For Quick Alerts
ALLOW NOTIFICATIONS  
For Daily Alerts

PKL 2025: ಜೈಪುರ, ತೆಲುಗು ತಂಡಕ್ಕೆ ಭರ್ಜರಿ ಜಯ

ಜೈಪುರ: 12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಭರ್ಜರಿ ಜಯ ಸಾಧಿಸಿವೆ. ಮಂಗಳವಾರ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 30-29 ರಿಂದ ಗುಜರಾತ್‌ ಜೈಂಟ್ಸ್ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌, ಯು ಮುಂಬಾ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ಭರ್ಜರಿ ಪ್ರದರ್ಶನ ನೀಡಿತು. ಈ ವೇಳೆ ತೆಲುಗು ಟೈಟಾನ್ಸ್ ತಂಡ ಮೊದಲ 20 ನಿಮಿಷದಲ್ಲಿ 12-10 ಅಂಕಗಳ ಮುನ್ನಡೆಯನ್ನು ಸಾಧಿಸಿತು. ಈ ವೇಳೆ ತೆಲುಗು ತಂಡದ ದಾಳಿಕೋರರು ಅಮೋಘ ದಾಳಿಯನ್ನು ನಡೆಸಿ 8 ಅಂಕವನ್ನು ಕಲೆ ಹಾಕಿದರು. ಅಲ್ಲದೆ ಟ್ಯಾಕಲ್‌ನಲ್ಲಿ 2 ಅಂಕ ಸೇರಿಸಿ ಎದುರಾಳಿಗೆ ಶಾಕ್‌ ನೀಡಿತು. ಈ ವೇಳೆ ಗುಜರಾತ್ ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ಸಮಬಲದ ಪ್ರದರ್ಶನ ನೀಡಿದವು.

Pro Kabaddi Jaipur Pink Panthers amp amp Telugu Titans secure thrilling victories

ಎರಡನೇ ಅವಧಿಯ ಆಟದಲ್ಲಿ ಗುಜರಾತ್ ತಂಡದ ಸೊಗಸಾದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ದಾಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜೈಂಟ್ಸ್ ತಂಡ 11 ಅಂಕವನ್ನು ಕಲೆ ಹಾಕಿತು. ಅಲ್ಲದೆ ತೆಲುಗು 10 ಅಂಕಗಳನ್ನು ರೈಡಿಂಗ್‌ನಲ್ಲಿ ಸೇರಿಸಿತು. ಇನ್ನು ಇದೇ ವೇಳೆ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆಗಿದ್ದರಿಂದ ಬೋನಸ್‌ ಅಂಕವನ್ನು ಕಲೆ ಹಾಕಿದವು. ವಿಜೇತ ತಂಡದ ಪರ ಆಲ್‌ರೌಂಡರ್‌ ಭರತ್ 9, ವಿಜಯ್‌ ಮಲಿಕ್‌ 7 ಅಂಕ ಸೇರಿಸಿ ಜಯದಲ್ಲಿ ಮಿಂಚಿದರು. ಈ ಗೆಲುವಿನ ಮೂಲಕ ತೆಲುಗು ಟೂರ್ನಿಯಲ್ಲಿ 5ನೇ ಗೆಲುವು ದಾಖಲಿಸಿತು.

ಜೈಪುರಗೆ ಸೂಪರ್‌ ಗೆಲುವು

ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಹಾಗೂ ಯು ಮುಂಬಾ ತಂಡಗಳು ನಿಗದಿತ ಸಮಯದಲ್ಲಿ ಸಮನಾದ ಅಂಕಗಳನ್ನು ಕಲೆ ಹಾಕಿದವು. ಹೀಗಾಗಿ ಪಂದ್ಯದ ಫಲಿತಾಂಶ ಅರಿಯಲು ಟೈ ಬ್ರೇಕರ್‌ ಮೊರೆಹೋಗಲಾಯಿತು. ಟೈಬ್ರೇಕರ್‌ನಲ್ಲಿ ಜೈಪುರ 6 ಹಾಗೂ ಮುಂಬಾ 4 ಅಂಕ ಗಳಿಸಿದವು. ಈ ಗೆಲುವಿನ ಮೂಲಕ ಜೈಪುರ 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

Pro Kabaddi Jaipur Pink Panthers amp amp Telugu Titans secure thrilling victories

ಮೊದಲಾವಧಿಯ ಆಟದಲ್ಲಿ ಮುಂಬಾ ತಂಡ ಭರ್ಜರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಮಾಜಿ ಚಾಂಪಿಯನ್ ಮುಂಬಾ 17-16 ಅಂಕಗಳಿಂದ ಕೊಂಚ ಮುನ್ನಡೆ ಸಾಧಿಸಿತು. ಎರಡನೇ ಅವಧಿಯ ಆಟದಲ್ಲಿ ಜೈಪುರ 22-21 ರಿಂದ ಮುಂಬಾ ವಿರುದ್ಧ ಮುನ್ನಡೆ ಸಾಧಿಸಿತು. ಈ ಪಂದ್ಯದ ಫಲಿತಾಂಶ ಅರಿಯಲು ತಲಾ ಐದು ರೈಡ್‌ ನಡೆಸಲಾಯಿತು. ಈ ವೇಳೆ ಜೈಪುರ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿತು. ಜೈಪುರ ಪರ ನಿತೀನ್ ಕುಮಾರ್ ಹಾಗೂ ಮುಂಬಾ ಪರ ಸಂದೀಪ್‌ ತಲಾ 14 ಅಂಕಗಳನ್ನು ಕಲೆ ಹಾಕಿ ಮಿಂಚಿದರು.

Story first published: Tuesday, September 23, 2025, 22:54 [IST]
Other articles published on Sep 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+