Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್: ಬೆಂಗಾಲ್ ವಿರುದ್ಧ ಸೋತರೂ ಅಗ್ರಸ್ಥಾನದಲ್ಲಿ ಉಳಿದ ಡೆಲ್ಲಿ!

Pro Kabaddi League: Bengal Warriors close points gap with Dabang Delhi

ಪಂಚಕುಲ, ಅಕ್ಟೋಬರ್ 1: ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಸೀಸನ್‌ನ ಅಗ್ರಸ್ಥಾನಿ ತಂಡವಾಗಿ ದಬಾಂಗ್ ಡೆಲ್ಲಿ ಕೆಸಿ ಮಿನುಗಿದೆ. ಸೋಮವಾರ (ಸೆಪ್ಟೆಂಬರ್ 30) ನಡೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಎದುರು 42-33 ಅಂತರದ ಸೋಲನುಭವಿಸಿದರೂ ಡೆಲ್ಲಿ 82 ಪಾಯಿಂಟ್‌ಗಳೊಂದಿಗೆ ಟಾಪರ್‌ ಆಗಿಯೇ ಉಳಿದಿದೆ.

ಪ್ರೊ ಕಬಡ್ಡಿ ಲೀಗ್ ಪಾಯಿಂಟ್ ಟೇಬಲ್, ಗ್ಯಾಲರಿ, ವೇಳಾಪಟ್ಟಿ ಇತ್ಯಾದಿ ಇಲ್ಲಿದೆ

ಹರ್ಯಾಣದ ಪಂಚಕುಲದಲ್ಲಿರುವ ತೌ ದೇವಿಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ನವೀನ್ (ಕುಮಾರ್) ಎಕ್ಸ್‌ಪ್ರೆಸ್ 15 ಅಂಕ ಸೇರಿಸಿದರೂ ಉಳಿದ ಆಟಗಾರ ಗಮನಾರ್ಹ ಬೆಂಬಲವಿಲ್ಲದೆ ಡೆಲ್ಲಿ ಹಿನ್ನಡೆ ಅನುಭವಿಸಿತು. ಚಂದ್ರನ್ ರಂಜಿತ್ 6, ಅನಿಲ್ ಕುಮಾರ್ 3, ವಿಜಯ್ 2, ರವೀಂದರ್ ಪಾಹಲ್ 2, ಜೋಗೀಂದರ್ ಸಿಂಗ್ ನರ್ವಾಲ್ 1 ಅಂಕ ಕೊಡುಗೆಯಿತ್ತರು.

ಬೆಂಗಾಲ್ ವಾರಿಯರ್ಸ್‌ನಿಂದ ಮಣೀಂದರ್ ಸಿಂಗ್ 13, ಸುಕೇಶ್ ಹೆಗ್ಡೆ 7, ಇಸ್ಮಾಯಿಲ್ ನಬಿಬಖ್ಷ್ 5, ಬಲ್‌ದೇವ್ ಸಿಂಗ್ 3, ರಾಕೇಶ್ ನರ್ವಾಲ್ 3, ಮಯೂರ್ 2, ರಿಂಕು ನರ್ವಾಲ್ 2, ಜೀವ ಕುಮಾರ್ 1 ಅಂಕ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು.

ಈಗ ಪಾಯಿಂಟ್‌ ಟೇಬಲ್‌ನಲ್ಲಿ ದಬಾಂಗ್ ಡೆಲ್ಲಿ (82 ಪಾಯಿಂಟ್ಸ್), ಬೆಂಗಾಲ್ ವಾರಿಯರ್ಸ್ (78), ಹರ್ಯಾಣ ಸ್ಟೀಲರ್ಸ್ (65), ಯು ಮುಂಬಾ (59), ಬೆಂಗಳೂರು ಬುಲ್ಸ್ (58) ತಂಡಗಳು ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ. ಇದರಲ್ಲಿ ಡೆಲ್ಲಿ, ಬೆಂಗಾಲ್ ಲೀಗ್‌ನ 20 ಪಂದ್ಯಗಳನ್ನು ಮುಗಿಸಿದ್ದು, ಇನ್ನುಳಿದ ತಂಡಗಳಿಗೆ 1 ಪಂದ್ಯ ಉಳಿದಿವೆ.

Story first published: Tuesday, October 1, 2019, 4:53 [IST]
Other articles published on Oct 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+