Pro Kabaddi: ಭರ್ಜರಿ ಜಯ ಸಾಧಿಸಿದ ಜೈಪುರ್ ಪಿಂಕ್ ಪ್ಯಾಂಥರ್ಸ್‌ಗೆ ಅಗ್ರ ಸ್ಥಾನ
ಭರವಸೆಯ ಆಟಗಾರ ಅರ್ಜುನ್ ದೇಶ್ವಾಲ್ ಅವರ ಭರ್ಜರಿ ದಾಳಿಯ ನೆರವಿನಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ 42-25ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಈ ಜಯದೊಂದಿಗೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಆಡಿದ 15 ಪಂದ್ಯಗಳಲ್ಲಿ 11 ಜಯ, 2 ಸೋಲು, 2 ಡ್ರಾ ಸಾಧಿಸಿದ್ದು 63 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಇನ್ನು ಬೆಂಗಾಲ್ ವಾರಿಯರ್ಸ್ ಆಡಿದ 14 ಪಂದ್ಯಗಳಲ್ಲಿ 8 ಜಯ, 5 ಸೋಲು ಕಂಡಿದ್ದು 44 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ಮೊದಲಾವಧಿಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಈ ವೇಳೆ ಅಂಕಗಳನ್ನು ನೀಡಲು ಉಭಯ ತಂಡಗಳು ಹಿಂದೆಟು ಹಾಕಿದವು. ಈ ಅವಧಿಯಲ್ಲಿ ಬೆಂಗಾಲ್ ಒಂದು ಅಂಕಗಳ ಹಿನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಜೈಪುರ್ 13-12ರಿಂದ ಮುನ್ನಡೆ ಸಾಧಿಸಿತು. ಈ ವೇಳೆ 7 ಅಂಕಗಳನ್ನು ಉಭಯ ತಂಡಗಳು ದಾಳಿಯಲ್ಲಿ ಗಳಿಸಿದವು. ಟ್ಯಾಕಲ್‌ನಲ್ಲಿ ಜೈಪುರ್ 4, ಬೆಂಗಾಲ್ 5 ಅಂಕ ಸೇರಿಸಿತು.
ಇನ್ನು ಎರಡನೇ ಅವಧಿಯಲ್ಲಿ ಜೈಪುರ್ ಪಿಂಕ್ ಪ್ಯಾಥರ್ಸ್ ಯೋಜನಾ ಬದ್ಧ ಆಟವನ್ನು ಆಡಿತು. ಈ ಅವಧಿಯಲ್ಲಿ ಹಾಕಿಕೊಂಡ ಯೋಜನೆಯಂತೆ ಆಟವಾಡಿತು. ಜೈಪುರ್ ಈ ಅವಧಿಯಲ್ಲಿ 29-13 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಜೈಪುರ್ ದಾಳಿಯಲ್ಲಿ 14, ಟ್ಯಾಕಲ್‌ನಲ್ಲಿ 10 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಈ ಅವಧಿಯಲ್ಲಿ ಎರಡು ಬಾರಿ ಬೆಂಗಾಲ್ ತಂಡವನ್ನು ಆಲೌಟ್ ಮಾಡುವ ಮೂಲಕ ನಾಲ್ಕು ಅಂಕಗಳನ್ನು ಕಲೆ ಹಾಕಿತು.

ವಿಜೇತ ತಂಡದ ಪರ ಅರ್ಜುನ್ ದೇಶ್ವಾಲ್ ಅವರು 22 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 10 ಟಚ್ ಹಾಗೂ 5 ಬೋನಸ್ ಅಂಕಗಳನ್ನು ಕಲೆ ಹಾಕಿದರು. ಭವನಿ ರಜಪುತ್ 7 ಅಂಕಗಳನ್ನು ಕಲೆ ಹಾಕಿದರು. ಇನ್ನು ಪರಾಜಿತ ತಂಡದ ಪರ ಮನಿಂದರ್ ಸಿಂಗ್ 9 ಅಂಕಗಳನ್ನು ಪಡೆದು ಮಿಂಚಿದರು.
ಹರಿಯಾಣಗೆ ಜಯ
10ನೇ ಆವೃತ್ತಿಯ 85ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 37-30 ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಹರಿಯಾಣ ಸ್ಟೀಲರ್ಸ್ ಆಡಿದ 14 ಪಂದ್ಯಗಳಲ್ಲಿ 8 ಜಯ ಸಾಧಿಸಿದ್ದು 44 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನು ತೆಲುಗು ಟೈಟನ್ಸ್ ಮೂರನೇ ಗೆಲುವು ಸಾಧಿಸುವ ಕನಸು ವಿಫಲವಾಯಿತು.
ಹರಿಯಾಣ ಪರ ರಾಹುಲ್ 8, ವಿನಯ್ ಹಾಗೂ ಮೋಹಿತ್ ನಂದಲ್ ತಲಾ ಆರು ಅಂಕಗಳನ್ನು ಕಲೆ ಹಾಕಿದರು. ಮೊದಲಾವಧಿಯಲ್ಲಿ ಹರಿಯಾಣ ಸ್ಟೀಲರ್ಸ್ ಸಾಧಿಸಿತು. ತಾನು ಸಾಧಿಸಿದ್ದ ಅಂಕಗಳ ಮುನ್ನಡೆಯನ್ನು ಹರಿಯಾಣ ಬಿಟ್ಟುಕೊಡದೆ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications