ಪ್ರೊ ಕಬಡ್ಡಿ ಲೀಗ್: ಫ್ಯಾನ್ಸಿಗೆ ಥ್ಯಾಂಕ್ಸ್ ಎಂದ ಬುಲ್ಸ್ ತಂಡ
ಬೆಂಗಳೂರು, ಆ. 17: ಪ್ರೊ ಕಬಡ್ಡಿ ಲೀಗ್‌ನಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ತಂಡ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭರ್ಜರಿ ಪ್ರದರ್ಶನ ತೋರಿ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿರುವುದು ಕ್ರೀಡಾಭಿಮಾನಿಗಳಿಗೆ ಗೊತ್ತಿರುತ್ತದೆ. ಇದಾದ ಬಳಿಕ ಬುಲ್ಸ್ ಫ್ಯಾನ್ಸಿಗೆ ಬೆಂಗಳೂರು ಬುಲ್ಸ್ ತಂಡದ ಕೋಚ್ ರಣಧೀರ್ ಸಿಂಗ್ ಅವರು ಥ್ಯಾಂಕ್ಸ್ ಹೇಳಿದ್ದಾರೆ. ಜೊತೆಗೆ ಇದೇ ರೀತಿ ಬೆಂಬಲ ನೀಡಿ ಎಂದು ಕೋರಿದ್ದಾರೆ.
ನಗರದ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಲೀಗ್‌ನ 49ನೇ ಪಂದ್ಯದಲ್ಲಿ ಬೆಂಗಳೂರು ತಂಡ ತೆಲುಗು ಟೈಟಾನ್ಸ್ ತಂಡವನ್ನು 43-29 ರಿಂದ ಮಣಿಸಿ ಪ್ಲೇ-ಆಫ್‌ಗೆ ತೇರ್ಗಡೆಯಾಗಿತ್ತು. ಇನ್ನೊಂದೆಡೆ ಅನೂಪ್ ಕುಮಾರ್ ನೇತೃತ್ವದ ಮುಂಬಾ ತಂಡ ಪಾಟ್ನಾ ಪೈರಟ್ಸ್ ತಂಡವನ್ನು 32-27 ರಿಂದ ಮಣಿಸಿತು. .
2ನೇ ಸ್ಥಾನದಲ್ಲಿದ್ದ ತೆಲುಗು ತಂಡವನ್ನು ಮಣಿಸಿರುವ ಬೆಂಗಳೂರು 13 ಪಂದ್ಯಗಳಲ್ಲಿ 43 ಅಂಕ ಗಳಿಸಿ 3ನೇ ಸ್ಥಾನಕ್ಕೇರಿತು. ನಾಯಕ ಮಂಜೀತ್ ಚಿಲ್ಲರ್ ಅವರ ಆಲ್ ರೌಂಡರ್ ಆಟ, ಅಜಯ್ ಠಾಕೂರ್ ಚಿನಕುರಳಿ ಆಟದಿಂದ ಮುಂದಿನ ಹಂತದಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆ ಹುಟ್ಟಿಸಿದ್ದಾರೆ. ಬುಲ್ಸ್ ತಂಡ ತನ್ನ ಕೊನೆ ಪಂದ್ಯವನ್ನು ಪುಣೇರಿ ಪಲ್ಟಾನ್ ವಿರುದ್ಧ ಆಗಸ್ಟ್ 19 ರಂದು ಆಡಲಿದ್ದು, ಇದಕ್ಕೂ ಮುನ್ನವೇ ಉಪಾಂತ್ಯದ ಸ್ಥಾನ ಖಚಿತಗೊಂಡಿದೆ.

ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ಬುಲ್ಸ್
14 ಪಂದ್ಯಗಳ ನಂತರ ಹಾಲಿ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ 54 ಅಂಕಗಳಿಸಿ ಅಗ್ರಸ್ಥಾನದಲ್ಲಿದೆ. ಯು ಮುಂಬಾ 51 ಅಂಕಗಳು ಹಾಗೂ ಬೆಂಗಳೂರು ಬುಲ್ಸ್ 47 ಅಂಕಗಳು ಮತ್ತು ಪಟ್ನಾ ಪೈರೇಟ್ಸ್ 45 ಅಂಕ ಗಳಿಸಿ ನಂತರದ ಸ್ಥಾನಗಳಲ್ಲಿವೆ.
ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದ ಬುಲ್ಸ್ ಟೀಂ
ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದ ಬೆಂಗಳೂರು ಬುಲ್ಸ್ ಟೀಂ ಟ್ವೀಟ್ ಮಾಡಿದ್ದು ಹೀಗೆ.
ಬುಲ್ಸ್ ಗೆ ಹುರುಪು ತುಂಬಲು ಬಂದ ವಾಲ್
ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಭಾರತ ಎ, ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಶನಿವಾರ ಕುಟುಂಬ ಸಮೇತ ಬಂದು ಪ್ರೊ ಕಬಡ್ಡಿ ಲೀಗ ಪಂದ್ಯ ವೀಕ್ಷಿಸಿ ನಂತರ ತಂಡದ ಜೊತೆ ಗ್ರೂಪ್ ಫೋಟೊ ತೆಗೆಸಿಕೊಂಡರು.
ಕೋಚ್ ರಣಧೀರ್ ಸಿಂಗ್ ಅವರ ಸಂದೇಶ
ಅಭಿಮಾನಿಗಳಿಗೆ ಕೋಚ್ ರಣಧೀರ್ ಸಿಂಗ್ ಅವರ ಸಂದೇಶ.
ಫುಲ್ ಚಾರ್ಜ್ ಮಾಡಿ ಎಂದ ಫ್ಯಾನ್ಸ್
ಫುಲ್ ಚಾರ್ಜ್ ಮಾಡಿ ಎಂದ ಬೆಂಗಳೂರು ಬುಲ್ಸ್ ಫ್ಯಾನ್ಸ್
ಪ್ಲೇ ಆಫ್ ಗೆ ಎಂಟ್ರಿ ಗ್ಯಾರಂಟಿ
ಬುಲ್ಸ್ ತಂಡ ಈಗ ಪ್ಲೇ ಆಫ್ ಗೆ ಎಂಟ್ರಿ ಗ್ಯಾರಂಟಿ
ಅಜಯ್ ಠಾಕೂರ್ ಭರ್ಜರಿ ಪ್ರದರ್ಶನ
ಅಜಯ್ ಠಾಕೂರ್ ಭರ್ಜರಿ ಪ್ರದರ್ಶನದ ಬಗ್ಗೆ ಟ್ವೀಟ್.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications