Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ಬುಲ್ಸ್‌ಗೆ ಗುದ್ದಿದ ಹರಿಯಾಣ ಸ್ಟೀಲರ್ಸ್‌

11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 105ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಮತ್ತೊಂದು ಸೋಲು ಕಂಡಿದೆ. ಬುಲ್ಸ್‌ ಆಡಿದ 18 ಪಂದ್ಯಗಳಲ್ಲಿ 15 ಸೋಲು ಕಂಡಿದ್ದು 19 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದೆ. ಬುಧವಾರ ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ 37-26 ರಿಂದ ಬುಲ್ಸ್ ತಂಡವನ್ನು ಸೋಲಿಸಿ, ಈ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಹರಿಯಾಣ ಸ್ಟೀಲರ್ಸ್‌ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. ಸ್ಟೀಲರ್ಸ್‌ ಆಡಿದ 19 ಪಂದ್ಯಗಳಲ್ಲಿ 15 ಗೆಲುವು, 4 ಸೋಲು ಕಂಡಿದ್ದು, 77 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಈ ಪಂದ್ಯದ ಮೊದಲಾವಧಿಯಲ್ಲಿ ಬುಲ್ಸ್‌, ಹರಿಯಾಣ ಸ್ಟೀಲರ್ಸ್‌ ತಂಡದ ವಿರುದ್ಧ ಜಿದ್ದಾಜಿದ್ದಿನ ಪೈಪೋಟಿ ನೀಡಿತು. ಈ ವೇಳೆ ಬುಲ್ಸ್‌ 11-15 ರಿಂದ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಹಿನ್ನಡೆ ಅನುಭವಿಸಿತು. ಈ ವೇಳೆ ಬೆಂಗಳೂರು ತಂಡದ ರಕ್ಷಣಾ ವಿಭಾಗದ ಆಟ ಮನಮೋಹಕವಾಗಿತ್ತು. ಈ ವೇಳೆ ದಾಳಿಯಲ್ಲಿ 4 ಅಂಕಗಳನ್ನು ಕಲೆ ಹಾಕಿತು. ಹರಿಯಾಣ ಸ್ಟೀಲರ್ಸ್‌ ದಾಳಿಯಲ್ಲಿ 9, ಟ್ಯಾಕಲ್‌ನಲ್ಲಿ 5 ಅಂಕ ಸೇರಿಸಿ ಮುನ್ನಡೆ ಸಾಧಿಸಿತು.

Pro Kabaddi Haryana Steelers beat Bengaluru Bulls

ಎರಡನೇ ಅವಧಿಯ ಆಟದಲ್ಲಿ ಹರಿಯಾಣ ಸ್ಟೀಲರ್ಸ್‌ 22-15 ರಿಂದ ಬುಲ್ಸ್‌ ತಂಡದ ವಿರುದ್ಧ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಬುಲ್ಸ್‌ ಒಮ್ಮೆ ಆಲೌಟ್ ಆಗಿ, ಎದುರಾಳಿಗೆ ಬೋನ್ಸ್‌ ಅಂಕವನ್ನು ನೀಡಿತು. ಈ ವೇಳೆ ಸ್ಟೀಲರ್ಸ್‌ ದಾಳಿಯಲ್ಲಿ 12, ಟ್ಯಾಕಲ್‌ನಲ್ಲಿ 8 ಅಂಕಗಳನ್ನು ಕಲೆ ಹಾಕಿತು.

ಪಂದ್ಯದಲ್ಲಿ ಹರಿಯಾಣ 46 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 16 ರೈಂಡಿಂಗ್ ಪಾಯಿಂಟ್‌ ಗಳಿಸಿತು. ಈ ವೇಳೆ ಒಮ್ಮೆ ಸೂಪರ್ ರೈಡ್‌ ಸಹ ಮಾಡಿತು. ಬುಲ್ಸ್ 45 ಬಾರಿ ಸ್ಟೀಲರ್ಸ್‌ ಅಖಾಡಕ್ಕೆ ಎಂಟ್ರಿ ನೀಡಿ 8 ಅಂಕ ಸೇರಿಸಿತು. ವಿಜೇತ ತಂಡದ ಪರ ವಿನಯ್‌ 9, ಶಿವಂ 8 ಅಂಕಗಳನ್ನು ಕಲೆ ಹಾಕಿದರು.

Pro Kabaddi Haryana Steelers beat Bengaluru Bulls

ಮುಂಬಾಗೆ ಜಯ

ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ 47-31 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಮುಂಬಾ ಆಡಿದ 17 ಪಂದ್ಯಗಳಲ್ಲಿ 9 ಗೆಲುವು 6 ಸೋಲು ಕಂಡಿದ್ದು, 55 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಮೂಲಕ ತಮಿಳು ತಲೈವಾಸ್ 9ನೇ ಸೋಲು ಕಂಡಿದೆ.

ಮೊದಲಾವಧಿಯ ಪಂದ್ಯದಲ್ಲಿ ಯು ಮುಂಬಾ 22-14 ರಿಂದ ತಲೈವಾಸ್ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ಉಭಯ ತಂಡಗಳು ಅಬ್ಬರದ ಆಟಕ್ಕೆ ಮಣೆ ಹಾಕಿದವು. ಈ ವೇಳೆ ತಲೈವಾಸ್ 2 ಬಾರಿ ಆಲೌಟ್ ಆದರೆ, ಮುಂಬಾ ಒಂದು ಬಾರಿ ಆಲೌಟ್ ಆಯಿತು. ಈ ವೇಳೆ ಮುಂಬಾ ಆಟ ದಾಳಿಯಲ್ಲಿ ಮನ ಮೋಹಕವಾಗಿತ್ತು. ಎರಡನೇ ಅವಧಿಯಲ್ಲೂ ಮುಂಬಾ ತಂಡದ ಆರ್ಭಟ ಜೋರಾಗಿತ್ತು. ಮುಂಬಾ 25-17 ರಿಂದ ಮುನ್ನಡೆ ಸಾಧಿಸಿ ಸುಲಭವಾಗಿ ಪಂದ್ಯವನ್ನು ಗೆದ್ದಿತು. ಎರಡನೇ ಅವಧಿಯಲ್ಲೂ ತಲೈವಾಸ್ ಒಮ್ಮೆ ಆಲೌಟ್ ಆಯಿತು.

Story first published: Wednesday, December 11, 2024, 22:42 [IST]
Other articles published on Dec 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+