For Quick Alerts
ALLOW NOTIFICATIONS  
For Daily Alerts

Pro Kabaddi: ಬುಲ್ಸ್‌ ತಂಡದ ಪ್ಲೇಆಫ್‌ ಕನಸು ಭಗ್ನ: ಗುಜರಾತ್‌ ಮುಂದಿನ ಹಂತಕ್ಕೆ ಪ್ರವೇಶ

ರೇಡಿಂಗ್‌ ಮತ್ತು ಟ್ಯಾಕಲ್‌ ಎರಡೂ ವಿಭಾಗಗಳಲ್ಲೂ ನೀರಸ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 116ನೇ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಸೋಲು ಕಂಡಿತು.

ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಬುಲ್ಸ್‌ 28-50 ಅಂಕಗಳ ಅಂತರದಿಂದ ಗುಜರಾತ್‌ಗೆ ಸೋಲು ಕಂಡಿತು.

Pro Kabaddi: Bulls playoff dream dashed: Gujarat enter next stage

ಇದರೊಂದಿಗೆ 11ನೇ ಸೋಲು ಕಂಡಿರುವ ಬುಲ್ಸ್‌ ತಂಡ ತನ್ನ ಪ್ಲೇಆಫ್‌ ಹಂತದಿಂದ ಬಹುತೇಕ ದೂರ ಸರಿದಿದೆ. ಆದರೆ 12ನೇ ಗೆಲುವು ಸಾಧಿಸಿದ ಗುಜರಾತ್‌ ಜಯಂಟ್ಸ್‌ ಒಟ್ಟಾರೆ 65 ಅಂಕಗಳೊಂದಿಗೆ ಪ್ಲೇಆಫ್‌ ಹಂತಕ್ಕೆ ಮತ್ತಷ್ಟು ಹತ್ತಿರಗೊಂಡಿದೆ.

ಪ್ರಸ್ತುತ 48 ಅಂಕಗಳನ್ನು ಹೊಂದಿರುವ ಬುಲ್ಸ್‌ ಲೀಗ್‌ ಹಂತದಲ್ಲಿಉಳಿದಿರುವ ತನ್ನ ಇನ್ನೆರಡು ಪಂದ್ಯಗಳಲ್ಲಿಗೆದ್ದರೂ ಪ್ಲೇಆಫ್‌ ಹಂತ ಪ್ರವೇಶಿಸಲು ಅಸಾಧ್ಯವಾಗಿರುವ ಕಾರಣ ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಾಂತಾಗಿದೆ.

ಪಂದ್ಯ ಕೊನೆಗೊಳ್ಳಲು ಹತ್ತು ನಿಮಿಷಗಳ ಆಟ ಬಾಕಿ ಇರುವಾಗ 36-15ರಲ್ಲಿಅಂತರ ಕಾಯ್ದುಕೊಂಡ ಜೈಂಟ್ಸ್‌ ಆಟಗಾರರು, ಪಂದ್ಯ ಮುಕ್ತಾಯಕ್ಕೂ ಮುನ್ನವೇ ಗೆಲುವಿನ ಸುಳಿವು ನೀಡಿದರು. ಪಂದ್ಯದ ಆರಂಭದಿಂದ ಕೊನೆಯವರೆಗೂ ಮಿಂಚಿನ ಸಂಚಲನ ಮೂಡಿಸಿದ ಪರ್ತೀಕ್‌ ದಹಿಯಾ 13 ಅಂಕಗಳನ್ನು ಗಳಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಸ್ಟಾರ್‌ ಡಿಫೆಂಡರ್‌ ಫಜಲ್‌ ಹತ್ರಾಚಲಿ ಮತ್ತು ನಿತಿನ್‌ ಕ್ರಮವಾಗಿ 6 ಮತ್ತು 7 ಅಂಕಗಳ ಕೊಡುಗೆ ನೀಡಿದರು.

ಬುಲ್ಸ್‌ ಪರ ಯಾರೊಬ್ಬರು ಸೂಪರ್‌ 10 ಅಂಕಗಳಿರಲಿ ಕನಿಷ್ಠ ವೈಯಕ್ತಿಕ 5 ಅಂಕಗಳನ್ನು ದಾಟಲು ಸಾಧ್ಯವಾಗಲಿಲ್ಲ. ಪಂದ್ಯದ 35ನೇ ನಿಮಿಷದಲ್ಲಿ41-19ರಲ್ಲಿ ಹಿಡಿತ ಸಾಧಿಸಿದ ಜೈಂಟ್ಸ್‌, ಮುಕ್ತಾಯದ ವೇಳೆಗೆ ಗೆಲುವಿನ ಅಂತರವನ್ನು 22 ಅಂಕಗಳಿಗೆ ಹಿಗ್ಗಿಸಿಕೊಂಡಿತು.

ಹಿಂದಿನ ಸೋಲಿನಿಂದ ಹೊರಬರುವ ಹುಮ್ಮಸ್ಸಿನಲ್ಲಿ ಕಣಕ್ಕಿಳಿದ ಬುಲ್ಸ್‌ ಆಟಗಾರರು ಗುಜರಾತ್‌ ತಂಡದ ಅಬ್ಬರಕ್ಕೆ ಆರಂಭದಲ್ಲಿ ಬೆದರಿದರು. 8ನೇ ನಿಮಿಷದಲ್ಲಿಆಲೌಟ್‌ ಬಲೆಗೆ ಸಿಲುಕಿದ ಬೆಂಗಳೂರು ತಂಡ ವಿರಾಮದವರೆಗೂ ಪುಟಿದೇಳುವ ಯಾವುದೇ ಪ್ರಯತ್ನ ನಡೆಸಲಿಲ್ಲ.

ಬುಲ್ಸ್ ತಂಡದ ನ್ಯೂನತೆಗಳನ್ನು ಸಮರ್ಥವಾಗಿ ಬಳಸಿಕೊಂಡ ಗುಜರಾತ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅದರಲ್ಲೂ ಪರ್ತೀಕ್‌ ಗುಜರಾತ್‌ ತಂಡದ ಮೇಲುಗೈನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಬೆಂಗಳೂರು ಬುಲ್ಸ್‌ ತನ್ನ ಮುಂದಿನ ಪಂದ್ಯದಲ್ಲಿ ಫೆಬ್ರವರಿ 18ರಂದು ದಬಾಂಗ್‌ ದಿಲ್ಲಿತಂಡದ ಸವಾಲು ಎದುರಿಸಲಿದೆ.

Pro Kabaddi: Bulls playoff dream dashed: Gujarat enter next stage

ಪುಣೇರಿಗೆ ಅಗ್ರ ಸ್ಥಾನ

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್‌ 56-29 ಅಂಕಗಳೊಂದಿಗೆ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಪುಣೇರಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು.

ಆಡಿದ 19 ಪಂದ್ಯದಲ್ಲಿ 14 ಜಯ, 2 ಸೋಲು, 3 ಡ್ರಾ ಸಾಧಿಸಿದ್ದು, 81 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ತಮಿಳು ತಲೈವಾಸ್ 12ನೇ ಸೋಲಿಗೆ ಶರಣಾಯಿತು.

Story first published: Monday, February 12, 2024, 7:02 [IST]
Other articles published on Feb 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+