Pro Kabaddi League 2024: ಇಂದಿನಿಂದ ಪ್ರೊ ಕಬಡ್ಡಿ ಲೀಗ್: ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ vs ತೆಲಗು ಟೈಟನ್ಸ್
ದೇಶದಲ್ಲಿ ಸದ್ಯ ಕ್ರಿಕೆಟ್ ಹವಾ ಮನೆ ಮಾಡಿದೆ. ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ಪಂದ್ಯಗಳು ನಡೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ತೆಲಗು ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ.
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ಹೈದರಾಬಾದ್ನಲ್ಲಿ ಮೊದಲ ಚರಣದ ಕಬಡ್ಡಿ ಪಂದ್ಯಗಳು ನಡೆಯಲಿವೆ. ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ನವೆಂಬರ್ 10 ರಿಂದ ಡಿಸೆಂಬರ್ 2 ರವರೆಗೆ ಎರಡನೇ ಚರಣದ ಪಂದ್ಯ ನಡೆಯಲಿದೆ. ಪುಣೆಯಲ್ಲಿ ಡಿಸೆಂಬರ್ 3 ರಿಂದ 24 ರವರೆಗೆ ಮೂರನೇ ಚರಣದ ಪಂದ್ಯ ನಡೆಯಲಿದೆ. ಪಿಕೆಎಲ್ ಪ್ಲೇ ಆಫ್‌ಗಳ ದಿನಾಂಕಗಳು ಮತ್ತು ಸ್ಥಳಗಳನ್ನು ಇನ್ನು ನಿಗದಿ ಪಡಿಸಿಲ್ಲ.

12 ತಂಡಗಳ ಫೈಟ್
ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಪುಣೇರಿ ಪಲ್ಟನ್, ತೆಲುಗು ಟೈಟಾನ್ಸ್, ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್, ತಮಿಳ್ ತಲೈವಾಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್ ಮತ್ತು ಯುಪಿ ಯೋಧಾ ತಂಡಗಳು ಸೇರಿವೆ. ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಉಳಿದಂತೆ ಮೂರರಿಂದ ಆರನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಸ್ಪರ್ಧಿಸಿ, ಉಪಾಂತ್ಯ ಪ್ರವೇಶಿಸಲಿವೆ.
ಬುಲ್ಸ್ ಬಲಾಢ್ಯ
ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ತೆಲಗು ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಈ ತಂಡಗಳು ಒಟ್ಟು 23 ಬಾರಿ ಪಿಕೆಎಲ್‌ನಲ್ಲಿ ಮುಖಾಮುಖಿ ಆಗಿದ್ದು, ಬೆಂಗಳೂರು 16, ಟೈಟನ್ಸ್ 3 ಪಂದ್ಯಗಳನ್ನು ಗೆದ್ದಿವೆ. ನಾಲ್ಕು ಪಂದ್ಯಗಳು ಟೈ ಆಗಿವೆ.
ಸ್ಟಾರ್ ಆಟಗಾರರ ಬಲ
ಬೆಂಗಳೂರು ತಂಡದಲ್ಲೂ ಈಗ ಸ್ಟಾರ್ ಆಟಗಾರರ ದಂಡೇ ಇದ್ದು, ಮತ್ತೊಮ್ಮೆ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ. ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್, ಅಜಿಂಕ್ಯ ಪವಾರ್, ಸುಶೀಲ್, ಜೈ ಭಗವಾನ್, ಜಿತನ್, ಅಕ್ಷಿತ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿ ಗೆಲುವಿನ ಅಭಿಯಾನ ಆರಂಭಿಸುವ ಗುರಿಯನ್ನು ಬೆಂಗಳೂರು ತಂಡ ಹಾಕಿಕೊಂಡಿದೆ.
ದೆಹಲಿ vs ಮುಂಬೈ ಫೈಟ್
ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಹಾಗೂ ಯು ಮುಂಬಾ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಸಹ ಗೆಲುವಿನ ಆರಂಭ ಮಾಡುವ ಕನಸುನ್ನು ಹೊಂದಿವೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಮುಂಬೈ ಬಲಾಢ್ಯವಾಗಿದೆ. ಆಡಿರುವ 22 ಪಂದ್ಯಗಳಲ್ಲಿ ಮುಂಬೈ 12ರಲ್ಲಿ ಜಯ ದಾಖಲಿಸಿದೆ. ಈ ಸಂಖ್ಯೆಗೆ ಇನ್ನೊಂದು ನಂಬರ್ ಸೇರಿಸುವ ಕನಸನ್ನು ಮುಂಬೈ ಆಟಗಾರರು ಕಾಣುತ್ತಿದ್ದಾರೆ.
ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು?
ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications