5ನೇ ಆವೃತ್ತಿಯ ಪ್ರೊ ಕಬಡ್ಡಿಗೆ ಬೆಂಗಳೂರು ಬುಲ್ಸ್ ತಂಡ ಪ್ರಕಟ
ಬೆಂಗಳೂರು, ಜುಲೈ 17 : ಇದೇ ಜುಲೈ 28ರಿಂದ ಆರಂಭವಾಗಲಿರುವ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಭಾನುವಾರ ಬೆಂಗಳೂರು ಬುಲ್ಸ್ ತಂಡವನ್ನು ಪ್ರಕಟಿಸಲಾಗಿದೆ.
ಸ್ಟಾರ್ ರೈಡರ್ ರೋಹಿತ್ ಕುಮಾರ್ ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಡಿಫೆಂಡರ್ ರವಿಂದರ್ ಪಹಾಲ್ ಬುಲ್ಸ್ ತಂಡದ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

'ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಳಿತ ಮಂಡಳಿ ನೀಡಿರುವ ಜವಾಬ್ದಾರಿಯನ್ನು ಉಳಿಸಿಕೊಳ್ಳಲು ಶ್ರಮಿಸಲಿದ್ದೇನೆ' ಎಂದು ಬುಲ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುವ ತಂಡಕ್ಕೆ ಅಂತರರಾಷ್ಟ್ರೀಯ ಮಾಜಿ ಆಟಗಾರ ರಣಬೀರ್ ಸಿಂಗ್ ಸಲಹೆಗಾರರಾಗಿದ್ದಾರೆ.
ತಂಡ ಇಂತಿದೆ: ರೋಹಿತ್ ಕುಮಾರ್ (ನಾಯಕ), ರವಿಂದರ್ ಪಹಾಲ್ (ಉಪ ನಾಯಕ), ಹರೀಶ್ ನಾಯಕ್, ರೋಹಿತ್, ಗುರ್ವಿಂದರ್ ಸಿಂಗ್, ಅಂಕಿತ್ ಸಂಗ್ವಾನ್, ಮಹೇಂದರ್ ಸಿಂಗ್, ಪ್ರೀತಮ್ ಚಿಲ್ಲಾರ್, ಅಮಿತ್, ಆಶಿಶ್ ಕುಮಾರ್, ಸಚಿನ್ ಕುಮಾರ್, ಅಮಿತ್ ಶೆರನ್, ಸಿನೊತರಣ್ ಕನ್ನೇಶರಾಜ, ಪ್ರದೀಪ್, ಅಜಯಕುಮಾರ್, ಸುನಿಲ್, ಸುಮಿತ್, ಅಂಜಯ್, ಕುಲ್ ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications