Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2023: ಡಿ.2ರಿಂದ ಪ್ರೊ ಕಬಡ್ಡಿ ಲೀಗ್‌ಗೆ ಚಾಲನೆ; ಬೆಂಗಳೂರು ಬುಲ್ಸ್ ಸಂಪೂರ್ಣ ವೇಳಾಪಟ್ಟಿ, ಪೂರ್ಣ ತಂಡ

ಬಹು ನಿರೀಕ್ಷಿತ 2023ರ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್ 10) ಹತ್ತನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಪ್ರಮುಖ 12-ನಗರಗಳ ಕಾರವಾನ್ ಸ್ವರೂಪಕ್ಕೆ ಮರಳುತ್ತಿರುವ ಪಿಕೆಎಲ್, 2023ರ ಡಿಸೆಂಬರ್ 2ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ಚಾಲನೆ ಸಿಗಲಿದೆ.

ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪೈಪೋಟಿಯ ಪುನರಾರಂಭದೊಂದಿಗೆ ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಸೀಸನ್ ಆರಂಭವಾಗಲಿದೆ.

pro-kabaddi-league-2023

ಪ್ರೊ ಕಬಡ್ಡಿ ಲೀಗ್ ಪ್ರತಿಯೊಂದು ಫ್ರಾಂಚೈಸಿಯ ತವರು ನಗರಗಳಿಗೆ ಸ್ಥಳಾಂತರಗೊಳ್ಳಲಿದೆ. ಲೀಗ್ ಹಂತವು ಡಿಸೆಂಬರ್ 2, 2023ರಿಂದ ಫೆಬ್ರವರಿ 21, 2024ರವರೆಗೆ ಸುದೀರ್ಘವಾಗಿ ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಪ್ಲೇಆಫ್‌ಗಳ ವೇಳಾಪಟ್ಟಿಯನ್ನು ನಂತರದ ದಿನಾಂಕದಲ್ಲಿ ಪ್ರಕಟಿಸಲಾಗುವುದು.

ಅಹಮದಾಬಾದ್ ಲೆಗ್: 2023ರ ಡಿಸೆಂಬರ್ 2ರಿಂದ 7ರವರೆಗೆ ನಡೆಯಲಿದೆ.

ಬೆಂಗಳೂರು ಲೆಗ್: 2023ರ ಡಿಸೆಂಬರ್ 8ರಿಂದ 13ರವರೆಗೆ ನಡೆಯಲಿದೆ.

ಪುಣೆ ಲೆಗ್: ಡಿಸೆಂಬರ್ 15-20

ಚೆನ್ನೈ ಲೆಗ್: ಡಿಸೆಂಬರ್ 22-27

ನೋಯ್ಡಾ ಲೆಗ್: ಡಿಸೆಂಬರ್ 29ರಿಂದ ಜನವರಿ 3

ಮುಂಬೈ ಲೆಗ್: ಜನವರಿ 5-10

ಜೈಪುರ ಲೆಗ್: ಜನವರಿ 12-17

ಹೈದರಾಬಾದ್ ಲೆಗ್: ಜನವರಿ 19-24

ಪಾಟ್ನಾ ಲೆಗ್: ಜನವರಿ 26-31

ದೆಹಲಿ ಲೆಗ್: ಫೆಬ್ರವರಿ 2-7

ಕೋಲ್ಕತ್ತಾ ಲೆಗ್: ಫೆಬ್ರವರಿ 9-14

ಪಂಚಕುಲ ಲೆಗ್: ಫೆಬ್ರವರಿ 16-21

pro-kabaddi-league-2023

ಪ್ರೊ ಕಬಡ್ಡಿ ಸೀಸನ್ 10ರ ಬೆಂಗಳೂರು ಬುಲ್ಸ್ ತಂಡದ ಪೂರ್ಣ ವೇಳಾಪಟ್ಟಿ

ಬಲಿಷ್ಠ ಬೆಂಗಳೂರು ಬುಲ್ಸ್ 2023ರ ಪ್ರೊ ಕಬಡ್ಡಿ ಲೀಗ್‌ನ ತನ್ನ ಮೊದಲ ಪಂದ್ಯವನ್ನು ಗುಜರಾತ್ ಜೈಂಟ್ಸ್ ವಿರುದ್ಧ ಡಿಸೆಂಬರ್ 3ರಂದು ಭಾನುವಾರ ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾದ ದಿ ಅರೆನಾದಲ್ಲಿ ಆಡಲಿದೆ.

ಡಿಸೆಂಬರ್ 3: ಗುಜರಾತ್ ಜೈಂಟ್ಸ್ vs ಬೆಂಗಳೂರು ಬುಲ್ಸ್ - ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣ

ಡಿಸೆಂಬರ್ 4: ಬೆಂಗಳೂರು ಬುಲ್ಸ್ vs ಬೆಂಗಳೂರು ಬುಲ್ಸ್ - ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣ

ಡಿಸೆಂಬರ್ 8: ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ - ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು.

ಡಿಸೆಂಬರ್ 9: ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್ - ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು.

ಡಿಸೆಂಬರ್ 11: ಬೆಂಗಳೂರು ಬುಲ್ಸ್ vs ಯುಪಿ ಯೋಧಾಸ್ - ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು.

ಡಿಸೆಂಬರ್ 13: ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ - ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು.

ಡಿಸೆಂಬರ್ 20: ಪುಣೇರಿ ಪಲ್ಟಾನ್ vs ಬೆಂಗಳೂರು ಬುಲ್ಸ್ - ಬಾಲೆವಾಡಿ ಕ್ರೀಡಾ ಸಂಕೀರ್ಣದ ಬ್ಯಾಡ್ಮಿಂಟನ್ ಹಾಲ್, ಪುಣೆ.

ಡಿಸೆಂಬರ್ 24: ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ - SDAT ಮಲ್ಟಿ-ಪರ್ಪಸ್ ಒಳಾಂಗಣ ಕ್ರೀಡಾಂಗಣ, ಚೆನ್ನೈ.

ಡಿಸೆಂಬರ್ 29: ಯುಪಿ ಯೋಧಾಸ್ vs ಬೆಂಗಳೂರು ಬುಲ್ಸ್ - ನೋಯ್ಡಾ ಒಳಾಂಗಣ ಕ್ರೀಡಾಂಗಣ, ನೋಯ್ಡಾ.

ಡಿಸೆಂಬರ್ 31: ತಮಿಳು ತಲೈವಾಸ್ vs ಬೆಂಗಳೂರು ಬುಲ್ಸ್ - ನೋಯ್ಡಾ ಒಳಾಂಗಣ ಕ್ರೀಡಾಂಗಣ, ನೋಯ್ಡಾ.

ಜನವರಿ 5: ಯು ಮುಂಬಾ vs ಬೆಂಗಳೂರು ಬುಲ್ಸ್ - ಡೋಮ್, NSCI, ಮುಂಬೈ.

ಜನವರಿ 8: ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್ - ಡೋಮ್, NSCI, ಮುಂಬೈ.

ಜನವರಿ 15: ಬೆಂಗಾಲ್ ವಾರಿಯರ್ಸ್ vs ಬೆಂಗಳೂರು ಬುಲ್ಸ್ - SMS ಒಳಾಂಗಣ ಕ್ರೀಡಾಂಗಣ, ಜೈಪುರ.

ಜನವರಿ 19: ತೆಲುಗು ಟೈಟಾನ್ಸ್ vs ಬೆಂಗಳೂರು ಬುಲ್ಸ್ - ಗಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್.

ಜನವರಿ 21: ಬೆಂಗಳೂರು ಬುಲ್ಸ್ vs ತಮಿಳ್ ತಲೈವಾಸ್ - ಗಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್.

ಜನವರಿ 28: ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಳೂರು ಬುಲ್ಸ್ - ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣ, ಪಾಟ್ನಾ.

ಜನವರಿ 31: ಪಾಟ್ನಾ ಪೈರೇಟ್ಸ್ vs ಬೆಂಗಳೂರು ಬುಲ್ಸ್ - ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣ, ಪಾಟ್ನಾ.

ಫೆಬ್ರವರಿ 4: ಬೆಂಗಳೂರು ಬುಲ್ಸ್ vs ಯು ಮುಂಬಾ - ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣ, ದೆಹಲಿ.

ಫೆಬ್ರವರಿ 7: ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ - ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣ, ದೆಹಲಿ.

ಫೆಬ್ರವರಿ 11: ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್ - ನೇತಾಜಿ ಒಳಾಂಗಣ ಕ್ರೀಡಾಂಗಣ, ಕೋಲ್ಕತ್ತಾ.

ಫೆಬ್ರವರಿ 18: ದಬಾಂಗ್ ದೆಹಲಿ vs ಬೆಂಗಳೂರು ಬುಲ್ಸ್ - ತೌ ದೇವಿಲಾಲ್ ಒಳಾಂಗಣ ಕ್ರೀಡಾಂಗಣ, ಪಂಚಕುಲ.

ಫೆಬ್ರವರಿ 21: ಹರಿಯಾಣ ಸ್ಟೀಲರ್ಸ್ vs ಬೆಂಗಳೂರು ಬುಲ್ಸ್ - ತೌ ದೇವಿಲಾಲ್ ಒಳಾಂಗಣ ಕ್ರೀಡಾಂಗಣ, ಪಂಚಕುಲ.

ಪ್ರೊ ಕಬಡ್ಡಿ ಸೀಸನ್ 10ರ ಬೆಂಗಳೂರು ಬುಲ್ಸ್ ಪೂರ್ಣ ತಂಡ

ಭರತ್, ವಿಕಾಶ್ ಖಂಡೋಲಾ, ಮೋನು, ಪಿಯೋಟರ್ ಪಮುಲಕ್, ಅಭಿಷೇಕ್ ಸಿಂಗ್, ಬಂಟಿ, ನೀರಜ್ ನರ್ವಾಲ್, ಸುಶೀಲ್, ಅಕ್ಷಿತ್, ಸುರ್ಜೀತ್ ಸಿಂಗ್, ವಿಶಾಲ್, ರಕ್ಷಿತ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸೌರಭ್ ನಂದಲ್, ಅಮನ್, ಸುಂದರ್, ಯಶ್ ಹೂಡಾ, ಮೊಹಮ್ಮದ್ ಲಿಟನ್ ಅಲಿ, ಆದಿತ್ಯ ಪೊವಾರ್, ಪಾರ್ಟೀಕ್, ಅರುಳ್ನಂತಬಾಬು, ಅಂಕಿತ್, ರೋಹಿತ್ ಕುಮಾರ್, ರಾನ್ ಸಿಂಗ್, ಸಚಿನ್ ನರ್ವಾಲ್.

Story first published: Tuesday, November 7, 2023, 15:19 [IST]
Other articles published on Nov 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+