Pro Kabaddi: ಹರಿಯಾಣಗೆ ಅಗ್ರ ಸ್ಥಾನ, ಜೈಪುರಗೆ ಎರಡನೇ ಸ್ಥಾನ
11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳು ಭಾನುವಾರ ಅಮೋಘ ಜಯ ಸಾಧಿಸಿವೆ. ಟೂರ್ನಿಯಲ್ಲಿ ಈ ಗೆಲುವಿನೊಂದಿಗೆ ಹರಿಯಾಣ ಸ್ಟೀಲರ್ಸ್ ಆಡಿದ 10 ಪಂದ್ಯಗಳಲ್ಲಿ 8 ಜಯ, 2 ಸೋಲು ಕಂಡಿದ್ದು 41 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ಜೈಪುರ ಆಡಿದ 10 ಪದ್ಯಗಳಲ್ಲಿ 6 ಗೆಲುವು 3 ಸೋಲು, 1 ಡ್ರಾ ಸಾಧಿಸಿದ್ದು, 35 ಅಂಕ ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಹರಿಯಾಣ 36-29ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಬ್ಬರಿಸಿತು.
ಮೊದಲಾವಧಿಯಲ್ಲಿ ತಮಿಳು ತಲೈವಾಸ್ ಅಮೋಘ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿತು. ಈ ಅವಧಿಯಲ್ಲಿ ದಾಳಿಯಲ್ಲಿ ಹರಿಯಾಣ ಮುನ್ನಡೆ ಸಾಧಿಸಿತು. ಆದರೆ ತಮಿಳು ತಲೈವಾಸ್ ರಕ್ಷಣಾ ವಿಭಾಗದಲ್ಲಿ ಸ್ಥಿರ ಪ್ರದರ್ಶನ ನೀಡಿತು. ಅಲ್ಲದೆ ಹರಿಯಾಣ ಒಂದು ಬಾರಿ ಆಲೌಟ್ ಆಯಿತು.

ಎರಡನೇ ಅವಧಿಯಲ್ಲಿ ಹರಿಯಾಣ ಅಬ್ಬರ
ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳ ಹಿನ್ನಡೆಯನ್ನು ಮೆಟ್ಟಿನಿಂತು ಆಡುವ ಛಲವನ್ನು ಪ್ರದರ್ಶಿಸಿದರು. ಹರಿಯಾಣ ಆಟಗಾರರು ಈ ಅವಧಿಯಲ್ಲಿ ತಮಿಳು ತಲೈವಾಸ್ ತಂಡದ ರಣ ತಂತ್ರವನ್ನು ಮೆಟ್ಟಿನಿಂತು ಆಡಿದರು. ಈ ಅವಧಿಯಲ್ಲಿ ಹರಿಯಾಣದ ರೈಡರ್‌ಗಳು ಭರ್ಜರಿ ದಾಳಿ ನಡೆಸಿದರು. ಕೊನೆಯ 20 ನಿಮಿಷದಲ್ಲಿ ಹರಿಯಾಣ ಆಟಗಾರರು 22 ಅಂಕವನ್ನು ಕಲೆ ಹಾಕಿದರು. ಈ ವೇಳೆ ದಾಳಿಯಲ್ಲಿ 11, ಟ್ಯಾಕಲ್‌ನಲ್ಲಿ 8 ಅಂಕಗಳನ್ನು ಸೇರಿಸಿತು. ಈ ಅವಧಿಯಲ್ಲಿ ತಮಿಳು ಒಂದು ಬಾರಿ ಆಲೌಟ್ ಆಯಿತು.
ಹರಿಯಾಣ ತಂಡದ ಪರ ವಿನಯ್ ದಾಳಿಯಲ್ಲಿ 10 ಅಂಕಗಳನ್ನು ಕಲೆ ಹಾಕಿದರು. ಟ್ಯಾಕಲ್‌ನಲ್ಲಿ ಮೊಹಮ್ಮದ್ರೇಜಾ 7 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ಇನ್ನು ತಮಿಳು ತಂಡದ ಪರ ಮೋಯಿನ್ ಅಂಕ ಪಟ್ಟಿಯಲ್ಲಿ 7 ಅಂಕ ಸೇರಿಸಿದರು.
ಮುಂಬಾಗೆ ಸೋಲು
11ನೇ ಆವೃತ್ತಿಯ ಕಬಡ್ಡಿಯಲ್ಲಿ 60ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 30-28 ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿತು. ಮೊದಲಾವಧಿಯಲ್ಲಿ ಜೈಪುರ ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಈ ಅವಧಿಯಲ್ಲಿ ಪ್ಯಾಂಥರ್ಸ್ 19-12 ರಿಂದ ಪಲ್ಟನ್ ವಿರುದ್ಧ ಮುನ್ನಡೆ ಕಾಯ್ದುಕೊಂಡಿತು. ಈ ವೇಳೆ ಮಾಜಿ ಚಾಂಪಿಯನ್ ಜೈಪುರ ತಂಡದ ರಕ್ಷಣಾ ಆಟಗಾರರು ಮನಮೋಹಕ ಪ್ರದರ್ಶನ ನೀಡಿದರು. ಈ ವೇಳೆ ಪಲ್ಟನ್ ಒಂದು ಬಾರಿ ಆಲೌಟ್ ಆಯಿತು.

ಎರಡನೇ ಅವಧಿಯ ಆಟದಲ್ಲಿ ಪುಣೇರಿ ಪಲ್ಟನ್ ಅಮೋಘ ಆಟವನ್ನು ಆಡಿತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳ ಹಿನ್ನಡೆಯನ್ನು ಮೆಟ್ಟಿ ನಿಲ್ಲಲು ಸಾಕಾಗಲಿಲ್ಲ. ಈ ಅವಧಿಯಲ್ಲಿ ಪುಣೇರಿ 16-11 ಅಂಕ ಕಲೆ ಹಾಕಿತು. ಈ ಅವಧಿಯಲ್ಲಿ ಪುಣೇರಿ ಸ್ಥಿರ ಆಟದ ಪ್ರದರ್ಶನ ನೀಡಿತು. ಆದರೆ ಜಯ ಸಾಧಿಸಲು ಬೇಕಾದಷ್ಟು ಅಂಕಗಳನ್ನು ಕಲೆ ಹಾಕಲು ವಿಫಲವಾಯಿತು. ವಿಜೇತ ತಂಡದ ಪರ ಅರ್ಜುನ್ ದೇಶ್ವಾಲ್ 8 ಅಂಕಗಳನ್ನು ಕಲೆ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications