Pro Kabaddi: ಬುಲ್ಸ್ ಗುದ್ದಾಟದ ಹಿನ್ನೋಟ: ಈ ಬಾರಿ ಬೆಂಗಳೂರು ಪ್ರದರ್ಶಿಸುತ್ತಾ ಚಾಂಪಿಯನ್ ಆಟ?
ಪ್ರೊ ಕಬಡ್ಡಿ ಲೀಗ್‌ಗಳು ಅಕ್ಟೋಬರ್‌ನಲ್ಲಿ ಆರಂಭವಾಗಲಿವೆ. ಈ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲು ಈಗಾಗಲೇ ತಂಡಗಳು, ಅಖಾಡದಲ್ಲಿ ತಯಾರಿ ನಡೆಸಿವೆ. ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ತಂಡಗಳು ಮತ್ತೊಮ್ಮೆ ಚಾಂಪಿಯನ್ ಆಗುವ ಕನಸು ಕಾಣುತ್ತಿವೆ. ಬೆಂಗಳೂರು ಬುಲ್ಸ್ ಸಹ ಎರಡನೇ ಬಾರಿಗೆ ಕಬಡ್ಡಿ ಲೀಗ್ ಪ್ರಶಸ್ತಿಯನ್ನು ಎತ್ತುವ ಹಂಬಲ ಹೊಂದಿದೆ.
ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೊದಲಿನಿಂದಲೂ ಆಡುತ್ತಿರುವ ತಂಡಗಳಲ್ಲಿ ಬೆಂಗಳೂರು ಸಹ ಒಂದು. ಐಪಿಎಲ್‌ನಲ್ಲಿ ಹೇಗೆ ಸ್ಟಾರ್ ಆಟಗಾರರನ್ನು ಫ್ರಾಂಚೈಸಿ ಪಿಕ್ ಮಾಡುತ್ತದೋ ಹಾಗೇ, ಬುಲ್ಸ್ ಸಹ ಖ್ಯಾತ ನಾಮರಿಗೆ ಮೊದಲಿನಿಂದಲೂ ಸಹ ರೆಡ್ ಕಾರ್ಪೆಟ್ ಹಾಕುತ್ತಲೇ ಬರುತ್ತಿದೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಬುಲ್ಸ್ ಸಹ ಒಂದು.

ಪ್ರೊ ಕಬಡ್ಡಿ ಲೀಗ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಬೆಂಗಳೂರು ಬುಲ್ಸ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಬುಲ್ಸ್ ಈ ರೀತಿಯ ಪ್ರದರ್ಶನ ನೀಡುವುದರ ಹಿಂದೆ ತಂಡದ ಸ್ಟಾರ್ ಆಟಗಾರರ ಕಾಣಿಕೆ ಬಹಳ ಮುಖ್ಯ. ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಹಲವು ಸ್ಟಾರ್ ಆಟಗಾರರು ಬೆಂಗಳೂರು ತಂಡದ, ಛಾವಣಿಯಲ್ಲಿ ಅಭ್ಯಾಸ ಮಾಡಿದವರೇ.
ಈ ಬಾರಿ 11ನೇ ಆವೃತ್ತಿಯ ಕಬಡ್ಡಿ ಲೀಗ್ ನಡೆಯಲಿದೆ. ಒಮ್ಮೆ ಹಿಂತಿರುಗಿ ನೋಡಿದಾಗ ಬುಲ್ಸ್ ಕಬಡ್ಡಿ ಲಿಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ವರ್ಷದಿಂದ ವರ್ಷಕ್ಕೆ ತಮ್ಮ ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿರುವ ಬುಲ್ಸ್, ಹಲವು ಅಭಿಮಾನಿಗಳು ಹಾಟ್ ಫೆವರಿಟ್ ತಂಡ.
ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಇತಿಹಾಸದಲ್ಲಿ ಒಟ್ಟು 192 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು, 91ರಲ್ಲಿ ಜಯ, 90 ರಲ್ಲಿ ಸೋಲು, 11 ಪಂದ್ಯಗಳಲ್ಲಿ ಡ್ರಾ ಸಾಧನೆ ಮಾಡಿದೆ. ಅಲ್ಲದೆ ಗೆಲುವಿನ ಶೇಕಡಾ ಲೆಕ್ಕಾಚಾರ ಸಹ ಬೇರೆ ತಂಡಗಳಿಗೆ ಹೋಲಿಸಿದರೆ ಚೆನ್ನಾಗಿದೆ.

ಆರಂಭದಲ್ಲಿ ಅಬ್ಬರ
ಬೆಂಗಳೂರು ಬುಲ್ಸ್ ಆರಂಭಿಕ ಎರಡೂ ಲೀಗ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಸಫಲವಾದವು. ಆದರೆ ಪ್ರಶಸ್ತಿ ಮಾತ್ರ ಗೆಲ್ಲಲಿಲ್ಲ. ಬೆಂಗಳೂರು ಮೊದಲ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಎರಡನೇ ಅವೃತ್ತಿಯ ಬುಲ್ಸ್ ತಂಡ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಮುಂಬಾ ವಿರುದ್ಧ ಸೋಲು ಕಂಡು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು.
ಮೂರು ಆವೃತ್ತಿಗಳಲ್ಲಿ ನಿರಾಸೆ
ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿಯಿಂದ ಕೊಂಚದರಲ್ಲಿ ಹಿಂದೆ ಸರಿದಿದ್ದ ಬೆಂಗಳೂರು ಬುಲ್ಸ್, ಸತತ ಮೂರು ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಯಿತು. ಐದನೇ ಆವೃತ್ತಿಯಲ್ಲಿ ಮಾತ್ರ ಪ್ಲೇ ಆಫ್‌ಗೆ ಪ್ರವೇಶ ಪಡೆದಿತ್ತು.
ಚೊಚ್ಚಲ ಪ್ರಶಸ್ತಿ
ಆರನೇ ಆವೃತ್ತಿಯ ಐಪಿಎಲ್‌ನಲ್ಲಿ ಆವೃತ್ತಿಯಲ್ಲಿ ಲೀಗ್ ಹಂತದಿಂದಲೇ ಮನಮೋಹಕ ಪ್ರದರ್ಶನ ನೀಡಿದ್ದ ಬೆಂಗಳೂರು ಬುಲ್ಸ್, ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸುವ ಕೆಲಸ ಮಾಡಿತ್ತು. ಫೈನಲ್ ಪಂದ್ಯದಲ್ಲಿ ಬುಲ್ಸ್, ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿತು.
ಬೆಂಗಳೂರು ಬುಲ್ಸ್ ಮುಂದಿನ ನಾಲ್ಕು ಆವೃತ್ತಿಗಳಲ್ಲಿ ನಿರಾಸೆಯ ದೋಣಿಯಲ್ಲಿ ಪ್ರಯಾಣ ಬೆಳೆಸಿದೆ. ಈ ಬಾರಿ ಸ್ಟಾರ್ ಆಟಗಾರರನ್ನು ಹಾಕಿಕೊಂಡಿರುವ ಬುಲ್ಸ್, ಎರಡನೇ ಬಾರಿ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications