Pro Kabaddi: ಡೆಲ್ಲಿ-ಗುಜರಾತ್ ನಡುವೆ ಗುದ್ದಾಟ; ಡ್ರಾನಲ್ಲಿ ಅಂತ್ಯ ಕಂಡ ಪಂದ್ಯ
ಪ್ರೊ ಕಬಡ್ಡಿ 2024ರ ಆವೃತ್ತಿಯಲ್ಲಿ ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಗುಜರಾತ್ ಜೈಂಟ್ಸ್ ಮತ್ತು ದಬಾಂಗ್ ಡೆಲ್ಲಿ ಕೆಸಿ ನಡುವಿನ ರೋಚಕ ಪಂದ್ಯ ಡ್ರಾಗೊಂಡಿದೆ. ಬುಧವಾರ ನೋಯ್ಡಾ ಸ್ಟೇಡಿಯಂನಲ್ಲಿ ನಡೆದ ಪ್ರೋ ಕಬಡ್ಡಿ 11ನೇ ಆವೃತ್ತಿಯ 65ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ದಬಾಂಗ್ ಡೆಲ್ಲಿ ಕೆಸಿ ನಡುವಿನ ಪಂದಗಯ 39-39 ಅಂಕಗಳ ಅಂತರಲ್ಲಿ ಡ್ರಾ ಆಗಿದೆ. ಉಭಯ ತಂಡಗಳು ಗೆಲುವಿಗಾಗಿ ರೋಚಕ ಕಾದಾಟ ನಡೆಸಿದವು. ಆದರೆ, ಎರಡು ತಂಡಗಳಿಗೂ ಗೆಲುವು ದಕ್ಕಲಿಲ್ಲ.
ಪಂದ್ಯದ ಆರಂಭದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ದಬಾಂಗ್ ಡೆಲ್ಲಿ ಕೆಸಿ ಅದ್ಭತ ಪ್ರದರ್ಶನ ನೀಡಿತು. ಪರಿಣಾಮ ಗುಜರಾತ್ ಎದುರು ಡೆಲ್ಲಿ ಆರಂಭಿಕ ಮುನ್ನಡೆ ಸಾಧಿಸಿತು. ಗುಜರಾತ್ ಮೊದಲಾರ್ಧದಲ್ಲಿ ಮೊದಲ ಬಾರಿಗೆ ಆಲೌಟಾಯಿತು. ನಂತರ ಪುಟಿದ್ದೆದ ಗುಜರಾತ್ ಅಂಕಗಳ ಬೇಟೆಯಾಡಿತು. ಆದರೂ ಮೊದಲಾರ್ಧದಲ್ಲಿ ಡೆಲ್ಲಿ ವಿರುದ್ಧ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಡೆಲ್ಲಿ 20-17 ಅಂಕಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.

ದ್ವಿತೀಯಾರ್ಧದಲ್ಲಿ ದಬಾಂಗ್ ಡೆಲ್ಲಿ ಕೆಸಿ ತನ್ನ ಮುನ್ನಡೆಯನ್ನು ಉಳಿಸಿಕೊಳ್ಳಲು ಎಚ್ಚರಿಕೆ ಆಟ ಪ್ರದರ್ಶಿಸಿತು. ಆದರೆ ಡೆಲ್ಲಿ ಪರ ಅಶು ಮಲಿಕ್ ತಮ್ಮ ಉತ್ತಮ ರೈಡ್ ಮುಂದುವರೆಸಿದರು. ಆಶು ಜೊತೆಗೂಡಿದ ಯೋಗೇಶ್ ಕೂಡ ಮಿಂಚಿನ ರೈಡ್ ಮಾಡುವ ಮೂಲಕ ಗುಜರಾತ್ ತಂಡವನ್ನು ಎರಡನೇ ಬಾರಿಗೆ ಆಲೌಟ್ ಮಾಡಲಾಯಿತು. ಪಾರ್ಟಿಕ್ ದಹಿಯಾ ಕೂಡ ಗುಜರಾತ್ ಪರ ಅಂಕಗಳ ಬೇಟೆಯಾಡಿದರು. ಇದರೊಂದಿಗೆ ಅವರು ಸೂಪರ್ 10 ಅಂಕಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ಸೋಲು ಒಪ್ಪಿದ ಎರಡು ತಂಡಗಳಿಂದ ಪ್ರಬಲ ಪೈಪೋಟಿ ಕಂಡು ಬಂತು. ಕೊನೆಯಲ್ಲಿ ದಬಾಂಗ್ ಡೆಲ್ಲಿ ಕೆಸಿ ಬೋನಸ್ ಅಂಕವನ್ನು ಪಡೆಯುವ ಮೂಲಕ ಪಂದ್ಯವನ್ನು 39-39 ರಲ್ಲಿ ಅಂತ್ಯಗೊಳಿಸಿತು.
ಗುಜರಾತ್ ಜೈಂಟ್ಸ್ ಆಡಿದ 11 ಪಂದ್ಯಗಳಲ್ಲಿ 2 ಜಯ, 8 ಸೋಲು ಕಂಡಿದ್ದು, 1 ರಲ್ಲಿ ಸಾಧಿಸಿದೆ. ಗುಜರಾತ್ 15 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ದಬಾಂಗ್ ಡೆಲ್ಲಿ ಕೆಸಿ ಆಡಿದ 12 ಪಂದ್ಯಗಳಲ್ಲಿ 5 ಗೆಲುವು, 5 ಸೋಲಿನೊಂದಿಗೆ 2 ರಲ್ಲಿ ಡ್ರಾ ಸಾಧಿಸಿದ್ದು, 35 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications