ಪ್ರೊ ಕಬಡ್ಡಿ: ಚೆನ್ನೈ ಎದುರು ಬೆಂಗಳೂರಿಗೆ, ಜೈಪುರ್ ಎದುರು ಮುಂಬೈಗೆ ಜಯ

ಚೆನ್ನೈ, ಅಕ್ಟೋಬರ್ 10: ಚೆನ್ನೈ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಬುಧವಾರದ (ಅಕ್ಟೋಬರ್ 10) ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ಯು ಮುಂಬಾ ತಂಡದ 39-32 ಅಂತರದಿಂದ ಗೆಲುವು ಸಾಧಿಸಿದೆ. ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ 48-37ರ ಜಯ ದಾಖಲಿಸಿದೆ.
ಬುಧವಾರ ನಡೆದ ಪ್ರೋ ಕಬಡ್ಡಿ 7ನೇ ಪಂದ್ಯದಲ್ಲಿ ಅನೂಪ್ ಕುಮಾರ್ ನಾಯಕತ್ವದ ಯು ಮುಂಬಾ ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು 39-32 ಅಂತರದಿಂದ ಗೆದ್ದು ಬೀಗಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಎದುರು ಮುಂಬೈ ಪಂದ್ಯ ಟೈ ಮಾಡಿಕೊಂಡಿತ್ತು.
ಬುಧವಾರದ ಎರಡನೇ ಮತ್ತು ಕೆಪಿಎಲ್ 8ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ಬೆಂಗಳೂರು ಬುಲ್ಸ್ ಭರ್ಜರಿ 48-37ರ ಗೆಲುವನ್ನಾಚರಿಸಿತು. ತಲೈವಾಸ್ ತಂಡ ಕೂಡ ಗೆಲುವಿಗಾಗಿ ಸಾಕಷ್ಟು ಕೊಸರಾಟ ನಡೆಸಿತಾದರೂ ಬುಲ್ಸ್ ಪಂದ್ಯ ಬಿಟ್ಟು ಕೊಡಲಿಲ್ಲ. ತಲೈವಾಸ್ ಗೆ ಸತತ ಮೂರನೇ ಸೋಲಿದು. ಈ ಹಿಂದೆ ಯುಪಿ ಯೋಧ ಮತ್ತು ತೆಲುಗು ಟೈಟಾನ್ಸ್ ಎದುರೂ ತಲೈವಾಸ್ ಸೋತಿತ್ತು.
Story first published: Wednesday, October 10, 2018, 23:01 [IST]
Other articles published on Oct 10, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications