ಪಿಕೆಎಲ್ ಕಳೆದ ಸೀಸನ್ ಗಳೆಡೆಗೆ ಸಣ್ಣದೊಂದು ಇಣುಕುನೋಟ..

ನವದೆಹಲಿ, ಜೂ. 2: ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯತ್ತ ಮುನ್ನುಗ್ಗುತ್ತಿದ್ದೇವೆ. ಕ್ರಿಕೆಟ್ ನಿಂದಾಗಿ ಮೂಲೆಗುಂಪಾಗಿದ್ದ ಬಹುತೇಕ ಕ್ರೀಡೆಗಳಲ್ಲಿ ಒಂದಾಗಿದ್ದ ಕಬಡ್ಡಿಗೆ ಕೊಂಚ ಚೈತನ್ಯ ನೀಡಿದ್ದು ಇದೇ ಪಿಕೆಎಲ್. 2018ರ ಕಬಡ್ಡಿ ಜಿದ್ದಾಜಿದ್ದಿಗೆ ಪ್ರವೇಶಿಸುವ ಮುನ್ನ ಹಿಂದಿನ ಆವೃತ್ತಿಗಳವೊಮ್ಮೆ ಇಣುಕಿ ನೋಡೋಣವೇ?
ಪ್ರೊ ಕಬಡ್ಡಿ ಲೀಗ್ ಹಿಂದಿನ ಸೀಸನ್ ಗಳಲ್ಲಿ ತಂಡಗಳ ಸೋಲು-ಗೆಲುವುಗಳನ್ನು ತಾಳೆ ಹಾಕಿದರೆ ಬಲಿಷ್ಟ ತಂಡವಾಗಿ ಪಾಟ್ನಾ ಪೈರೇಟ್ಸ್ ತಂಡವೇ ಕಾಣಿಸುತ್ತದೆ. ಒಟ್ಟು 5 ಸೀಸನ್ ಗಳಲ್ಲಿ ಮೂರು ಬಾರಿ ಚಾಂಪಿಯನ್ ಆಗಿ ಪಾಟ್ನಾ ಪೈರೇಟ್ಸ್ ಹೊರಹೊಮ್ಮಿದೆ.
2017ರ ಪಿಕೆಎಲ್ ಆವೃತ್ತಿಯನ್ನು ಸೇರಿಸಿ ಕ್ರಮವಾಗಿ 4ನೇ ಮತ್ತು 3ನೇ ಆವೃತ್ತಿಗಳಲ್ಲಿ ಪಾಟ್ನಾ ಪೈರೇಟ್ಸ್ ಚಾಂಪಿಯನ್ ಆಗಿ ಗುರುತಿಸಿಕೊಂಡಿತ್ತು. ಈ ಬಾರಿಯೂ ಪಾಟ್ನಾ ಪೈರೇಟ್ಸ್ ನಲ್ಲಿ ಪ್ರತಿಭಾನ್ವಿತ ಆಟಗಾರರ ಪಡೆಯೇ ಇದ್ದು ಪಾಟ್ನಾ ಗೆಲ್ಲುವ ತಂಡವಾಗಿ ಕಾಣಿಸಿಕೊಂಡಿದೆ.

ಸೀಸನ್ -1
2014ರ ಜುಲೈ 26 ರಿಂದ ಆಗಸ್ಟ್ 31ರ ವರೆಗೆ ಪ್ರೊ ಕಬಡ್ಡಿ ಲೀಗ್ ಮೊದಲ ಆವೃತ್ತಿ ನಡೆದಿತ್ತು. ಅಂತಿಮ ದಿನ ಮುಂಬೈಯಲ್ಲಿ ನಡೆದಿದ್ದ ಫೈನಲ್ ಪ್ರರ್ಧೆಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಯೂ ಮುಂಬಾ ವಿರುದ್ಧ ಜಯ ಸಾಧಿಸಿತ್ತು. ಈ ಸಂದರ್ಭ ಜೈಪುರ-ಮುಂಬೈ ತಂಡಗಳು 35-24 ಪಾಯಿಂಟ್ಸ್ ಗೆದ್ದಿದ್ದವು.

ಸೀಸನ್-2
2015ರ ಜುಲೈ 18ರಿಂದ ಆಗಸ್ಟ್ 23ರ ವರೆಗೆ ನಡೆದಿದ್ದ ಪಿಕೆಎಲ್ ಎರಡನೇ ಸೀಸನ್ ನಲ್ಲಿ ಯೂ ಮುಂಬಾ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಮುಂಬೈ ನಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಯೂ ಮುಂಬಾ ತಂಡ ಬೆಂಗಳೂರು ಬುಲ್ಸ್ ವಿರುದ್ಧ ಜಯ ಸಾಧಿಸಿತ್ತು.

ಸೀಸನ್-3
ಪಿಕೆಎಲ್ ಮೂರನೇ ಸೀಸನ್ ನಡೆದಿದ್ದು 2016ರ ಜನವರಿ-ಫೆಬ್ರವರಿ ತಿಂಗಳಲ್ಲಿ. ಇದರಲ್ಲಿ ಪಾಟ್ನಾ ಪೈರೇಟ್ಸ್ ತಂಡ ವಿಜಯ ಪತಾಕೆ ಹಾರಿಸಿತ್ತು. ದಿಲ್ಲಿಯಲ್ಲಿ ನಡೆದಿದ್ದ ಫೈನಲ್ ಕಾದಾಟದಲ್ಲಿ ಪಾಟ್ನಾ ಪೈರೇಟ್ಸ್ ತಂಡ ಯೂ ಮುಂಬಾವನ್ನು 3 ಪಾಯಿಂಟ್ಸ್ ನಿಂದ ಹಿಮ್ಮೆಟ್ಟಿಸಿತ್ತು.

ಸೀಸನ್-4
2016ರಲ್ಲೇ ಪಿಕೆಎಲ್ ನಾಲ್ಕನೇ ಸೀಸನ್ ನಡೆದಿತ್ತು. ಮೂರನೇ ಸೀಸನ್ ಜನವರಿ-ಫೆಬ್ರವರಿಯಲ್ಲಿ ನಡೆದಿದ್ದರೆ, ನಾಲ್ಕನೇ ಸೀಸನ್ ಜೂನ್-ಜುಲೈ ನಲ್ಲಿ ನಡೆದಿತ್ತು. ಪಿಕೆಎಲ್ 4ನೇ ಸೀಸನ್ ನಲ್ಲೂ ಪಾಟ್ನಾ ಪೈರೇಟ್ ತಂಡವೇ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿತ್ತು. ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ತಂಡ ಜೈಪುರ್ ಪಿಂಕ್ ಪ್ಯಾಥರ್ಸ್ ತಂಡವನ್ನು 37-29 ಅಂತರದಿಂದ ಸೋಲಿಸಿತ್ತು.

ಸೀಸನ್-5
2017ರ ಜುಲೈ 28ರಿಂದ ಸೀಸನ್-5 ಆರಂಭಗೊಂಡಿತ್ತು. ಐದನೇ ಸೀಸನ್ ನಲ್ಲಿ ಹರ್ಯಾಣ ಸ್ಟೀಲರ್ಸ್, ತಮಿಳ್ ತಲೈವಾಸ್, ಯೂಪಿ ಯೋಧ ಮತ್ತು ಗುಜರಾತ್ ಫಾರ್ಚೂನ್ ಗೇಂಟ್ಸ್ ನಾಲ್ಕು ಹೆಚ್ಚುವರಿ ತಂಡಗಳು ಸೇರಿಕೊಂಡವು. ಹಿಂದಿನ ಸೀಸನ್ ಗಳಲ್ಲಿ 8 ತಂಡಗಳು ಸ್ಪರ್ಧಿಸಿದ್ದು, 5ನೇ ಆವೃತ್ತಿಯಲ್ಲಿ 12 ತಂಡಗಳು ಕಣಕ್ಕಿಳಿದವು. ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಗುಜರಾತ್ ಫಾರ್ಚೂನ್ ಗೇಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ಮತ್ತೆ ಪಾಟ್ನಾ ಪೈರೇಟ್ಸ್ ತಂಡವೇ 55-38 ಅಂತರದಿಂದ ಗುಜರಾತನ್ನು ಸೋಲಿಸಿ ಹ್ಯಾಟ್ರಿಕ್ ಚಾಂಪಿಯನ್ ಎನಿಸಿಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications