ಪ್ರೊ ಕಬಡ್ಡಿ: ಅತಿ ಹೆಚ್ಚು ಮೌಲ್ಯಕ್ಕೆ ಹರಾಜಾದ ಟಾಪ್ 10 ಆಟಗಾರರು
ನವದೆಹಲಿ, ಮೇ 23 : ಪ್ರೊ ಕಬಡ್ಡಿ ಐದನೇ ಆವೃತ್ತಿಯ ಹರಾಜು ಪ್ರಕ್ರಿಯೆ ಸೋಮವಾರ ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ಖ್ಯಾತ ಕಬಡ್ಡಿ ಪಟು ನಿತಿನ್ ತೋಮರ್ ಅವರು ಅತಿ ಹೆಚ್ಚು ಮೌಲ್ಯ ಪಡೆದು ಹೊಸ ದಾಖಲೆ ಬರೆದರು.
ಜಿಎಂಆರ್ ಲಿಮಿಟೆಡ್ ಒಡೆತನದ ಉತ್ತರ ಪ್ರದೇಶ ತಂಡವು 93 ಲಕ್ಷ ನೀಡಿ ಅವರನ್ನು ಖರೀದಿಸಿತು. 22 ವರ್ಷದ ನಿತಿನ್ ತೋಮರ್ ಅವರು ಕಳೆದ ಆವೃತ್ತಿಯಲ್ಲಿ ಪುಣೆ ಪಲ್ಟನ್ ತಂಡದಲ್ಲಿ ಆಡಿದ್ದರು.
ಆಲ್ ರೌಂಡರ್ ನಿತಿನ್ ಅವರು ತಮಗಿಂತ ಅನುಭವಿ ಆಟಗಾರರಾದ ರೋಹಿತ್ ಕುಮಾರ್ ಮತ್ತು ಮಂಜಿತ್ ಚಿಲ್ಲಾರ್ ಅವರನ್ನು ಕೂಡ ಹಿಂದಿಕ್ಕಿದರು. ನಿತಿನ್ ಅವರು ಕಳೆದ ವರ್ಷ ನಡೆದಿದ್ದ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಇರಾನ್‌ನ ಮೊಹಮ್ಮದ್ದ ಮಗಸೌದೊಲು (8 ಲಕ್ಷ), ಜಪಾನಿನ ಟಕಾಮಿಸು ಕೊನೊ (8ಲಕ್ಷ) ಅವರು ಅತ್ಯಂಕ ಕಡಿಮೆ ಮೌಲ್ಯ ಪಡೆದವರಾಗಿದ್ದಾರೆ. ಹೆಚ್ಚು ಹಣಕ್ಕೆ ಹರಾಜಾದ ಟಾಪ್ 10 ಆಟಗಾರರ ಮಾಹಿತಿಗೆ ಮುಂದೆ ಓದಿ.

ದಾಖಲೆ ಬೆಲೆಗೆ ಹರಾಜಾದ ನಿತಿನ್ ತೋಮರ್
ಜಿಎಂಆರ್ ಲಿಮಿಟೆಡ್ ಒಡೆತನದ ಉತ್ತರ ಪ್ರದೇಶ ತಂಡವು 93 ಲಕ್ಷ ನೀಡಿ ನಿತಿನ್ ತೋಮರ್ ಅವರನ್ನು ಖರೀದಿಸಿದೆ. ನಿತಿನ್ ತೋಮರ್ ಅವರು ಅತಿ ಹೆಚ್ಚು ಹಣ ಪಡೆದ ಏಕೈಕ ಆಟಗಾರ ಎನಿಸಿಕೊಂಡರು.

ಆಲ್ ರೌಂಡರ್ ರೋಹಿತ್ ಕುಮಾರ್
ಆಲ್ ರೌಂಡರ್ ರೋಹಿತ್ ಕುಮಾರ್ ಅವರಿಗೆ ಬೆಂಗಳೂರು ಬುಲ್ಸ್ ತಂಡವು 81 ಲಕ್ಷ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಮಂಜಿತ್ ಚಿಲ್ಲಾರ್ (75.5 ಲಕ್ಷ)
ಮಂಜಿತ್ ಚಿಲ್ಲಾರ್ ಅವರನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 75.5 ಲಕ್ಷ ನೀಡಿ ಖರೀದಿಸಿತು. ಪುಣೇರಿ ತಂಡವು ಮಂಜಿತ್ ಚಿಲ್ಲಾರ್ ಅವರನ್ನು ಉಳಿಸಿ ಕೊಳ್ಳಲು ಪ್ರಯತ್ನಿಸಿತ್ತು. ಆದರೆ ಸ್ವತಃ ಮಂಜೀತ್ ಅವರೇ ತಾವು ಹರಾಜಿನಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

73 ಲಕ್ಷ ರು. ಗೆ ಹರಾಜಾದ ಸುರ್ಜಿತ್ ಸಿಂಗ್
ಕಳೆದ ವರ್ಷ ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿದ್ದ ಸುರ್ಜಿತ್ ಸಿಂಗ್ ಅವರಿಗೆ ಬೆಂಗಾಲ್ ವಾರಿಯರ್ಸ್ 73 ಲಕ್ಷ ರು. ನೀಡಿ ಖರೀದಿಸಿದೆ.

ರಾಜೇಶ್ ನರ್ವಾಲ್ ( 69 ಲಕ್ಷ)
ರಾಜೇಶ್ ನರ್ವಾಲ್ ಅವರನ್ನು ಹರಾಜು ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶ 69 ಲಕ್ಷ ರು, ಗೆ ಖರೀದಿ ಮಾಡಿತು. ಹರಾಜಯ ಪ್ರಕ್ರಿಯೆಯಲ್ಲಿ ರಾಜೇಶ್ ನರ್ವಾಲ್ ಅವರನ್ನು ಜೈಪುರ್ ಮಾಲೀಕ ಅಭಿಷೇಕ್ ಬಚ್ಚನ್ ಖರೀದಿಸಲು ಪ್ರಯತ್ನಿಸಿದರಾದರು.

ಪುಣೆ ಪಾಲಾದ ಸಂದೀಪ್ ನರ್ವಾಲ್
ಸಂದೀಪ್ ನರ್ವಾಲ್ ಅವರಿಗೆ 66 ಲಕ್ಷ ರು, ನೀಡಿ ಪುಣೇರಿ ಪಲ್ಟನ್ ತಂಡ ಖರೀದಿಸಿ. ಕಳೆದ ಪ್ರೊ ಕಬಡ್ಡಿಯಲ್ಲಿ ಸಂದೀಪ್ ನರ್ವಾಲ್ ತೆಲಗು ಟೈಟಾನ್ಸ್ ಪರ ಆಡಿದ್ದರು.

ಅಮಿತ್ ಹುಡಾ
ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿಯಲ್ಲಿ ಪಾಲ್ಗೊಳ್ಳುತ್ತಿರುವ ತಮಿಳುನಾಡು ತಂಡ ಅಮಿತ್ ಹುಡಾ ಅವರನ್ನು 63 ಲಕ್ಷ ರು, ಗೆ ಖರೀದಿಸಿದೆ.

ಬೆಸ್ಟ್ ಡಿಫೆಂಡರ್ ಜೀವ ಕುಮಾರ್
ಬೆಸ್ಟ್ ಡಿಫೆಂಡರ್ ಜೀವ ಕುಮಾರ್ ಅವರು 52 ಲಕ್ಷಕ್ಕೆ ಮಾರಾಟವಾಗಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಯು ಮುಂಬಾ ಪರ ಆಡಿದ್ದರು.

ಯು ಮುಂಬಾ ಪಾಲಾದ ಕುಲ್ ದೀಪ್ ಸಿಂಗ್
ಕುಲ್ ದೀಪ್ ಸಿಂಗ್ ಅವರನ್ನು ಯು ಮುಂಬಾ 51.5 ಲಕ್ಷ ರು, ಗಳಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

51 ಲಕ್ಷಕ್ಕೆ ಜಸ್ವೀರ್ ಸಿಂಗ್
ಜೈಪುರ್ ಪಿಂಕ್ ಪ್ಯಾಂಥರ್ಸ್ ಜಸ್ವೀರ್ ಸಿಂಗ್ ಅವರನ್ನು 51 ಲಕ್ಷ ರು. ನೀಡಿ ಖರೀದಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications