Pro Kabaddi: ಗುರುವಾರ ನಡೆದ ಎರಡೂ ಪಂದ್ಯ ಟೈನಲ್ಲಿ ಅಂತ್ಯ
ಗುರುವಾರ ನಡೆದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಎರಡೂ ಪಂದ್ಯಗಳು ಟೈನಲ್ಲಿ ಅಂತ್ಯವಾಗಿದೆ. ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ, ಯುಪಿ ಯೋಧಾಸ್ ತಂಡದ ವಿರುದ್ಧ, ಎರಡನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್, ಯು ಮುಂಬಾ ವಿರುದ್ಧ ಟೈ ಸಾಧಿಸಿತು. ಗುರುವಾರದ ಪಂದ್ಯದಲ್ಲಿ ಅಂಕ ಸಾಧಿಸಿದ ಬಳಿಕ ಯು ಮುಂಬಾ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ, ಯುಪಿ ಯೋಧಾಸ್ 4ನೇ ಸ್ಥಾನ, ದಬಾಂಗ್ ದೆಹಲಿ 5ನೇ ಸ್ಥಾನ, ಜೈಪುರ ತಂಡ ಆರನೇ ಸ್ಥಾನವನ್ನು ಪಡೆದಿವೆ.
ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆ.ಸಿ 32-32 ಅಂಕಗಳಿಂದ ಯುಪಿ ಯೋಧಾಸ್ ವಿರುದ್ಧ ಅಂಕಗಳನ್ನು ಹಂಚಿಕೊಂಡಿತು. ಮೊದಲಾವಧಿಯ ಆಟದಿಂದ ಉಭಯ ತಂಡಗಳು ಜಿದ್ದಾಜಿದ್ದಿನ ಕಾದಾಟವನ್ನು ನೀಡಿದವು. ಮೊದಲ 20 ನಿಮಿಷದ ಆಟದಲ್ಲಿ ಉಭಯ ತಂಡಗಳು ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಈ ಅವಧಿಯಲ್ಲಿ ದಬಾಂಗ್ ಒಂದು ಅಂಕದ ಮುನ್ನಡೆ ಸಾಧಿಸಿತು. ಆದರೆ ಈ ಅವಧಿಯಲ್ಲಿ ಉಭಯ ತಂಡಗಳು ರೈಡಿಂಗ್‌ನಲ್ಲಿ ಅಮೋಘ ದಾಳಿಯನ್ನು ನಡೆಸಿದವು. ಈ ಅವಧಿಯ ಆಟದಲ್ಲಿ ಯಾವುದೇ ತಂಡ ಆಲೌಟ್ ಆಗಲಿಲ್ಲ.

ಭರ್ಜರಿ ಪ್ರದರ್ಶನ
ಎರಡನೇ ಅವಧಿಯ ಇನ್ನು ಜಿದ್ದಾಜಿದ್ದಿನಿಂದ ಕೂಡಿತ್ತು. ಈ ಅವಧಿಯಲ್ಲಿ ದಬಾಂಗ್ ತಂಡ ಸಹ ಅಮೋಘ ರಣ ತಂತ್ರವನ್ನು ಪ್ರದರ್ಶಿಸಿತು. ಎರಡನೇ ಅವಧಿಯ 20 ನಿಮಿಷದಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಈ ಅವಧಿಯಲ್ಲಿ 19-20 ಅಂಕಗಳಿಂದ ಯುಪಿ ಮುನ್ನಡೆ ಸಾಧಿಸಿದವು. ಸೆಕೆಂಡ್ ಹಾಫ್‌ನಲ್ಲಿ ಯುಪಿ ತಂಡದ ದಾಳಿ ಮನಮೋಹಕವಾಗಿತ್ತು. ಈ ವೇಳೆ ಯುಪಿ 15 ಅಂಕ ಸೇರಿಸಿದರೆ ದಬಾಂಗ್ ಮೂರು ಅಂಕ ಕಡಿಮೆ ಕಲೆ ಹಾಕಿತು.
ಎರಡೂ ತಂಡಗಳ ಸ್ಟಾರ್ ಆಟಗಾರರು ಸಹ ಪಂದ್ಯದಲ್ಲಿ ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಯುಪಿ ಪರ ಗಗನ್ ಗೌಡ 13, ಭವಾನಿ ರಜಪೂತ್ 10 ಅಂಕ ಕಲೆ ಹಾಕಿದರು. ದಬಾಂಗ್ ತಂಡದ ಪರ ಆಶು ಮಲಿಕ್ 11 ಅಂಕ ಬಾಚಿಕೊಂಡರು.

ಅಂಕ ಹಂಚಿಕೊಂಡ ಜೈಪುರ, ಮುಂಬಾ
ಎರಡನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಯು ಮುಂಬಾ ತಂಡಗಳ ನಡುವೆ ಕಾದಾಟ ನಡೆಯಿತು. ಈ ವೇಳೆ ಜೈಪುರ 22-22 ಅಂಕಗಳಿಂದ ಮುಂಬಾ ವಿರುದ್ಧ ಟೈ ಸಾಧಿಸಿತು.
ಮೊದಲಾವಧಿಯ ಆಟದಲ್ಲಿ ಮುಂಬಾ 12-8 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಉಭಯ ತಂಡಗಳು ಟ್ಯಾಕಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದವು. ಅಲ್ಲದೆ ಮೊದಲ 20 ನಿಮಿಷದ ಆಟದಲ್ಲಿ ದಾಳಿಯಲ್ಲಿ ಎರಡೂ ತಂಡಗಳು ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲವಾದವು. ಎರಡನೇ ಅವಧಿಯ ಆಟದಲ್ಲಿ ಜೈಪುರ್ 14-10 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಪಂದ್ಯದಲ್ಲಿ ಜೈಪುರ ತಂಡದ ಟ್ಯಾಕಲ್ ಅಮೋಘವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications