For Quick Alerts
ALLOW NOTIFICATIONS  
For Daily Alerts

Pro Kabaddi: ಬುಲ್ಸ್ ಆರ್ಭಟಕ್ಕೆ ಬೆಚ್ಚಿದ ಪಾಟ್ನಾ

ಸುರ್ಜಿತ್ ಸಿಂಗ್ ಹಾಗೂ ಸಚಿನ್ ನರ್ವಾಲ್‌ ಅವರ ಭರ್ಜರಿ ಆಟದ ನೆರವಿನಿಂದ ಬೆಂಗಳೂರು ಬುಲ್ಸ್‌f 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಐದನೇ ಗೆಲುವು ದಾಖಲಿಸಿದೆ.

ಮುಂಬೈನಲ್ಲಿ ನಡೆಯುತ್ತಿರುವ ಚರಣದಲ್ಲಿ ಬೆಂಗಳೂರು ಬುಲ್ಸ್‌ 35-33ರಿಂದ ಪಾಟ್ನಾ ಪೈರೇಟ್ಸ್‌ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಗೆಲುವಿನ ಮೂಲಕ ಬೆಂಗಳೂರು ಆಡಿದ 12 ಪಂದ್ಯಗಳಲ್ಲಿ 5 ಜಯ, 7 ಸೋಲು ಕಂಡಿದ್ದು, 31 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇನ್ನು ಪಾಟ್ನಾ ಪೈರೇಟ್ಸ್‌ 11 ಪಂದ್ಯಗಳಲ್ಲಿ 5 ಗೆಲುವು ಕಂಡಿದ್ದು 29 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

Pro Kabaddi:Bengaluru Bulls Beat Patna Pirates

ಮೊದಲಾವಧಿಯ ಆರಂಭದಲ್ಲಿ ಪಾಟ್ನಾ ಪೈರೇಟ್ಸ್‌ ಅಬ್ಬರದ ಆಟವನ್ನು ಪ್ರದರ್ಶಿಸಿತು. ಈ ಹಂತದಲ್ಲಿ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮನಾದ ಪ್ರದರ್ಶನ ನೀಡಿದ ಪಾಟ್ನಾ ಅಬ್ಬರಿಸಿತು. ಮೊದಲ 20 ನಿಮಿಷದಲ್ಲಿ ಅಂಕಗಳನ್ನು ಕಲೆ ಹಾಕುವ ಬೆಂಗಳೂರು ಬುಲ್ಸ್‌ ಆಸೆ ಮಣ್ಣು ಪಾಲಾಯಿತು. ಅವಧಿಯಲ್ಲಿ ಬೆಂಗಳೂರು ಬುಲ್ಸ್ ಅಂಗಳ ಒಮ್ಮೆ ಖಾಲಿ ಆಯಿತು. ಎದುರಾಳಿ ತಂಡದ ತಂತ್ರವನ್ನು ಅರಿತು ಆಡುವಲ್ಲಿ ಬೆಂಗಳೂರು ವಿಫಲವಾಯಿತು. ಹೀಗಾಗಿ ಅಂಕದ ಬೇಟೆಯಲ್ಲಿ ಹಿನ್ನಡೆ ಅನುಭವಿಸಿತು.

ಎರಡನೇ ಅವಧಿಯ ಆಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟದ ಪ್ರದರ್ಶನ ನೀಡಿದವು. ಆದರೆ ಈ ಅವಧಿಯಲ್ಲಿ ಎದುರಾಳಿ ತಂಡದ ತಂತ್ರವನ್ನು ಅರಿತು ಆಡಿದ ಬುಲ್ಸ್‌ ಆರ್ಭಟಿಸಿತು. ರೇಡ್‌ನಲ್ಲಿ ಸೊಗಸಾದ ದಾಳಿ ಸಂಘಟಿಸಿದ ಬುಲ್ಸ್‌ ತಂಡದ ಆಟಗಾರರು ಅಂಕಗಳನ್ನು ಹೆಚ್ಚಿಸುವಲ್ಲಿ ಶ್ರಮಿಸಿದರು. ಈ ವೇಳೆ ಬೆಂಗಳೂರು ದಾಳಿಯಲ್ಲಿ 12 ಅಂಕಗಳನ್ನು ಕಲೆ ಹಾಕಿದರೆ, ಟ್ಯಾಕಲ್‌ನಲ್ಲಿ 8 ಅಂಕ ಪೇರಿಸಿತು. ಈ ಅವಧಿಯಲ್ಲಿ ಪಾಟ್ನಾ ತಂಡವನ್ನು ಬುಲ್ಸ್ ಆಲೌಟ್ ಮಾಡಿತು.

ಬೆಂಗಳೂರು ತಂಡದ ಪರ ಸಚಿನ್ ನರ್ವಾಲ್‌ 9, ಸುರ್ಜಿತ್ ಸಿಂಗ್ 8 ಅಂಕವನ್ನು ಕಲೆ ಹಾಕಿ ಮಿಂಚಿದರು. ಪಾಟ್ನಾ ಪರ ಮಂಜೀತ್ 8 ಅಂಕ ಪೇರಿಸಿ ಮಿಂಚಿದರು.

Pro Kabaddi:Bengaluru Bulls Beat Patna Pirates

ದಬಾಂಗ್ ಬೊಂಬಾಟ ಆಟ

ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ 40-34 ರಿಂದ ಯು-ಮುಂಬಾ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಿತು. ದಬಾಂಗ್ ತಂಡ ಆಡಿದ 11 ಪಂದ್ಯಗಳಲ್ಲಿ 7 ಜಯ, 3 ಸೋಲು, 1 ಡ್ರಾ ಸಾಧಿಸಿದ್ದು 40 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಮುಂಬಾ ತಂಡ ಈ ಪಂದ್ಯದಲ್ಲಿ ಸೋಲು ಕಂಡಿದ್ದು 32 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಹೊಂದಿದೆ.

ದಬಾಂಗ್ ತಂಡದ ಪರ ಅಶು ಮಲಿಕ್ ಒಟ್ಟು 23 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 10 ಟಚ್ ಪಾಯಿಂಟ್ ಹಾಗೂ 3 ಬೋನಸ್ ಅಂಕವನ್ನು ಕಲೆ ಹಾಕಿದರು. ಇನ್ನು ಮಂಜಿತ್ 6 ಅಂಕ ಪಡೆದರು. ಪರಾಜಿತ್ ತಂಡದ ಪರ ಅಮೀರ್ಮೊಹಮ್ಮದ್ ಸೂಪರ್ 10 ಸಾಧನೆ ಮಾಡಿ ಮಿಂಚಿದರು.

Story first published: Tuesday, January 9, 2024, 6:01 [IST]
Other articles published on Jan 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+