Pro Kabaddi: ಯೋಧಾಸ್ ವಿರುದ್ಧ ಪ್ಯಾಂಥರ್ಸ್‌ಗೆ ಭಾರೀ ಅಂತರದ ಗೆಲುವು, ಅಗ್ರ ಸ್ಥಾನಕ್ಕೆ ಬಡ್ತಿ
ಭರ್ಜರಿ ಪ್ರದರ್ಶನವನ್ನು ನೀಡಿದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್, ಯು.ಪಿ ಯೋಧಾಸ್ ತಂಡವನ್ನು ಮಣಿಸಿತು. ಈ ಮೂಲಕ ಪ್ಯಾಂಥರ್ಸ್ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿರುವ ಜೈಪುರ, ಯುಪಿ ತಂಡವನ್ನು 67-30 ಅಂಕಗಳಿಂದ ಸೋಲಿಸಿ ಅಗ್ರ-2ರಲ್ಲಿ ಉಳಿಯುವ ಮೂಲಕ ಸೆಮಿಫೈನಲ್ ಆಡುವುದನ್ನು ಖಚಿತಪಡಿಸಿತು.
20 ಪಂದ್ಯಗಳಲ್ಲಿ ತನ್ನ 14 ನೇ ಗೆಲುವು ಸಾಧಿಸಿದ ಜೈಪುರ ಪರವಾಗಿ, ಅರ್ಜುನ್ ದೇಸ್ವಾಲ್ ಅದ್ಭುತವಾಗಿ ಪ್ರದರ್ಶನ ನೀಡಿದರು. ಇವರು 20 ಅಂಕಗಳನ್ನು ಪಡೆದು ಅಬ್ಬರಿಸಿದರು. ಸುನಿಲ್ ಮತ್ತು ಅಂಕುಶ್ ಹೈ-5 ಪೂರ್ಣಗೊಳಿಸಿದರು. ಅದೇ ರೀತಿ 20 ಪಂದ್ಯಗಳಲ್ಲಿ 15ನೇ ಸೋಲು ಅನುಭವಿಸಿದ ಯುಪಿ ಪರ ಗಗನ್ ಗೌಡ 10 ಅಂಕ ಪಡೆದರು. ಈ ಋತುವಿನಲ್ಲಿ ಜೈಪುರದ ಅತಿ ದೊಡ್ಡ ಗೆಲುವು ಇದಾಗಿದೆ.

ಎರಡೂವರೆ ನಿಮಿಷದಲ್ಲಿ ಜೈಪುರ 2-1 ಮುನ್ನಡೆ ಸಾಧಿಸಿತ್ತು. ಆದರೆ ಮಹಿಪಾಲ್ ಎರಡು ಪಾಯಿಂಟ್ ರೈಡ್‌ನೊಂದಿಗೆ ಯುಪಿಯನ್ನು 3-2 ರಿಂದ ಮುನ್ನಡೆಸಿದರು. ನಂತರ ಯುಪಿ ಡಿಫೆನ್ಸ್ ಅಜಿತ್‌ರನ್ನು ಡೂ ಆರ್ ಡೈ ರೈಡ್‌ನಲ್ಲಿ ಕಟ್ಟಿ ಹಾಕಿ ಜೈಪುರವನ್ನು ಸೂಪರ್ ಟ್ಯಾಕಲ್ ಪರಿಸ್ಥಿತಿಗೆ ಒಳಪಡಿಸಿತು. ಇಲ್ಲಿಂದ ಸ್ಥಿರ ಆಟದ ಪ್ರದರ್ಶನ ನೀಡಿದ ಜೈಪುರ್ ಅಂಕಗಳನ್ನು ಕಲೆ ಹಾಕುವತ್ತ ಚಿತ್ತ ನೆಟ್ಟಿತು. ಪರಿಣಾಮ ಅರ್ಜುನ್ ಬಂದ ತಕ್ಷಣ ಬೋನಸ್ ಪಡೆದು ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು.
ನಂತರ ಜೈಪುರದ ರಕ್ಷಣಾ ವಿಭಾಗದವರು ಗಗನ್ ಅವರಿಗೆ ಖೆಡ್ಡಾ ತೋಡಿದರು. ಈ ವೇಳೆ ಸ್ಕೋರ್ 7-7 ರಲ್ಲಿ ಸಮಬಲದಲ್ಲಿ ಸಾಗುತ್ತಿತ್ತು. ಮಹಿಪಾಲ್ ಮಾಡು ಇಲ್ಲವೇ ಮಡಿ ರೈಡ್‌ನಲ್ಲಿ ಖಾಲಿ ಕೈಯಲ್ಲಿ ಮರಳಿದರು. ಇಲ್ಲಿಂದ ಜೈಪುರ್ ಪಂದ್ಯದ ಮೇಲೆ ಕ್ರಮೇಣ ಹಿಡಿತ ಸಾಧಿಸಲು ಪ್ರಾರಂಭಿಸಿತು.
ಮೊದಲಾವಧಿಯ ಆಟದಲ್ಲಿ ಅರ್ಜುನ್ ಅಬ್ಬರಿಸಿದರು. ನಂತರ ಜೈಪುರ ಯುಪಿಯನ್ನು ಆಲೌಟ್ ಮಾಡಿ 18-11 ರಿಂದ ಮುನ್ನಡೆ ಸಾಧಿಸಿತು. ಆಲ್-ಇನ್ ನಂತರ, ಅರ್ಜುನ್ ಸತತ ನಾಲ್ಕು ಅಂಕಗಳನ್ನು ಗಳಿಸಿ ಜೈಪುರಕ್ಕೆ ವಿರಾಮದ ವೇಳೆಗೆ 23-11 ರಿಂದ ಮುನ್ನಡೆ ತಂದು ಕೊಟ್ಟರು.
ವಿರಾಮದ ನಂತರವೂ ಅರ್ಜುನ್ ಪ್ರದರ್ಶನ ಸ್ಥಿರವಾಗಿತ್ತು. ಆಗಲೇ ಈ ಸೂಪರ್ ರೈಡರ್ ಸೂಪರ್-10 ಅನ್ನು ಪೂರ್ಣಗೊಳಿಸಿದರು. ಈ ವೇಳೆಗಾಗಲೆ ಜೈಪುರ ಸಂಪೂರ್ಣ ಪ್ರಾಬಲ್ಯ ಹೊಂದಿತ್ತು. ಮತ್ತು ಅವರು ನಾಲ್ಕನೇ ಬಾರಿಗೆ ಯುಪಿಯನ್ನು ಆಲೌಟ್ ಮಾಡಿದರು ಮತ್ತು 48-18 ರಿಂದ ಮುನ್ನಡೆ ಸಾಧಿಸಿದರು.
ಅರ್ಜುನ್ ಪಿಕೆಎಲ್‌ನಲ್ಲಿ 900 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಿದರು. ಇದರ ನಂತರ, ಜೈಪುರ ಐದನೇ ಬಾರಿಗೆ ಯುಪಿಯನ್ನು ಆಲೌಟ್ ಮಾಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.

ಮುಂಬಾಗೆ ಸೋಲು
10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 118ನೇ ಪಂದ್ಯದಲ್ಲಿ ಬೆಂಗಾಳ ವಾರಿಯರ್ಸ್ 46-34 ರಿಂದ ಯು ಮುಂಬಾ ತಂಡವನ್ನು ಮಣಿಸಿತು. ಈ ಮೂಲಕ ಬೆಂಗಾಳ ಮುಂದಿನ ಹಂತವನ್ನು ತಲುಪುವ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ಆಡಿದ 20 ಪಂದ್ಯಗಳಲ್ಲಿ 9 ಗೆಲುವು ದಾಖಲಿಸಿರುವ ಬೆಂಗಾಳ 54 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಮಾಜಿ ಚಾಂಪಿಯನ್ ಮುಂಬಾ ಟೂರ್ನಿಯಲ್ಲಿ 12ನೇ ಸೋಲಿಗೆ ಶರಣಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications