Pro Kabaddi: ಜೈಪೂರ್ ಪಿಂಕ್ ಪ್ಯಾಂಥರ್ಸ್‌ಗೆ ಗೆಲುವಿನ ದಂಡ ಯಾತ್ರೆ
10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿರುವ ಜೈಪೂರ್ ಪಿಂಕ್ ಪ್ಯಾಂಥರ್ಸ್ ತನನ್ನ ಗೆಲುವಿನ ದಂಡ ಯಾತ್ರೆಯನ್ನು ಮುಂದುವರೆಸಿದೆ. ಪ್ರಸಕ್ತ ಋತುವಿನಲ್ಲಿ ಜೈಪೂರ್ ಸತತ 10ನೇ ಗೆಲುವಿನ ನಗೆ ಬೀರಿದೆ.
ಬುಧವಾರ ಎಸ್‌ಎಂಎಸ್ ಇಂದೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜೈಪೂರ್ 37-27 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಜೈಪೂರ್ ಆಡಿದ 14 ಪಂದ್ಯಗಳಲ್ಲಿ 10 ಗೆಲುವು, 2 ಸೋಲು, 2 ಡ್ರಾ ಸಾಧಿಸಿದ್ದು 58 ಅಂಕಗಳನ್ನು ಕಲೆ ಹಾಕಿದ್ದು, ಮೊದಲ ಸ್ಥಾನ ಭಧ್ರ ಪಡಿಸಿಕೊಂಡಿದೆ. ಹರಿಯಾಣ ಸ್ಟೀಲರ್ಸ್ ಆಡಿದ 13 ಪಂದ್ಯಗಳಲ್ಲಿ 7 ಜಯ ಸಾಧಿಸಿದ್ದು, 39 ಅಂಕಗಳನ್ನು ಕಲೆ ಹಾಕಿದ್ದು ಐದನೇ ಸ್ಥಾನದಲ್ಲಿದೆ.

ಮೊದಲಾವಧಿಯಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಪ್ರದರ್ಶನ ನೀಡಿತು. ಈ ವೇಳೆ ಟ್ಯಾಕಲ್‌ನಲ್ಲಿ 9 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಇನ್ನು ದಾಳಿಯಲ್ಲಿ ಐದು ಅಂಕ ಕಲೆ ಹಾಕಿದರು. ಹರಿಯಾಣ ಸ್ಟೀಲರ್ಸ್ ಒಂದು ಬಾರಿ ಅಂಕಗಳನ್ನು ಕಲೆ ಹಾಕಿತು.
ಎರಡನೇ ಅವಧಿಯಲ್ಲಿ ಜೈಪೂರ್ ಸ್ಥಿರ ಆಟದ ಪ್ರದರ್ಶನ ನೀಡಿತು. ಜೈಪೂರ್ 21-15ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಮೇಲುಗೈ ಸಾಧಿಸಿತು. ದಾಳಿಯಲ್ಲಿ ಜೈಪೂರ್ 11 ಅಂಕಗಳನ್ನು ಕಲೆ ಹಾಕಿತು. ಇನ್ನು ಟ್ಯಾಕಲ್‌ನಲ್ಲಿ 6 ಅಂಕ ಪೇರಿಸಿತು. ಅಲ್ಲದೆ ಒಂದು ಬಾರಿ ಹರಿಯಾಣ ತಂಡವನ್ನು ಆಲೌಟ್ ಆಯಿತು.
ಪ್ಯಾಂಥರ್ಸ್ ಅರ್ಜುನ್ ದೇಶ್ವಾಲ್ 9, ಭವಾನಿ ರಜಪೂತ್ 6 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಹರಿಯಾಣ ತಂಡದ ಪರ ಶಿವಂ 8 ಅಂಕ ಬಾಚಿಕೊಂಡರು.

ಗುಜರಾತ್‌ಗೆ ಜಯ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 31-26 ಅಂಕಗಳೊಂದಿಗೆ ದಬಾಂಗ್ ದೆಹಲಿ ಕೆ.ಸಿ ವಿರುದ್ಧ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಆಡಿದ 13 ಪಂದ್ಯಗಳಲ್ಲಿ 8 ಜಯ, 5 ಸೋಲು ಕಂಡಿದ್ದು 44 ಅಂಕಗಳನ್ನು ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದೆ. ಸೋಲಿನ ಹೊರತಾಗಿಯೂ ದಬಾಂಗ್ ಕೆ.ಸಿ ಆಡಿದ 13 ಪಂದ್ಯಗಳಲ್ಲಿ 7 ಜಯ ಸಾಧಿಸಿದ್ದು, 44 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications