮಂಗಳವಾರ ಹೈದರಾಬದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಜ್ ಮತ್ತು ಪುಣೇರಿ ಪಲ್ಟನ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಎರಡು ತಂಡಗಳು 32-32 ಅಂಕಗಳನ್ನು ಗಳಿಸುವ ಮೂಲಕ ಸಮಬಲ ಸಾಧಿಸಿದವು. ಸತತ ಎರಡನೇ ಡ್ರಾ ದಾಖಲಿಸಿದ ಬೆಂಗಾಲ್ ವಾರಿಯರ್ಜ್ ಪರ, ಸುಶೀಲ್ ಕಾಂಬ್ರೇಕರ್ 10 ಅಂಕಗಳನ್ನು ಬೇಟೆಯಾಡಿದರು. ಮತ್ತೊಂದೆಡೆ ಫಾಜೆಲ್ ಅತ್ರಾಚಲಿ 500 ನೇ ಟ್ಯಾಕಲ್ ಅಂಕವನ್ನು ಪಡೆದು ದಾಖಲೆ ಬರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications