ಕ್ರಿಕೆಟ್ ಮುಗೀತು, ತಿಂಗಳ ಕಾಲ ಪ್ರೋ ಕಬಡ್ಡಿ ಕಿಕ್
ಮುಂಬೈ, ಜು. 18 : ಭಾರತೀಯರಿಗೆ ಇನ್ನು ಮುಂದೆ ಕಬಡ್ಡಿ ಕಿಕ್ ಸಿಗಲಿದೆ. ಒಂದು ತಿಂಗಳು ನಡೆಯುವ ಪ್ರೊಫೆಷನಲ್ ಕಬಡ್ಡಿ ಲೀಗ್ ಎರಡನೇ ಆವೃತ್ತಿ ಜುಲೈ 18 ರಂದು ಆರಂಭವಾಗಲಿದ್ದು ಎಂಟು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿವೆ.
ಮುಂಬೈನ ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ರನ್ನರ್ಸ್ ಅಪ್ ಯು ಮುಂಬಾ ಪೈಪೋಟಿ ನಡೆಸಲಿವೆ. ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಬಂಗಾಳ ವಾರಿಯರ್ಸ್ ಕಾದಾಟ ನಡೆಸಲಿವೆ.[ಕನ್ನಡದಲ್ಲೂ ಪ್ರೋ ಕಬಡ್ಡಿ ಲೀಗ್ ವೀಕ್ಷಕ ವಿವರಣೆ]

ಈ ವರ್ಷ ಬಹುಮಾನ ಮೊತ್ತವನ್ನು ಹೆಚ್ಚಳ ಮಾಡಿದೆ. ಅಲ್ಲದೇ ತಂಡದ ಆಟಗಾರರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಸ್ಥಳೀಯ ಭಾಷೆಗಳಲ್ಲೂ ವೀಕ್ಷಕ ವಿವರಣೆಯನ್ನು ನೀಡಲಾಗುತ್ತಿದೆ. ಪ್ರೋ ಕಬಡ್ಡಿ ಲೀಗ್ ಮೊದಲ ಸೀಸನ್ ನಲ್ಲಿ ಸರಿ ಸುಮಾರು 435 ಮಿಲಿಯನ್ ವೀಕ್ಷಕರನ್ನು ಮುಟ್ಟಿದ್ದ ಪಿಕೆಎಲ್ ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯನ್ನು ಮುಟ್ಟುವ ನಿರೀಕ್ಷೆ ಇದೆ. ಈ ಸೀಸನ್ ನಲ್ಲಿ ಪ್ರತಿ ತಂಡದಲ್ಲಿ 14 ಆಟಗಾರರ ಬದಲಿಗೆ 25 ಆಟಗಾರರು ಸೇರಿಕೊಂಡಿದ್ದಾರೆ. ಇರಾನಿ ಆಟಗಾರರು ಸೇರಿದಂತೆ ವಿದೇಶಿ ಆಟಗಾರರು ತಂಡಕ್ಕೆ ಹೆಚ್ಚಿನ ಬಲ ತುಂಬಲಿದ್ದಾರೆ.
ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ಜರುಗಲಿವೆ. ಈ ಬಾರಿ ಚಾಮಪಿಯನ್ ತಂಡಕ್ಕೆ 1 ಕೋಟಿ ನೀಡಲಾಗುತ್ತಿದೆ. ರನ್ನರ್ಸ್ ಅಪ್ ತಂಡಕ್ಕೆ 50 ಲಕ್ಷ ರು. ಲಭಿಸಲಿದೆ. ಮೂರನೇ ಸ್ಥಾನ ಪಡೆಯುವ ತಂಡ 30 ಲಕ್ಷ ಮತ್ತು ನಾಲ್ಕನೇ ಸ್ಥಾನಕ್ಕೆ 20 ಲಕ್ಷ ರು. ಸಿಗಲಿದೆ. ಕಳೆದ ಬಾರಿ ಹೋದ ವರ್ಷ 59 ರಾಷ್ಟ್ರಗಳಲ್ಲಿ ಪಂದ್ಯಗಳು ಪ್ರಸಾರವಾಗಿದ್ದವು. ಈ ಬಾರಿ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪಂದ್ಯ ಪ್ರಸಾರವಾಗಲಿದೆ.
Story first published: Wednesday, January 3, 2018, 10:15 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications