ಪ್ರೊ ಕಬಡ್ಡಿ: ಫೈನಲ್ ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್
ಮುಂಬೈ, ಆಗಸ್ಟ್. 22: ಎರಡನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಫೈನಲ್ ಗೆ ಬೆಂಗಳೂರು ಬುಲ್ಸ್ ಲಗ್ಗೆ ಇಟ್ಟಿದೆ. ಬಲಿಷ್ಠ ತೆಲುಗು ಟೈಟಾನ್ಸ್ ತಂಡವನ್ನು ಪ್ರೊಕಬಡ್ಡಿ ರೋಚಕ 1 ಅಂಕಗಳಿಂದ ಸೋಲಿಸಿ ಬೆಂಗಳೂರುತಂಡ ಫೈನಲ್ ಪ್ರವೇಶಿಸಿದೆ.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನುಸೋಲಿಸಿದ ಮುಂಬೈ ತಂಡ ಫೈನಲ್‌ಗೇರಿದೆ. ಆಗಸ್ಟ್ 23ರಂದು ಬೆಂಗಳೂರು-ಮುಂಬೈ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಬೆಂಗಳೂರು ಮತ್ತು ಟೈಟಾನ್ಸ್ ಪಂದ್ಯ ರೋಚಕವಾಗಿದ್ದರೆ, ಮುಂಬೈ-ಪಾಟ್ನಾ ಪಂದ್ಯ ಏಕಪಕ್ಷೀಯವಾಗಿತ್ತು. ಮುಂಬೈ ಪಂದ್ಯವನ್ನು ವೀಕ್ಷಿಸಲು ಆರ್ ಬಿಐ ಗವರ್ನರ್ ರಘುರಾಂ ರಾಜನ್ ಸಹ ಆಗಮಿಸಿದ್ದರು.

ಕೊನೆ ಕ್ಷಣದಲ್ಲಿ ಬಿರುಸಿನ ಆಟ
ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದ ಬೆಂಗಳೂರಿಗೆ ತೆಲಗು ತಂಡದವರು ಆಘಾತ ನೀಡಿದರು. ಆರಂಭದಲ್ಲಿ ಬೆಂಗಳೂರು ಸುಲಭ ಗೆಲುವು ಸಾಧಿಸುತ್ತದೆ ಎಂದು ಅಂದಾಜಿಸ ಲಾಗಿತ್ತು. ಆದರೆ ತೆಲುಗು ಟೈಟಾನ್ಸ್ ಕೊನೆ ಕ್ಷಣದಲ್ಲಿ ಬಿರುಸಿನ ಆಟ ಪ್ರದರ್ಶಿಸಿತು. ಅಂತಿಮವಾಗಿ ಪಂದ್ಯ 38-39ಅಂಕಗಳಿಂದ ಕೊನೆಗೊಂಡು ಬೆಂಗಳೂರಿಗೆ ಒಂದು ಅಂಕದ ಜಯ ಸಿಕ್ಕಿತು.

ಈ ಬಾರಿ ಫೈನಲ್ ಗೆ
ಮೊದಲ ಆವೃತ್ತಿಯಲ್ಲಿ ಬೆಂಗಳೂರು ತಂಡ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು.. ಆದರೆ ಈ ಸೆಮಿಫೈನಲ್‌ನಲ್ಲಿ ಬೆಂಗಳೂರು ಎಚ್ಚರಿಕೆ ಆಟ ಪ್ರದರ್ಶಿಸಿ ಫೈನಲ್ ತಲುಪಿ ಪ್ರಶಸ್ತಿ ಕನಸು ಕಾಣುತ್ತಿದೆ.

ಪಾಟ್ನಾಕ್ಕೆ ಮುಂಬೈ ಗುದ್ದು
ಮುಂಬೈ ಪ್ರೊ ಕಬಡ್ಡಿ ಲೀಗ್‌ನ 2ನೇ ಸೆಮಿಫೈನಲ್‌ನಲ್ಲಿ ಸುಲಭವಾಗಿ ಗೆದ್ದ ಮುಂಬೈ ತಂಡ ಫೈನಲ್‌ಗೇರಿತು. ಎದುರಾಳಿ ಪಾಟ್ನಾ ವಿರುದ್ಧ ಯಾವ ಹಂತದಲ್ಲೂ ಆತಂಕಕಕ್ಕೆ ಒಳಗಾಗದೇ 35-18 ಅಂಕಗಳ ಜಯ ಸಾಧಿಸಿತು.

ರಘುರಾಂ ರಾಜನ್ ಉಪಸ್ಥಿತಿ
ಬೆಂಗಳೂರು ಮತ್ತು ಟೈಟಾನ್ಸ್ ಪಂದ್ಯ ರೋಚಕವಾಗಿದ್ದರೆ, ಮುಂಬೈ-ಪಾಟ್ನಾ ಪಂದ್ಯ ಏಕಪಕ್ಷೀಯವಾಗಿತ್ತು. ಮುಂಬೈ ಪಂದ್ಯವನ್ನು ವೀಕ್ಷಿಸಲು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಸಹ ಆಗಮಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications