Pro Kabaddi 2025: ದಬಾಂಗ್ ದೆಹಲಿ, ಪೈರೇಟ್ಸ್‌ಗೆ ಜಯ
ಚೆನ್ನೈ: 12ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ದಬಾಂಗ್ ದೆಹಲಿ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಜಯ ದಾಖಲಿಸಿವೆ. ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ 29-26 ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು, ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 36-28 ರಿಂದ ಯುಪಿ ಯೋಧಾಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ದಬಾಂಗ್ ದೆಹಲಿ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಪ್ರಸಕ್ತ ಆವೃತ್ತಿಯ 67ನೇ ಪಂದ್ಯದಲ್ಲಿ ಜೈಪುರ ಹಾಗೂ ದಬಾಂಗ್ ದೆಹಲಿ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದ ಆರಂಭದಲ್ಲಿ ಜೈಪುರ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಪಂದ್ಯದ ರೋಚಕತೆ ಹೆಚ್ಚಿಸಿತು. ಈ ಅವಧಿಯಲ್ಲಿ ಜೈಪುರ 13-12 ಅಂಕಗಳಿಂದ ಮುನ್ನಡೆ ಸಾಧಿಸಿತು. ದಬಾಂಗ್ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿದರೆ, ಟ್ಯಾಕಲ್‌ನಲ್ಲಿ ಜೈಪುರ ಅಬ್ಬರ ನಡೆಸಿದೆ.

ಎರಡನೇ ಅವಧಿಯ ಆಟದಲ್ಲಿ ದಬಾಂಗ್ ಪುಟಿದೇಳುವ ಸೂಚನೆ ನೀಡಿತು. ಈ ಅವಧಿಯ ಆಟದಲ್ಲಿ ರಕ್ಷಣೆ ಹಾಗೂ ದಾಳಿಯಲ್ಲಿ ದಬಾಂಗ್ ತಂಡದ ಆಟಗಾರರು ಭರ್ಜರಿ ಪ್ರದರ್ಶನ ನೀಡಿದರು. ಈ ವೇಳೆ ಮೊದಲಾವಧಿಯಲ್ಲಿ ಮಾಡಿದ್ದ ತಪ್ಪನ್ನು ಮೆಟ್ಟಿನಿಂತು ಆಡಿತು. ಈ ಅವಧಿಯಲ್ಲಿ ದಬಾಂಗ್ ಒಮ್ಮೆ ಜೈಪುರ ತಂಡವನ್ನು ಅಂಗಳ ಖಾಲಿ ಮಾಡಿತು. ಒಟ್ಟಾರೆ ಈ ಪಂದ್ಯದಲ್ಲಿ ಉಭಯ ತಂಡಗಳ ರಕ್ಷಣಾ ಆಟ ನಿಜಕ್ಕೂ ಅಭಿಮಾನಿಗಳ ಮನ ಗೆದ್ದಿತು. ಈ ಅವಧಿಯಲ್ಲಿ ದಬಾಂಗ್ 17-13 ಅಂಕಗಳಿಂದ ಮುನ್ನಡೆ ಸಾಧಿಸಿ ಜಯ ಸಾಧಿಸಿತು. ದಬಾಂಗ್ ತಂಡದ ಪರ ಆಶು ಮಲಿಕ್ 8, ರಕ್ಷಣಾ ಆಟಗಾರ ಸಂದೀಪ್ 7 ಅಂಕ ಸೇರಿಸಿದರು.
ಪಟ್ನಾಗೆ ಜಯ
ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಸೊಗಸಾದ ಆಟವನ್ನು ಆಡಿತು. ಈ ವೇಳೆ ಯುಪಿ ಯೋಧಾಸ್ ತಂತ್ರವನ್ನು ಅರಿತು ಪಾಟ್ನಾ ಆಟವನ್ನು ಆಡಿತು. ಈ ವೇಳೆ ಉಭಯ ತಂಡಗಳು ದಾಳಿಯಲ್ಲಿ ತಲಾ 10 ಅಂಕವನ್ನು ಕಲೆ ಹಾಕಿತು.

ಎರಡನೇ ಅವಧಿಯ ಆಟದಲ್ಲಿ ಪಾಟ್ನಾ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಉತ್ತಮ ಆಟವನ್ನು ಆಡಿತು. ಪಾಟ್ನಾ 20-14 ಅಂಕಗಳಿಂದ ಮುನ್ನಡೆ ಸಾಧಿಸಿತು. ಅಲ್ಲದೆ ಈ ವೇಳೆ ಯುಪಿ ತಂಡವನ್ನು ಆಲೌಟ್ ಮಾಡಿತು. ಪಾಟ್ನಾ ತಂಡದ ಪರ ಅಯಾನ್ 21 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 15 ಅಂಕ ಕಲೆ ಹಾಕಿದರು. ಪರಾಜಿತ ತಂಡದ ಪರ ಕನ್ನಡಿಗ ಗಗನ್ ಗೌಡ್ 10 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು. ಪಾಟ್ನಾ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ. ಈ ಮೂಲಕ ಪಾಟ್ನಾ 6 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಪಡೆದರೆ, ಯುಪಿ ಸೋಲು ಕಂಡರೂ 9ನೇ ಸ್ಥಾನ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications