For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: ನವೀನ್ ಅಬ್ಬರ, ಸೆಮಿಫೈನಲ್ ಪ್ರವೇಶಿಸಿದ ದಬಾಂಗ್ ಡೆಲ್ಲಿ

Pro Kabaddi: Dabang Delhi beat Puneri Paltan to secure semifinal spot

ಪಂಚಕುಲ, ಸೆಪ್ಟೆಂಬರ್ 29: ಟಾಪ್ ರೈಡರ್ ನವೀನ್ ಕುಮಾರ್ ಅಬ್ಬರದಾಟದೊಂದಿಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಸೀಸನ್‌ನ ಮುಂಚೂಣಿ ತಂಡ ದಬಾಂಗ್ ಡೆಲ್ಲಿ ಕೆಸಿ ಸೆಮಿಫೈನಲ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ಭಾನುವಾರ (ಸೆಪ್ಟೆಂಬರ್ 29) ನಡೆದ 113ನೇ ಪಂದ್ಯದಲ್ಲಿ ಪುಣೆ ಪಲ್ಟಾನ್ ವಿರುದ್ಧ 60-40ರ ದಾಖಲೆ ಜಯದೊಂದಿಗೆ ಡೆಲ್ಲಿ ಮುನ್ನಡೆ ಸಾಧಿಸಿದೆ.

ಪ್ರೊ ಕಬಡ್ಡಿ ಲೀಗ್ ಪಾಯಿಂಟ್ ಟೇಬಲ್, ಗ್ಯಾಲರಿ, ವೇಳಾಪಟ್ಟಿ ಇತ್ಯಾದಿ ಇಲ್ಲಿದೆ

ಹರ್ಯಾಣದ ಪಂಚಕುಲದಲ್ಲಿರುವ ತೌ ದೇವಿಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ನವೀನ್ 19 (15 ರೈಡ್, 4 ಬೋನಸ್) ಪಾಯಿಂಟ್‌ ಸೇರಿಸಿ ಸ್ಟಾರ್ ಆಗಿ ಮೆರೆದರು. ಇದು ನವೀನ್‌ಗೆ ಲಭಿಸಿದ ಸತತ 17ನೇ ಬಾರಿಯ ಸೂಪರ್ 10 ಅಂಕ. ಅಲ್ಲದೆ ನವೀನ್ ಈ ಪಂದ್ಯದಲ್ಲಿ ವೇಗದಲ್ಲಿ 400 ರೈಡಿಂಗ್ ಪಾಯಿಂಟ್ ಕಲೆ ಹಾಕಿದ ಆಟಗಾರನಾಗಿಯೂ ಮಿಂಚಿದರು.

19ರ ಹರೆಯದ ನವೀನ್ ಎಕ್ಸ್‌ಪ್ರೆಸ್ ಆಕರ್ಷಕ ಆಟದ ಜೊತೆಗೆ ಡೆಲ್ಲಿಯಿಂದ ಚಂದ್ರನ್ ರಂಜಿತ್ 12 (9 ರೈಡ್, 3 ಬೋನಸ್), ರವೀಂದರ್ ಪಾಹಲ್ 6, ಅನಿಲ್ ಕುಮಾರ್ 3, ವಿಜಯ್ 2, ಅಮನ್ ಕಡಿಯಾನ್ 2, ವಿಶಾಲ್ ಮಾನೆ 1, ಜೋಗೀಂದರ್ ಸಿಂಗ್ ನರ್ವಾಲ್ 1, ಸುಮಿತ್ 1 ಅಂಕ ಸೇರಿಸಿದರು.

ಪುಣೇರಿ ಪಲ್ಟಾನ್‌ನಿಂದ ನಿತಿನ್ ತೋಮರ್ 7, ಇಮಾದ್ 7, ಜಾಧವ್ ಬಾಲಸಾಹೇಬ್ 6, ಮನ್ಜೀತ್ 5, ಅಮಿತ್ ಕುಮಾರ್ 5, ಸುಶಾಂತ್ ಸೇಲ್ 4, ಸಂದೀಪ್ 2, ಅಮಿತ್ ಕುಮಾರ್ 2, ದರ್ಶನ್ ಕಡಿಯಾನ್ 1, ಗಿರೀಶ್ ಎರ್ನಾಕ್ 1 ಅಂಕ ಸೇರಿಸಿ ಎದುರಾಳಿಗೆ ಕೊಂಚ ಪೈಪೋಟಿ ನೀಡಿದರು.

ಈ ಪಂದ್ಯದ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಹರ್ಯಾಣ ಸ್ಟೀಲರ್ಸ್, ಬೆಂಗಳೂರು ಬುಲ್ಸ್ ಮತ್ತು ಯುಪಿ ಯೋಧ ಮೊದಲ 5 ಸ್ಥಾನಗಳಲ್ಲಿವೆ. ಇದರಲ್ಲಿ ಡೆಲ್ಲಿ, ಬೆಂಗಾಲ್, ಹರ್ಯಾಣ ಈಗಾಗಲೇ ಕ್ವಾಲಿಫೈಯರ್‌ಗೆ ಪ್ರವೇಶಿಸಿವೆ.

Story first published: Sunday, September 29, 2019, 22:31 [IST]
Other articles published on Sep 29, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+