Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2018 ಮೊದಲ ದಿನದ ಹರಾಜಿನಲ್ಲಿ ಯಾರು ಯಾವ ತಂಡಕ್ಕೆ

Monu Goyat

ಬೆಂಗಳೂರು, ಮೇ 30: ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) 2018ರ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯ ಮೊದಲ ದಿನದಂದು ಐವರು ಆಟಗಾರರು 1 ಕೋಟಿ ರುಗೂ ಅಧಿಕ ಬಿಡ್ಡಿಂಗ್ ಪಡೆದು ಅಚ್ಚರಿ ಮೂಡಿಸಿದರು. ಪಿಕೆಎಲ್ ಹರಾಜು ಇತಿಹಾಸದಲ್ಲೇ ಭಾರಿ ಬೆಲೆ ಆಟಗಾರರು ಈ ಬಾರಿ ಮಾರಾಟವಾದರು.

ರೈಡರ್ ಮೋನು ಗೋಯತ್ ಅವರು ಹೊಸ ಇತಿಹಾಸ ನಿರ್ಮಿಸಿ, ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಮೋನು ಅವರನ್ನು 1.51 ಕೋಟಿ ರು ನೀಡಿ ಹರ್ಯಾಣ ಸ್ಟೀಲರ್ಸ್ ತಂಡ ಖರೀದಿಸಿತು.

ಒಟ್ಟು 422 ಆಟಗಾರರು ಹರಾಜಿಗೆ ಒಳಪಡಲಿದ್ದಾರೆ. 58 ವಿದೇಶಿ ಆಟಗಾರರು, 87 ಆಟಗಾರರು(18 ರಿಂದ 22 ವರ್ಷ ವಯೋಮಿತಿ) ಫ್ಯೂಚರ್ ಕಬಡ್ಡಿ ಹೀರೋಸ್ ಕಾರ್ಯಕ್ರಮ(FKH) ದಡಿಯಲ್ಲಿ ಹರಾಜಿಗೆ ಲಭ್ಯರಾಗಿದ್ದಾರೆ.

ಅಕ್ಟೋಬರ್ 19ರಿಂದ 6ನೇ ಆವೃತ್ತಿಯ ಸ್ಪರ್ಧೆ ಆರಂಭವಾಗಲಿದ್ದರೆ, 2019ರ ಜುಲೈ 19ರಂದು 7ನೇ ಆವೃತ್ತಿಯ ಸ್ಪರ್ಧೆಗೆ ಚಾಲನೆ ದೊರೆಯಲಿದೆ. ಈ ಹಿಂದೆ 5ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ತಂಡಗಳ ಸಂಖ್ಯೆಯನ್ನು 8 ರಿಂದ 12ಕ್ಕೆ ಏರಿಕೆ ಮಾಡಲಾಗಿತ್ತು.

ಮೋನು ಅಲ್ಲದೆ ನಿರೀಕ್ಷೆಯಂತೆ ರಾಹುಲ್ ಚೌಧರಿ ಅವರನ್ನು ತೆಲುಗು ಟೈಟಾನ್ ತಂಡ ಎಫ್ ಬಿಎಂ ಬಳಸಿ ತಮ್ಮ ಬಳಿ ಉಳಿಸಿಕೊಳ್ಳಲು 1.28 ಕೋಟಿ ರು ನೀಡಿತು.

ರಿಷಾಂತ್ ದೇವಾಡಿಗ, ನಿತಿನ್ ತೋಮರ್ ಹಾಗೂ ದೀಪಕ್ ನಿವಾಸ್ ಹೂಡಾ ಕೋಟಿ ಕ್ಲಬ್ ಸೇರಿದ ಆಟಗಾರರಾಗಿದ್ದಾರೆ. ಇವರೆಲ್ಲರಿಗೂ ಮುನ್ನ ಇರಾನಿನ ಆಟಗಾರ ಫೆಜೆಲ್ ಅಟ್ರಾಚಲಿ 1 ಕೋಟಿ ರು ಬಿಡ್ಡಿಂಗ್ ಪಡೆದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡರು. ಇವರನ್ನು ಯು ಮುಂಬಾ ಖರೀದಿಸಿತು.

ಪಿಕೆಎಲ್ ಸೀಸನ್ 6ಗಾಗಿ ಬುಧವಾರ(ಮೇ30)ದಂದು ನಡೆದ ಹರಾಜು ಪ್ರಕ್ರಿಯೆಯ ಮೊದಲ ದಿನದಂದು ಮಾರಾಟವಾದ ಆಟಗಾರರ ಪಟ್ಟಿ ಹೀಗಿದೆ: ಮೊದಲಿಗೆ ಭಾರತೀಯ ಆಟಗಾರರು
ಆಟಗಾರ- ತಂಡ

1. ರಣ್ ಸಿಂಗ್ -ಬೆಂಗಾಲ್ ವಾರಿಯರ್ಸ್
2. ಮಂಜೀತ್ ಚಿಲ್ಲಾರ್ -ತಮಿಳ್ ತಲೈವಾಸ್
3. ದೀಪಕ್ ಹೂಡಾ- ಜೈಪುರ್ ಪಿಂಕ್ ಪ್ಯಾಂಥರ್ಸ್
4. ಕುಲದೀಪ್ ಸಿಂಗ್ -ಪಟ್ನಾ ಪೈರೇಟ್ಸ್
5. ಸಂದೀಪ್ ಧುಲ್ -ಜೈಪುರ್ ಪಿಂಕ್ ಪ್ಯಾಂಥರ್ಸ್
6. ಮೋಹಿತ್ ಚಿಲ್ಲಾರ್ -ಜೈಪುರ್ ಪಿಂಕ್ ಪ್ಯಾಂಥರ್ಸ್
7. ಸುರೇಂದ್ರ ನಾಡಾ- ಹರ್ಯಾಣ ಸ್ಟೀಲರ್ಸ್
8. ದರ್ಶನ್ ಜೆ-ತಮಿಳ್ ತಲೈವಾಸ್
9.ಜೀವಕುಮಾರ್ -ಯುಪಿ ಯೋಧಾಸ್
10. ಪರ್ವೇಶ್ ಭೈನ್ಸ್ ವಾಲ್- ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
11. ಶ್ರೀಕಾಂತ್ ಜಾಧವ್-ಯುಪಿ ಯೋಧಾಸ್
12. ನಿತಿನ್ ತೋಮಾರ್- ಪುಣೇರಿ ಪಲ್ಟನ್
13. ಅನುಪ್ ಕುಮಾರ್- ಜೈಪುರ್ ಪಿಂಕ್ ಪ್ಯಾಂಥರ್ಸ್
14. ವಜೀರ್ ಸಿಂಗ್ -ಹರ್ಯಾಣ ಸ್ಟೀಲರ್ಸ್
15. ರಿಷಾಂಕ್ ದೇವಾಡಿಗ-ಯುಪಿ ಯೋಧಾಸ್
16. ಕೆ. ಪ್ರಪಂಜನ್-ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
17. ಪವನ್ ಕುಮಾರ್- ದಬ್ಬಾಂಗ್ ಡೆಲ್ಲಿ
18 ಸುಕೇಶ್ ಹೆಗ್ಡೆ- ತಮಿಳ್ ತಲೈವಾಸ್
19 ಕಾಶಿಲಿಂಗ್ ಅಡಕೆ- ಬೆಂಗಳೂರು ಬುಲ್ಸ್
20 ರಾಹುಲ್ ಚೌಧರಿ-ತೆಲುಗು ಟೈಟಾನ್ಸ್
21 ಮೋನು ಗೋಯರ್- ಹರ್ಯಾಣ ಸ್ಟೀಲರ್ಸ್


ವಿದೇಶಿ ಆಟಗಾರರು
1. ಫಜೆಲ್ ಅಟ್ರಾಚಲಿ -ಯು ಮುಂಬಾ -1 ಕೋಟಿ ರು
2. ಜಂಗ್ ಕುನ್ ಲೀ-ಬೆಂಗಾಲ್ ವಾರಿಯರ್ಸ್- 33ಲಕ್ಷ
3. ಅಬೊಜಾರ್ ಮಿಘೈ -ತೆಲುಗು ಟೈಟಾನ್ಸ್- 76 ಲಕ್ಷ
4. ಜಿಯಾ ಉರ್ ರಹ್ಮಾನ್ -ಬೆಂಗಾಲ್ ವಾರಿಯರ್ಸ್- 33 ಲಕ್ಷ
5 ಹಡಿ ತಜಿಕ್ -ಯು ಮುಂಬಾ
6 ಡೊಂಗ್ ಜು ಹಾಂಗ್ -ಬೆಂಗಳೂರು ಬುಲ್ಸ್- 8 ಲಕ್ಷ
7 ಟೆಡೊಕ್ ಎಯೋಮ್ -ಪಟ್ನಾ ಪೈರೇಟ್ಸ್-11.4 ಲಕ್ಷ
8 ಅಬೊಲ್ಫಜಲ್ ಮಘಾಸೊಡ್ಲೊ- ಯು ಮುಂಬಾ
9 ಖೋಮ್ಸನ್ ಥೋಂಗ್ಖಮ್ -ದಬ್ಬಾಂಗ್ ಡೆಲ್ಲಿ

Story first published: Thursday, May 31, 2018, 0:15 [IST]
Other articles published on May 31, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+