ಕಬಡ್ಡಿ: ತಮಿಳ್ ತಲೈವಾಸ್ ಸೋಲಿಸಿದ ಗುಜರಾತ್ ಫಾರ್ಚೂನ್ ಜಿಯಾಂಟ್ಸ್

ಪಾಟ್ನಾ, ಅಕ್ಟೋಬರ್ 26: ಬಿಹಾರ ರಾಜ್ಯದ ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ (ಅಕ್ಟೋಬರ್ 26) ನಡೆದ ಪ್ರೊ ಕಬಡ್ಡಿ ಇಂಟರ್ ಜೋನ್ 7ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಗುಜರಾತ್ ಫಾರ್ಚೂನ್ ಜಿಯಾಂಟ್ಸ್ 36-25ರ ಜಯ ಸಾಧಿಸಿದೆ. ಗುಜರಾತ್ ಗೆ ಲಭಿಸುತ್ತಿರುವ ಮೊದಲ ಜಯವಿದು.
'ಮೈಖೇಲ್ ಪ್ರೊ-ಕಬಡ್ಡಿ ಮುಖಪುಟ'ಕ್ಕೆ ಕ್ಲಿಕ್ ಮಾಡಿ
ಆಡಿರುವ 3 ಪಂದ್ಯಗಳಲ್ಲಿ ಗುಜರಾತ್ ಒಂದು ಗೆಲುವು, ಒಂದು ಸೋಲು, ಒಂದು ಪಂದ್ಯ ಡ್ರಾ ಮಾಡಿಕೊಂಡಂತಾಗಿದೆ. ಇತ್ತ ತಮಿಳ್ ತಲೈವಾಸ್ ಗೆ ಇದು ಐದನೇ ಸೋಲು. ತಲೈವಾಸ್ 7 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆದ್ದಿದೆ. ಹೀಗಾಗಿ ಬಿ ಝೋನ್ ನಲ್ಲಿರುವ ತಲೈವಾಸ್ ಅಂಕಪಟ್ಟಿಯ ತಳ ಸೇರಿದೆ.
ಶುಕ್ರವಾರವೇ ನಡೆದ 8ನೇ ಇಂಟರ್ ಜೋನ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು 41-30 ಭರ್ಜರಿ ಗೆಲುವನ್ನು ಸಂಭ್ರಮಿಸಿತು. ಝೋನ್ ಬಿಯಲ್ಲಿರುವ ಪಿಂಕ್ ಪ್ಯಾಂಥರ್ಸ್ ನಾಲ್ಕರಲ್ಲಿ ಮೂರು ಸೋಲಿನೊಂದಿಗೆ ಅಂಕಪಟ್ಟಿಯ ತಳಕ್ಕೆ ಕುಸಿದಿದೆ.
Story first published: Friday, October 26, 2018, 22:51 [IST]
Other articles published on Oct 26, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications