Pro Kabaddi: ಗಗನ್ ಗೌಡ ಅಬ್ಬರ, ಯುಪಿ ಯೋಧಾಸ್‌ಗೆ ಜಯ
11ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿ ಪುಣೆಯಲ್ಲಿ ನಡೆಯುತ್ತಿದೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಯುಪಿ ಯೋಧಾಸ್ 36-33 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು, ಎರಡನೇ ಪಂದ್ಯದಲ್ಲಿ ಬಂಗಾಳ್ ವಾರಿಯರ್ಸ್ 39-32 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಹರಿಯಾಣ ಈ ಗೆಲುವಿನ ಮೂಲಕ ಆಡಿದ 15 ಪಂದ್ಯಗಳಲ್ಲಿ 8 ಜಯ, 6 ಸೋಲು ಕಂಡಿದ್ದು, 48 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಬುಧವಾರ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಅಬ್ಬರದ ಆಟವನ್ನು ಪ್ರದರ್ಶಿಸಿತು. ಈ ಅವಧಿಯಲ್ಲಿ ಟೈಟಾನ್ಸ್ ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿತು. ಯುಪಿ ಯೋಧಾಸ್ ತಂಡವನ್ನು, ತೆಲುಗು ಒಂದು ಬಾರಿ ಆಲೌಟ್ ಮಾಡಿತು. ಈ ಅವಧಿಯಲ್ಲಿ 17-10 ಅಂಕಗಳಿಸಿ ಮಿಂಚಿತು.

ಯುಪಿ ಅಬ್ಬರದ ಆಟ
ಎರಡನೇ ಅವಧಿಯಲ್ಲಿ ಯುಪಿ ಯೋಧಾಸ್ ಅವರು ತಾವು ಹಾಕಿಕೊಂಡ ರಣ ತಂತ್ರವನ್ನು ಸೊಗಸಾಗಿ ಮೈದಾನದಲ್ಲಿ ತೋರಿಸಿತು. ಈ ಅವಧಿಯ ಯಾವುದೇ ಹಂತದಲ್ಲೂ ತೆಲುಗು ತಂಡ ಮೆಟ್ಟಿ ನಿಲ್ಲಲು ಯುಪಿ ಅವಕಾಶವನ್ನೇ ನೀಡಲೇ ಇಲ್ಲ. ಈ ಅವಧಿಯಲ್ಲಿ ಯುಪಿ ತಂಡದ ಸ್ಟಾರ್ ರೈಡರ್‌ಗಳು ಭರ್ಜರಿ ಆಟದ ಪ್ರದರ್ಶನ ನೀಡಿ, ತಂಡದ ಅಂಕವನ್ನು ಹಿಗ್ಗಿಸುತ್ತಾ ಸಾಗಿದರು. ಈ ಅವಧಿಯಲ್ಲಿ ಯುಪಿ 18 ರೈಡಿಂಗ್ ಅಂಕವನ್ನು ಕಲೆ ಹಾಕಿತು. ಇನ್ನು ಟ್ಯಾಕಲ್‌ನಲ್ಲಿ 5 ಅಂಕ ಸೇರಿಸಿತು. ಅಲ್ಲದೆ ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು.
ವಿಜೇತ ತಂಡದ ಪರ ಗಗನ್ ಗೌಡ 13 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 10 ಟಚ್ ಪಾಯಿಂಟ್ ಹಾಗೂ 5 ಬೋನ್ಸ್ ಅಂಕವನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ವಿಜಯ್ ಮಲಿಕ್ 11 ಅಂಕ ಕಲೆ ಹಾಕಿದರು.

ಬಂಗಾಳಗೆ ಜಯ
ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಅಗ್ರ ಸ್ಥಾನ ಪಡೆದ ಹರಿಯಾಣ ಸ್ಟೀಲರ್ಸ್ ತಂಡವನ್ನು, ಬಂಗಾಳ ವಾರಿಯರ್ಸ್ ತಂಡ ಮಣಿಸಿತು. ಈ ಪಂದ್ಯದಲ್ಲಿ ಬಂಗಾಳ 39-32 ಅಂಕಗಳೊಂದಿಗೆ ಹರಿಯಾಣ ಸ್ಟೀಲರ್ಸ್ ತಂಡವನ್ನು ಸೋಲಿಸಿತು.
ಮೊದಲಾವಧಿಯಲ್ಲ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಈ ಅವಧಿಯಲ್ಲಿ ಉಭಯ ತಂಡಗಳು ತಲಾ 17 ಅಂಕಗಳನ್ನು ಹಂಚಿಕೊಂಡಿದವು. ಮೊದಲ 20 ನಿಮಿಷದಲ್ಲಿ ಹರಿಯಾಣ ದಾಳಿಯಲ್ಲಿ 12 ಅಂಕ ಸೇರಿದರೆ, ಬಂಗಾಳ ರೈಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಬಂಗಾಳ ಬೋನಸ್ ಅಂಕವನ್ನು ಕಲೆ ಹಾಕಿತು.
ಎರಡನೇ ಅವಧಿಯಲ್ಲಿ ಬಂಗಾಳ 22-15 ಅಂಕಗಳಿಂದ ಹರಿಯಾಣ ಸ್ಟೀಲರ್ಸ್ ತಂಡದ ವಿರುದ್ಧ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಬಂಗಾಳ 4ನೇ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications