Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

5ನೇ ಆವೃತ್ತಿಯ ಪ್ರೊ ಕಬಡ್ಡಿ ಬಹುಮಾನ ಮೊತ್ತ ಹೆಚ್ಚಳ!

ನವದೆಹಲಿ, ಜುಲೈ 16 : ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಇದೇ ಜುಲೈ 28ರಿಂದ ಆರಂಭವಾಗಲಿದ್ದು, ಟೂರ್ನಿಯ ಒಟ್ಟು ಬಹುಮಾನ ಮೊತ್ತವನ್ನು 8 ಕೋಟಿ ರು.ಗೆ ಹೆಚ್ಚಿಸಲಾಗಿದೆ.

ಕಳೆದ ವರ್ಷ ನಾಲ್ಕನೇ ಆವೃತ್ತಿಯ ಟೂರ್ನಿಯಲ್ಲಿ 2 ಕೋಟಿ ಬಹುಮಾನ ಮೊತ್ತ ನೀಡಲಾಗಿತ್ತು. ಈ ವರ್ಷ ಟೂರ್ನಿಯ ಬಹುಮಾನದ ಮೊತ್ತ 6 ಕೋಟಿ ರು. ಏರಿಕೆಯಾಗಿದೆ.

Pro Kabaddi League 2017: Huge hike in prize money; winners to get Rs 8 crores

ಈ ಬಾರಿ 12 ತಂಡಗಳು 138 ಪಂದ್ಯಗಳನ್ನು ಆಡಲಿವೆ. ಪ್ರಶಸ್ತಿ ಗೆದ್ದ ತಂಡಕ್ಕೆ 3 ಕೋಟಿ ರು. ಲಭಿಸಲಿದೆ. ರನ್ನರ್ ಅಪ್ ತಂಡ 1.8 ಕೋಟಿ ಪಡೆದುಕೊಳ್ಳಲಿದೆ. ಮೂರನೇ ಸ್ಥಾನ ಗಳಿಸಿದ ತಂಡ 1.2 ಕೋಟಿ ರು. ತನ್ನದಾಗಿಸಿಕೊಳ್ಳಲಿದೆ.

ಉತ್ತಮ ರೈಡರ್, ಕ್ಯಾಚರ್, ಬೆಸ್ಟ್ ಆಲ್ ರೌಂಡರ್ ಸೇರಿದಂತೆ ಪ್ರತಿಭಾನ್ವಿತ ಆಟಗಾರ ಪ್ರಶಸ್ತಿಗೆ 15 ಲಕ್ಷ ರು.ಗಳನ್ನು ಮೀಸಲಿಡಲಾಗಿದೆ.

ಇದೇ ಜುಲೈ 28ರಂದು 5ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿ ಹೈದರಾಬಾದ್ ನಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ತೆಲಗು ಟೈಟಾನ್ಸ್ ಮತ್ತು ತಮಿಳ್ ತಲೈವಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ.

Story first published: Wednesday, January 3, 2018, 10:15 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+