Pro Kabaddi: ತೆಲುಗು ಟೈಟನ್ಸ್‌ಗೆ ಗುದ್ದಿದ ಬುಲ್ಸ್: ಬೆಂಗಳೂರಿಗೆ 16 ಅಂಕಗಳ ಅಂತರದ ಜಯ
ಭರವಸೆಯ ಆಟಗಾರ ಅಕ್ಷಿತ್ ಹಾಗೂ ಸುರ್ಜಿತ್ ಸಿಂಗ್ ಅವರ ಸೊಗಸಾದ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ 10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 78ನೇ ಪಂದ್ಯದಲ್ಲಿ 42-26ರಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು.
ಈ ಜಯದ ಮೂಲಕ ಬೆಂಗಳೂರು ಬುಲ್ಸ್ ಆಡಿದ 14 ಪಂದ್ಯಗಳಲ್ಲಿ6 ಜಯ, 8 ಸೋಲು ಕಂಡಿದ್ದು, 37 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಇನ್ನು ತೆಲುಗು ಟೂರ್ನಿಯಲ್ಲಿ ಎರಡನೇಜಯ ಸಾಧಿಸುವ ಕನಸು ನುಚ್ಚುನೂರಾಗಿದೆ.

ಬೆಂಗಳೂರು ಬುಲ್ಸ್ ತಂಡ ಆರಂಭದಲ್ಲಿ ಅಂಕಗಳನ್ನು ಬಾಚಿಕೊಳ್ಳುವಲ್ಲಿ ಹಿಂದೇಟು ಹಾಕಿತು. ಮೊದಲಾವಧಿಯಲ್ಲಿ ತೆಲುಗು ಅಬ್ಬರದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ರೈಡರ್‌ಗಳು ಮಂಕಾದಂತೆ ಕಂಡು ಬಂದರು.ಉಭಯ ತಂಡದ ರೈಡರ್‌ಗಳು ಅಂಕಗಳನ್ನು ಕಲೆ ಹಾಕಲಿಲ್ಲ. ಟ್ಯಾಕಲ್‌ನಲ್ಲಿ ತೆಲುಗು 7 ಅಂಕಗಳನ್ನು ಕಲೆ ಹಾಕಿದರೆ, ಬುಲ್ಸ್ 5 ಅಂಕ ಕಲೆ ಹಾಕಿತು. ಬುಲ್ಸ್ ಈ ಅವಧಿಯಲ್ಲಿ ಮೂರು ಅಂಕಗಳ ಹಿನ್ನಡೆ ಅನುಭವಿಸಿತು. ತೆಲುಗು ಈ ಅವಧಿಯಲ್ಲಿ 12-9 ಅಂಕಗಳಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲಿ ಬೆಂಗಳೂರು ಯೋಜನಾ ಬದ್ಧ ಆಟವನ್ನು ಆಡಿತು. ಈ ಅವಧಿಯಲ್ಲಿ ಅಕ್ಷರಶಃ ಬೆಂಗಳೂರು ಅಬ್ಬರದ ಆಟದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ತೆಲುಗು ತಂಡ ಅಂಕಗಳನ್ನು ಕಲೆ ಹಾಕುವ ಆಸೆಗೆ ಬೆಂಗಳೂರು ಪೆಟ್ಟು ನೀಡಿತು. ಬುಲ್ಸ್ ಈ ಅವಧಿಯಲ್ಲಿ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಬ್ಬರದ ಆಟವನ್ನು ಆಡಿತು. ಈ ಅವಧಿಯಲ್ಲಿ ಬುಲ್ಸ್ 15 ಅಂಕಗಳನ್ನು ದಾಳಿಯಲ್ಲಿ ಕಲೆ ಹಾಕಿದರೆ, ಟ್ಯಾಕಲ್‌ನಲ್ಲಿ 11 ಅಂಕಗಳನ್ನು ಸೇರಿಸಿತು. ಅಲ್ಲದೆ ಕೊನೆಯ 20 ನಿಮಿಷದಲ್ಲಿ ಬೆಂಗಳೂರು ಮೂರು ಬಾರಿ ಆಲೌಟ್ ಮಾಡಿತು.

ಭರವಸೆಯ ಆಟಗಾರ ಅಕ್ಷಿತ್ ದಾಳಿಯಲ್ಲಿ 9, ಸುರ್ಜಿತ್ ಸಿಂಗ್ ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ತೆಲುಗು ತಂಡದ ಪರ ಪವನ್ ಶೆರಾವತ್ 7 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
ಪಾಟ್ನಾಗೆ ರೋಚಕ ಜಯ
ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 34-31ರಿಂದ ಯು.ಪಿ ಯೋಧಾಸ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಪಾಟ್ನಾ ಪೈರೇಟ್ಸ್ ಆಡಿದ 14 ಪಂದ್ಯಗಳಲ್ಲಿ 6 ಜಯ, 7 ಸೋಲು, 1 ಡ್ರಾ ಸಾಧಿಸಿದ್ದು, 37 ಅಂಕಗಳನ್ನು ಕಲೆ ಹಾಕಿತು. ಯುಪಿ ತಂಡ ಈ ಸೋಲಿನಿಂದಿಗೆ ಟೂರ್ನಿಯಲ್ಲಿ 10ನೇ ಸೋಲು ಕಂಡಿದ್ದು 11ನೇ ಸ್ಥಾನದಲ್ಲಿದೆ. ಪಾಟ್ನಾ ಪರ ಸಚಿನ್, ಮಂಜೀತ್ ತಲಾ ಆರು ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications