For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ತಮಿಳು ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಭರ್ಜರಿ ಗೆಲುವು

Pro kabaddi: day 3 Highlights, Bengaluru Bulls win by 38-30 against Tamil Thalaivas

ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೋಲು ಅನುಭವಿಸಿದ್ದ ಬೆಂಗಳೂರು ಬುಲ್ಸ್ ತಂಡ ಅದ್ಭುತ ತನ್ನ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನ ಖಾತೆ ತೆರೆದಿದೆ. ತಮಿಳು ತಲೈವಾಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ತಮಿಳು ತಲೈವಾಸ್ ವಿರುದ್ಧ ಎಲ್ಲಾ ವಿಭಾಗದಲ್ಲಿಯೂ ಮೇಲುಗೈ ಸಾಧಿಸಿದೆ. ಈ ಮೂಲಕ ಮೊದಲ ಗೆಲುವು ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 38 ಅಂಕಗಳನ್ನು ಗಳಸಿದ್ದರೆ ತಮಿಳು ತಲೈವಾಸ್ ತಂಡ 30 ಅಂಕಗಳನ್ನು ಮಾತ್ರವೇ ಗಳಿಸಿತು. ಇನ್ನು ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡದ ರಕ್ಷಣಾ ವಿಭಾಗದ ಪ್ರದರ್ಶನ ಚಿಂತೆಗೆ ಕಾರಣವಾಗಿತ್ತು. ಆದರೆ ಈ ಪಂದ್ಯದಲ್ಲಿ 14 ಅಂಕಗಳನ್ನು ಟ್ಯಾಕಲ್ ಮೂಲಕವೇ ಬುಲ್ಸ್ ಪಡೆದುಕೊಂಡಿದೆ. ಇದು ತಂಡಕ್ಕೆ ಸಮಾಧಾನ ತಂದುಕೊಟ್ಟಿದೆ. ತಮಡದ ಗೆಲುವಿನಲ್ಲಿಯೂ ಇದು ಬಹಳ ದೊಡ್ಡ ಪಾತ್ರವಹಿಸಿದೆ.

ಬೆಂಗಳೂರು ಬುಲ್ಸ್ ತಂಡ ರೈಡಿಂಗ್ ಮೂಲಕ 19 ಅಂಕಗಳನ್ನು ಗಳಿಸಿದ್ದರೆ 14 ಅಂಕಗಳನ್ನು ಟ್ಯಾಕಲ್ ಮೂಲಕ ಪಡೆದಿದೆ. ನಾಲ್ಕು ಆಲೌಟ್ ಹಾಗೂ ಒಂದು ಇತರ ಅಂಕ ಬೆಂಗಳೂರು ತಂಡದ ಪಾಲಾಗಿದೆ. ಇತ್ತ ತಮಿಳುನಾಡು ತಂಡ 15 ಅಂಕಗಳನ್ನು ರೈಡಿಂಗ್ ಮೂಲಕ ಸಂಪಾದಿಸಿದರೆ 12 ಅಂಕಗಳನ್ನು ಟ್ಯಾಕಲ್ ಮೂಲಕ ಪಡೆದುಕೊಂಡಿದೆ. 2 ಆಲೌಟ್ ಹಾಗೂ ಒಂದು ಅಂಕ ಇತರ ರೂಪದಲ್ಲಿ ಪಡೆದುಕೊಂಡಿದೆ.

ಇನ್ನು ಬೆಂಗಳೂರು ತಂಡದ ಪರವಾಗಿ ಪವನ್ ಕುಮಾರ್ 9 ಅಂಕಗಳನ್ನು ಗಳಿಸಿದರೆ ಚಂದ್ರನ್ ರಂಜಿತ್ 7 ಅಂಕ ಸಂಪಾದಿಸಿದರು. ಸೌರಭ್ ನಂದಾಲ್, ಭರತ್, ತಲಾ ಊದಯ ಅಂಕಗಳನ್ನು ಗಳಿಸಿ ಮಿಂಚಿದರು. ಇನ್ನು ತಮಿಳು ತಲೈವಾಸ್ ಪರವಾಗಿ ಭವಾನಿ ರಜಪೂತ್ 8 ಅಂಕಗಳಿಸಿದರೆ ಸಾಗರ್ 5 ಅಂಕಗಳನ್ನು ಸಂಪಾದಿಸಿ ಮಿಂಚಿದರು.

ಇನ್ನು ಇದಕ್ಕೂ ಮುನ್ನ ಇಂದಿನ ಮೊದಲ ಪಂದ್ಯದಲ್ಲಿ ಯು ಮುಂಬಾ ಹಾಗೂ ಡೆಲ್ಲಿ ದಬಾಂಗ್ ತಮಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ದಬಾಂಗ್ ತಂಡ ಯುಂಬಾ ತಂಡವನ್ನು 31-27 ಅಂಗಗಳಿಂದ ಮಣಿಸಿದೆ. ಎಲ್ಲಾ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ದಬಾಂಗ್ 18 ಅಂಕಗಳನ್ನು ರೈಡಿಂಗ್ ಮೂಲಕ ಹಾಗೂ 10 ಅಂಕಗಳನ್ನು ಟ್ಯಾಕಲ್ ಮೂಲಕ ಗಳಿಸಿತು. ಯು ಮುಂಬಾ ತಂಡ ಕೂಡ 18 ಅಂಕಗಳನ್ನು ರೈಡಿಂಗ್ ಮೂಲಕ ಗಳಿಸಿದರೆ 6 ಅಂಕಗಳನ್ನು ಟ್ಯಾಕಲ್ ಮೂಲಕ ಗಳಿಸಿದೆ. ಇನ್ನು ಡೆಲ್ಲಿ ತಂಡದ ಪರವಾಗಿ ನವೀನ್ ಕುಮಾರ್ 12 ಅಂಕಗಳನ್ನು ಗಳಿಸಿದ್ದಾರೆ.

ಇನ್ನು ಇಂದಿನ ಮೂರನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಗಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಬೆಂಗಾಲ್ ವಾರಿಯರ್ಸ್ ತಂಡ 31-28 ಅಂಕಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಎಲ್ಲಾ ವಿಭಾಗದಲ್ಲಿಯೂ ಸಮಬಲದ ಪ್ರದರ್ಶನ ನೀಡುತ್ತಾ ತೀವ್ರ ಪೈಪೋಟಿಯನ್ನು ನಡೆಸಿತು. ಅಂತಿಮವಾಗಿ ಬೆಂಗಾಲ್ ವಾರಿಯರ್ಸ್ ಗೆಲುವಿನ ನಗೆ ಬೀರಿದೆ.

ಇನ್ನು ಶುಕ್ರವಾರದ ಪಂದ್ಯಗಳು ಅಂತ್ಯವಾದ ನಂತರ ಅಂಕಪಟ್ಟಿ ಹೀಗಿದೆ. ದಬಾಂಗ್ ಡೆಲ್ಲಿ ಆಡಿದ ಎರಡು ಪಂದ್ಯಗಳ ಪೈಕಿ ಎರಡಯ ಗೆಲುವು ಸಾಧಿಸಿದ್ದು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಬೆಂಗಾಲ್ ವಾರಿಯರ್ಸ್ ಕೂಡ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೂರನೇ ಸ್ಥಾನದಲ್ಲಿ ಯು ಮುಂಬಾ ತಂಡ ಇದ್ದು ಒಂದು ಗೆಲುವು ಒಂದು ಸೋಲು ಕಂಡಿದೆ. ಗುಜರಾತ್ ಜೈಂಟ್ಸ್ ಟಾಪ್ ನಾಲ್ಕರಲ್ಲಿರುವ ಮತ್ತೊಂದು ತಂಡವಾಗಿದ್ದು ಆಡಿದ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ಒಂದು ಸೋಲು ಅನುಭವಿಸಿದೆ. ಇನ್ನು ಬೆಂಗಳೂರು ಬುಲ್ಸ್ ತಂಡ ಮೊದಲ ಪಂದ್ಯವನ್ನು ಸೋತ ಬಳಿಕ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಆತ್ಮ ವಿಶ್ವಾಸದಲ್ಲಿದೆ. ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

Story first published: Friday, December 24, 2021, 23:44 [IST]
Other articles published on Dec 24, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+