ಪ್ರೊ ಕಬಡ್ಡಿ ಲೀಗ್ 2018: ಪುಣೇರಿ ಪಲ್ಟಾನ್ ನೆಲಕ್ಕೆಡವಿದ ತೆಲುಗು ಟೈಟಾನ್ಸ್

ಮುಂಬೈ, ನವೆಂಬರ್ 13: ಮುಂಬೈಯಲ್ಲಿನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಮಂಗಳವಾರ (ನವೆಂಬರ್ 13) ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡಕ್ಕೆ ತೆಲುಗು ಟೈಟಾನ್ಸ್ 28-25ರಿಂದ ಮಣ್ಣುಮುಕ್ಕಿಸಿತು.
ರಾಹುಲ್ ಚೌಧರಿ ಮತ್ತು ನೀಲೇಶ್ ಸಾಲುಂಕೆ ಅವರ ಚತುರ ಆಟ ಟೈಟಾನ್ಸ್ ಗೆ ಗೆಲುವನ್ನು ತಂದಿತು. ರಾಹುಲ್ 8 ರೈಡಿಂಗ್ ಪಾಯಿಂಟ್ ಸೇರಿಸಿದರೆ, ನೀಲೇಶ್ 5 ರೈಡಿಂಗ್, 1 ಬೋನಸ್ ಪಾಯಿಂಟ್ ತಂಡಕ್ಕೆ ಸೇರಿಸಿದರು. ಕೃಷ್ಣ ಮದಾನೆ 4 ಟ್ಯಾಕ್ಲ್ ಪಾಯಿಂಟ್ ಸೇರಿಸಿದ್ದು ತಂಡಕ್ಕೆ ಬಲ ತುಂಬಿತು.
ಪುಣೇರಿ ಪಲ್ಟಾನ್ ಪರ ಸಂದೀಪ್ ನರ್ವಾಲ್ 7 ಪಾಯಿಂಟ್, ಅಕ್ಷಯ್ ಜಾಧವ್ ಮತ್ತು ಮೋನು ತಲಾ 5 ಪಾಯಿಂಟ್ ಸೇರಿಸಿದರಾದರೂ ಕೇವಲ 3 ಅಂಕದಿಂದ ತೆಲುಗು ತಂಡ ಗೆಲುವನ್ನು ಪಡೆಯಿತು. ಈ ಇಂಟರ್ ಝೋನ್ ಪಂದ್ಯದ ಬಳಿಕ ಬಿ ಝೋನ್ ನಲ್ಲಿ ಟೈಟಾನ್ಸ್ ದ್ವಿತೀಯ ಸ್ಥಾನದಲ್ಲಿದೆ. ಬೆಂಗಳೂರು ಅಗ್ರ ಸ್ಥಾನದಲ್ಲಿದೆ.
Story first published: Tuesday, November 13, 2018, 22:35 [IST]
Other articles published on Nov 13, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications