ಪ್ರೊ ಕಬಡ್ಡಿ: ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅಬ್ಬರ: ದಬಾಂಗ್ ಡೆಲ್ಲಿ, ಯೋಧಾಸ್‌ಗೂ ಗೆಲುವು

2022ರ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ಗೆ ಅಧಿಕೃತ ಚಾಲನೆ ದೊರೆತಿದ್ದು ಮೊದಲ ದಿನ ಮೂರು ಪಂದ್ಯಗಳು ನಡೆದಿದೆ. ಆರಂಭಿಕ ಹಂತದ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯುತ್ತಿದ್ದು ಮೊದಲ ದಿನದ ಎರಡನೇ ಸೆಣೆಸಾಟದಲ್ಲಿ ಬೆಂಗಳೂರು ತಂಡ ಕಣಕ್ಕಿಳಿದಿತ್ತು. ತೆಲುಗು ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಆಟವನ್ನು ಪ್ರದರ್ಶಿಸಿದ ಬೆಂಗಳುರು ಬುಲ್ಸ್ ತಂಡ ಪಂದ್ಯವನ್ನು 34-29 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ಶುಭಾರಂಭವನ್ನು ಮಾಡಿದೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ಆಯೋಜನೆಯಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಯು ಮುಂಬಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದು ಭರ್ಜರಿಯಾಗಿ ಗೆಲುವು ಸಾಧಿಸಿದೆ. ನಾಯಕ ನವೀನ್ ಕುಮಾರ್ ಈ ಬಾರಿಯ ಆವೃತ್ತಿಯಲ್ಲಿಯೂ ಅದ್ಭುತ ಫಾರ್ಮ್ ಮುಂದಿವರಿಸಿದ್ದು ಇಂದಿನ ಪಂದ್ಯದಲ್ಲಿ 13 ಅಂಕಗಳನ್ನು ಗಳಿಸಿದ್ದಾರೆ.

ಮಂಕಾದ ಯು ಮುಂಬಾ
ಯು ಮುಂಬಾ ತಂಡ ಮೊದಲ ಪಂದ್ಯದಲ್ಲಿಯೇ ಮಂಕಾದಂತೆ ಕಂಡುಬಂದಿದೆ. ಸುರಿಂದರ್ ಸಿಂಗ್ ನಾಯಕತ್ವದ ಯು ಮುಂಬಾ ಪರವಾಗಿ ಆಶಿಶ್ 7 ಅಂಕಗಳನ್ನು ಗಳಿಸಿ ತಂಡದ ಪರ ಹೆಚ್ಚು ಅಂಕಗಳಿಸಿದ ಆಟಗಾರ ಎನಿಸಿದ್ದಾರೆ. ಅಂತಿಮವಾಗಿ ಈ ಪಂದ್ಯದಲ್ಲಿ ಡೆಲ್ಲಿ ದಬಾಂಗ್ ತಂಡ 41-27 ಅಂಕಗಳೊಂದಿಗೆ ಗೆಲುವು ಸಾಧಿಸಿದೆ.

ಅಬ್ಬರಿಸಿದ ಬೆಂಗಳೂರು ಬುಲ್ಸ್
ಇನ್ನು ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟನ್ಸ್ ತಂಡಗಳು ಮುಖಾಮುಖಿಯಾಗಿದೆ. ಮಹೇಂದರ್ ಸಿಂಗ್ ನಾಯಕತ್ವದಲ್ಲಿ ಕಣಕ್ಕಿಳಿದ ಬುಲ್ಸ್ ತಂಡ ಇಂದು ಸಾಂಗಿಕ ಪ್ರದರ್ಶನ ನೀಡಿತು. ನೀರಜ್ ನರ್ವಾಲ್ 7 ಅಂಕಗಳನ್ನು ಗಳಿಸಿದರೆ ವಿಕಾಶ್ ಕಂಡೀಲ 5 ಅಂಕಗಳನ್ನು ಗಳಿಸಿದರು.ಸೌರಬ್ ನಂದಾಲ್ ಡಿಫೆಂಡರ್ ಆಗಿ ನಾಲ್ಕು ಅಂಕಗಳನ್ನು ತಂಡದ ಪರವಾಗಿ ಗಳಿಸಿದರು. ಇನ್ನು ಎದುರಾಳಿ ಟೈಟನ್ಸ್ ತಂಡದ ಪರವಾಗಿ ವಿನಯ್ ಹಾಗೂ ರಜ್ನೀಶ್ ತಲಾ 7 ಅಂಕಗಳನ್ನು ತಂಡಕ್ಕೆ ನೀಡಿದರು. ಅಂತಿಮವಾಗಿ ಈ ಪಂದ್ಯವನ್ನು ಬೆಂಗಳುರು ಬುಲ್ಸ್ ತಂಡ 34-29 ಅಂತರದಿಂದ ಗೆಲ್ಲುವಲ್ಲಿ ಯಶಸ್ವುಯಾಯಿತು. ಈ ಮೂಲಕ ಬೆಂಗಳೂರು ಬುಲ್ಸ್ ತಂಡ ಶುಭಾರಂಭ ಮಾಡಿದೆ.

ಯುಪಿ ಯೋಧಾಸ್‌ಗೆ ರೋಚಕ ಗೆಲುವು
ಇನ್ನು ಇಂದಿನ ಮೂರನೇ ಪಂದ್ಯ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಯುಪಿ ಯೋಧಾಸ್ ಮಧ್ಯೆ ನಡೆಯಿತು. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅಂತಿಮವಾಗಿ ಯುಪಿ ಯೋಧಾಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಯೋಧಾಸ್ ಪರವಾಗಿ ಸುರೇಂದರ್ ಗಿಲ್ 9 ಅಂಕಗಳನ್ನು ಗಳಿಸಿದರೆ ಪರ್ದೀಪ್ ನರ್ವಾಲ್ 7 ಅಂಕಗಳನ್ನು ಗಳಿಸಿದರು. ಪ್ಯಾಂಥರ್ಸ್ ತಂಡದ ಪರವಾಗಿ ರೈಡರ್ ಆಗಿ ಅರ್ಜುನ್ ದೇಶ್ವಾಲ್ ಉತ್ತಮ ಪ್ರದರ್ಶನ ನೀಡಿದ್ದು 8 ಅಂಕಗಳನ್ನು ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications