For Quick Alerts
ALLOW NOTIFICATIONS  
For Daily Alerts

Pro kabaddi: ನರೇಂದ್ರ ಕಂಡೋಲಾ ದಾಳಿಗೆ ಬೆದರಿದ ಗುಜರಾತ್ ಜೈಂಟ್ಸ್; ತಮಿಳ್ ತಲೈವಾಸ್‌ಗೆ ಸುಲಭ ಜಯ

ಪ್ರೋ ಕಬಡ್ಡಿ 11ನೇ ಋತುವಿನ 26ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ವಿರುದ್ಧ ತಮಿಳ್ ತಲೈವಾಸ್ ಸುಲಭ ಜಯ ದಾಖಲಿಸಿದೆ. ಪ್ರೋ ಕಬಡ್ಡಿ 11ರ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ಮೂರನೇ ಗೆಲುವು ಕಂಡಿದೆ.

ಬುಧವಾರ ಹೈದಾರಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ 44-25 ಅಂಕಗಳ ಅಂತರದಲ್ಲಿ ಗುಜರಾತ್ ಜೈಂಟ್ಸ್‌ ತಂಡವನ್ನು ಸೋಲಿಸಿತು. ತಮಿಳ್ ತಲೈವಾಸ್ ಪರ ನರೇಂದ್ರ ಕಂಡೋಲಾ 15 ಅಂಕ ಗಳಿಸಿದರೆ, ಸಾಹಿಲ್ ಗುಲಿಯಾ ಮತ್ತು ಸಚಿನ್ ತಲಾ 5 ಅಂಕಗಳನ್ನು ಬೇಟೆಯಾಡಿದರು. ಗುಜರಾತ್ ಜೈಂಟ್ಸ್ ಪರ ಗುಮನ್ ಸಿಂಗ್ 7 ಅಂಕ ಕಲೆ ಹಾಕಿದರು.

Pro Kabaddi 2024 Tamil Thalaivas win against Gujarat Giants

ಪಂದ್ಯದ ಆರಂಭದಿಂದಲ್ಲೇ ತಮಿಳ್ ತಲೈವಾಸ್ ಅಂಕಗಳ ಬೇಟೆಗಿಳಿಯಿತು. ನರೇಂದರ್ ಕಂಡೋಲಾ ಮಿಂಚಿನ ರೈಡ್ ಮಾಡುವ ಎದುರಾಳಿ ಗುಜರಾತ್ ಜೈಂಟ್ಸ್‌ ಅಂಕಣದಲ್ಲಿ ಅಂಕಗಳನ್ನು ಕದ್ದರು.
ಆದರೆ ಈ ವೇಳೆ ಪುಟಿದೇಳಿದ ಗುಜರಾತ್ ಪರ ಗುಮನ್ ಸಿಂಗ್ ಅಂಕಗಳಗಳನ್ನು ದೋಚಿದರು.

ಮೊದಲಾರ್ಧದಲ್ಲಿ ತಮಿಳ್ ತಲೈವಾಸ್ 18-14 ರಿಂದ ಮುನ್ನಡೆ ಸಾಧಿಸಿತ್ತು. ಗುಜರಾತ್ ಜೈಂಟ್ಸ್ 2 ಅಂಕಗಳಿಂದ ಹಿನ್ನಡೆ ಕಂಡಿತ್ತು. ಬಳಿಕ ಗುಜರಾತ್ ತಮ್ಮ ಹೋರಾಟವನ್ನು ಮುಂದುವರೆಸಿದರು. ಆದರೆ ಈ ಹಂತದಲ್ಲಿ ತಮಿಳು ತಲೈವಾಸ್‌ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ತಮಿಳ್ ತಲೈವಾಸ್ ಪರ ಸತತವಾಗಿ ಅಂಕಗಳನ್ನು ನರೇಂದ್ರ ಗಳಿಸಿದರು.

ದ್ವಿತೀಯಾರ್ಧದಲ್ಲಿ ನರೇಂದರ್ ತಮ್ಮ ಸೂಪರ್ 10 ಅಂಕಗಳನ್ನು ಪೂರ್ಣಗೊಳಿಸಿದರು. ಕೊನೆ 30 ನಿಮಿಷಗಳ ಆಟದಲ್ಲಿ ತಮಿಳ್ ತಲೈವಾಸ್ 12 ಅಂಕಗಳ ಮುನ್ನಡೆ ಸಾಧಿಸಿತು. ಈ ಮೂಲಕ ತಮಿಳ್ ತಲೈವಾಸ್ ಪಂದ್ಯದ ಮೇಲೆ ಪ್ರಾಬಲ್ಯ ತೋರಿತು. ಅಂತಿಮ ನಿಮಿಷದಲ್ಲಿ ಗುಜರಾತ್ ತಂಡವನ್ನು ತಮಿಳ್ ತಲೈವಾಸ್ ಮತ್ತೊಮ್ಮ ಆಲೌಟ್ ಮಾಡುವ ಮೂಲಕ ಗೆಲುವು ಸಾಧಿಸಿತು.

ಹ್ಯಾಟ್ರಿಕ್ ಗೆಲುವು

ಬುಧವಾರ ಹೈದರಾಬಾದ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ
ಹರಿಯಾಣ ಸ್ಟೀಲರ್ಸ್ ಗೆಲುವಿನ ನಗೆ ಬೀರಿದೆ. ಪ್ರೋ ಕಬಡ್ಡಿ 11ರಲ್ಲಿ ಹರಿಯಾಣ ಸ್ಟೀಲರ್ಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಯುಪಿ ಯೋಧಾಸ್ ತಂಡವನ್ನು 28-30 ಅಂಕಗಳ ಅಂತರದಲ್ಲಿ ಹರಿಯಾಣ ಸ್ಟೀಲರ್ಸ್‌ ಮಣಿಸಿದೆ.

ಹರಿಯಾಣ ಸ್ಟೀಲರ್ಸ್ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 1ರಲ್ಲಿ ಸೋತು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಯುಪಿ ಯೋಧಾಸ್ ಆಡಿರುವ 5 ಪಂದ್ಯಗಳ ಪೈಕಿ 3ರಲ್ಲಿ ಗೆಲುವು ಸಾಧಿಸಿದರೆ, 2ರಲ್ಲಿ ಗೆದ್ದು 3ನೇ ಸ್ಥಾನದಲ್ಲಿ ಉಳಿದಿದೆ.

Story first published: Wednesday, October 30, 2024, 22:41 [IST]
Other articles published on Oct 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+