Pro kabaddi 2024: ಸತತ ಎರಡನೇ ಗೆಲುವು ಕಂಡ ಹರಿಯಾಣ ಸ್ಟೀಲರ್ಸ್
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ 19ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ ವಿರುದ್ಧ ಹರಿಯಾಣ ಸ್ಟೀಲರ್ಸ್ ಗೆಲುವು ಸಾಧಿಸಿದೆ. ಭರ್ಜರಿ ಪ್ರದರ್ಶನ ನೀಡಿದ ಹರಿಯಾಣ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿದೆ.
ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ ತಂಡವನ್ನು 41-34 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್ ಸೋಲಿಸಿದೆ. ಹರಿಯಾಣ ಪರ ಮೊಹಮ್ಮದ್ರೇಜಾ ಶಾಡ್ಲೂಯಿ 10 ಅಂಕಗಳು ಮತ್ತು ಶಿವಂ ಪತಾರೆ 8 ಅಂಕಗಳನ್ನು ಬೇಟೆ ಆಡಿದರು. ದಬಾಂಗ್ ಡೆಲ್ಲಿ ಕೆ.ಸಿ ಪರ ಆಶು ಮಲಿಕ್ 13 ಅಂಕಗಳನ್ನು ಕಲೆ ಹಾಕಿದರು.

ಮೊದಲಾರ್ಧದ ಮುಕ್ತಾಯಕ್ಕೆ ಕೇವಲ 5 ನಿಮಿಷಗಳು ಬಾಕಿ ಇರುವಾಗ ಮೊಹಮ್ಮದ್ರೇಜಾ ಶಾಡ್ಲೌಯಿ ಅವರು ಹರಿಯಾಣ ಪರ ಮೊದಲ ಸೂಪರ್ ರೈಡ್ ಮಾಡುವ ಮೂಲಕ ಮೂರು ಅಂಕಗಳನ್ನು ಗಳಿಸಿದರು. ಹೀಗಾಗಿ ದಂಬಾಗ್ ಡೆಲ್ಲಿ ಕೆ.ಸಿ ಮೊದಲಾರ್ಧದ ಕೊನೆ ನಿಮಿಷಗಳಲ್ಲಿ ಮೊದಲ ಬಾರಿ ಆಲೌಟ್ ಆಯಿತು. ಈ ವೇಳೆ ಹರಿಯಾಣ 24-13 ಅಂಕಗಳಿಂದ ಮುನ್ನಡೆ ಸಾಧಿಸಿತು.
ವಿರಾಮದ ನಂತರವೂ ಅದ್ಭುತ ಪ್ರದರ್ಶನ ಮುಂದುವರೆಸಿದ ಹರಿಯಾಣ ತಂಡ ದಂಬಾಗ್ ಡೆಲ್ಲಿ ಮೇಲೆ ತನ್ನ ಪ್ರಾಬಲ್ಯ ಸಾಧಿಸಿತು. ಇದಕ್ಕೆ ಪ್ರತಿರೋಧ ತೋರಿದ ದಬಾಂಗ್ ಡೆಲ್ಲಿ ಪರ ಅಶು ಮಲಿಕ್, ನವೀನ್ ಕುಮಾರ್ ಮತ್ತು ವಿಕ್ರಾಂತ್ ಉತ್ತಮ ಪ್ರದರ್ಶನ ನೀಡುವ ಮೂಲಕ ಅಂಕಗಳನ್ನು ಗಳಿಸಿದರು. ಆದರೆ ಹರಿಯಾಣ ಸ್ಟೀಲರ್ಸ್ ರಕ್ಷಣಾ ಕ್ರೇತ್ರವನ್ನು ಭೇದಿಸುವುದು ಡೆಲ್ಲಿಗೆ ಸಾಧ್ಯವಾಗಲಿಲ್ಲ.
ಆದರೂ, ಅಶು ಮಲಿಕ್ ಅವರ ಮಿಂಚಿನ ರೈಡ್‌ನಿಂದ ಹರಿಯಾಣ ಸ್ಟೀಲರ್ಸ್ ಆಲೌಟ್ ಆಯಿತು. ಈ ವೇಳೆ ಅಶು ಮಲಿಕ್ ಅವರು ತಮ್ಮ ಸೂಪರ್ 10 ಅಂಕಗಳನ್ನು ಪೂರ್ಣಗೊಳಿಸಿದರು. ಇತ್ತ ಭರ್ಜರಿ ಪುನರಾಗಮನ ಮಾಡಿದ ಹರಿಯಾಣ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತು. ಇದರಿಂದ ದಬಾಂಗ್ ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಲ್ ಹಾಕಿತು. ಅಂತಿಮವಾಗಿ ಹರಿಯಾಣ ಸ್ಟೀಲರ್ಸ್ ಸತತ ಎರಡನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆಯಿತು. ಸೋತ ಡೆಲ್ಲಿ 5ನೇ ಸ್ಥಾನದಲ್ಲಿದೆ.
ತೆಲುಗು ಟೈಟಾನ್ಸ್ ಗೆಲುವು
ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ತೆಲುಗು ಟೈಟಾನ್ಸ್ ಉತ್ತಮ ಫಾರ್ಮ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು. ಪವನ್ ಸೆಹ್ರಾವತ್ ನೇತೃತ್ವದ ತೆಲುಗು ಟೈಟಾನ್ಸ್ ತಂಡ 28-26 ಅಂಕಗಳ ಅಂತರದಲ್ಲಿ ಪಾಟ್ನಾ ವಿರುದ್ಧ ಪಂದ್ಯವನ್ನು ಗೆದ್ದಿದೆ.
ಪ್ರೋ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ತಂಡಕ್ಕೆ ಇದು ಎರಡನೇ ಗೆಲುವು. ತೆಲುಗು ಟೈಟಾನ್ಸ್ ಪರ ಆಶಿಶ್ ನರ್ವಾಲ್ 9 ಅಂಕಗಳನ್ನು ಗಳಿಸಿದರೆ, ಪವನ್ ಸೆಹ್ರಾವತ್ 5 ಅಂಕಗಳನ್ನು ಸೇರಿಸಿದರು. ಅಂಕಿತ್ 4 ಅದ್ಭುತ ಟ್ಯಾಕಲ್ ಅಂಕಗಳನ್ನು ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications