Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi 2024: ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಜಯ

ಮಾಜಿ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್‌ 11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ 33-30 ರಿಂದ ಯುಪಿ ಯೋಧಾಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲಾವಧಿಯ ಹಿನ್ನಡೆ ಅನುಭವಿಸಿದರೂ, ಎರಡನೇ ಅವಧಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳ ಹಿನ್ನಡೆಯನ್ನು ಮೆಟ್ಟಿನಿಂತ ಅಂಕಗಳನ್ನು ಸಾಧಿಸಿತು. ಈ ಗೆಲುವಿನ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್‌ ಆಡಿದ 6 ಪಂದ್ಯಗಳಲ್ಲಿ ಮೂರು ಜಯ, 2 ಸೋಲು, 1 ಡ್ರಾ ಸಾಧಿಸಿದ್ದು, 19 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

Pro Kabaddi 2024 Jaipur Pink Panthers beat UP Yoddhas

ಮೊದಲಾವಧಿಯ 20 ನಿಮಿಷದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ 15-17 ಅಂಕಗಳೊಂದಿಗೆ ಹಿನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಯೋಧಾಸ್ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸೊಗಸಾದ ಪ್ರದರ್ಶನ ನೀಡಿತು. ಈ ಅವಧಿಯ ವಿಶೇಷ ಅಂದರೆ, ಉಭಯ ತಂಡಗಳು ಒಮ್ಮೆಯೂ ಆಲೌಟ್ ಆಗಲಿಲ್ಲ. ಎರಡನೇ ಅವಧಿಯ ಆಟದಲ್ಲಿ ಜೈಪುರ ಅಮೋಘ ಪ್ರದರ್ಶನ ನೀಡಿತು.

ಕೊನೆಯ 20 ನಿಮಿಷದಲ್ಲಿ ಜೈಪುರ ಅಬ್ಬರಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮಬಲದ ಹೋರಾಟ ನೀಡಿದವು. ಆದರೆ ಆಲೌಟ್‌ ಮೂಲಕ ಜೈಪುರ ನಾಲ್ಕು ಅಂಕ ಕಲೆ ಹಾಕಿದ್ದು, ಗೆಲುವಿಗೆ ಮುಖ್ಯವಾಯಿತು.

Pro Kabaddi 2024 Jaipur Pink Panthers beat UP Yoddhas

ಅರ್ಜುನ್ ದೇಶ್ವಲ್‌ @1000

ಜೈಪುರ ಪಿಂಕ್ ಪ್ಯಾಂಥರ್ಸ್‌ ಪರ ಸ್ಟಾರ್ ಆಟಗಾರ ಅರ್ಜುನ್ ದೇಶ್ವಾಲ್‌ ಇತಿಹಾಸ ನಿರ್ಮಿಸಿದರು. ಯೋಧಾಸ್ ವಿರುದ್ಧದ ಪಂದ್ಯದಲ್ಲಿ ಐದು ಅಂಕಗಳನ್ನು ಕಲೆ ಹಾಕುವ ಮೂಲಕ ಅರ್ಜುನ್‌ ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ 1000 ರೇಡ್ ಪಾಯಿಂಟ್ಸ್‌ಗಳನ್ನು ದಾಖಲಿಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡರು. ವಿಜೇತ ತಂಡದ ಪರ ನೀರಜ್ ನರ್ವಾಲ್‌ 9 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಪರಾಜಿತ ತಂಡದ ಪರ ಭರತ್ 7, ಹಿತೇಶ್‌ ಹಾಗೂ ಸುಮಿತ್‌ ತಲಾ ಐದು ಅಂಕ ಕಲೆ ಹಾಕಿ ಸೋಲಿನಲ್ಲಿ ಎಲ್ಲರ ಗಮನ ಸೆಳೆದರು.

ಮುಂಬಾಗೆ ಜಯ

ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ 32-26 ರಿಂದ ದಬಾಂಗ್‌ ದೆಹಲಿ ಕೆ.ಸಿ ವಿರುದ್ಧ ಅಮೊಘ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಮುಂಬಾ ಆಡಿದ 6 ಪಂದ್ಯಗಳಲ್ಲಿ 3 ಜಯ, 2 ಸೋಲು, 1 ಡ್ರಾ ಸಾಧಿಸಿದ್ದು, 19 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮುಂಬಾ ತಂಡದ ಪರ ಮಂಜೀತ್‌ 9 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ದಬಾಂಗ್‌ ತಂಡದ ಪರ ಆಶು ಮಲಿಕ್ 11 ಅಂಕ ಸೇರಿಸಿ ಅಬ್ಬರಿಸಿದರು.

ಪಾಟ್ನಾ, ಮುಂಬಾ ಫೈಟ್‌

11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್‌ ಹಾಗೂ ಯು ಮುಂಬಾ ತಂಡಗಳು ಮೊದಲ ಪಂದ್ಯದಲ್ಲಿ ಕಾದಾಟ ನಡೆಸಲಿದ್ದು, ಎರಡನೇ ಪಂದ್ಯದಲ್ಲಿ ತಮಿಳು ತಲೈವಾಸ್‌ ಹಾಗೂ ತೆಲುಗು ಟೈಟನ್ಸ್‌ ಗೆಲುವಿಗಾಗಿ ಹುಡುಕಾಟ ನಡೆಸಲಿವೆ.

Story first published: Tuesday, November 5, 2024, 22:37 [IST]
Other articles published on Nov 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+