Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ಬುಲ್ಸ್‌ ವಾರ್‌ ಗೆದ್ದ ಬಂಗಾಳ, ತೆಲುಗುಗೆ ರೋಚಕ ಜಯ

11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೂರನೇ ಗೆಲುವು ದಾಖಲಿಸುವ ಬೆಂಗಳೂರು ಬುಲ್ಸ್ ಆಸೆ ಕಮರಿದೆ. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 29-40 ಅಂಕಗಳಿಂದ ಬಂಗಾಳ ವಾರಿಯರ್ಸ್‌ ವಿರುದ್ಧ ಸೋಲು ಕಂಡಿತು. ಈ ಗೆಲುವಿನೊಂದಿಗೆ ಬಂಗಾಳ ವಾರಿಯರ್ಸ್‌ 10ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಬುಲ್ಸ್‌ ಆಡಿದ 8 ಪಂದ್ಯಗಳಲ್ಲಿ 2 ಜಯ, 6 ಸೋಲು ಕಂಡಿದ್ದು 12 ಅಂಕಗಳನ್ನು ಕಲೆ ಹಾಕಿದೆ. ಇನ್ನು ವಾರಿಯರ್ಸ್‌ ಆಡಿದ 7 ಪಂದ್ಯಗಳಲ್ಲಿ 3 ಜಯ, 2 ಸೋಲು, 2 ಡ್ರಾ ಸಾಧಿಸಿದ್ದು, 23 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.

ಮೊದಲಾವಧಿಯ 20 ನಿಮಿಷದಲ್ಲಿ ಬೆಂಗಳೂರು ಬುಲ್ಸ್‌ ಹಿನ್ನಡೆ ಅನುಭವಿಸಿತು. ಬಂಗಾಳ 15-12 ರಿಂದ ಮುನ್ನಡೆ ಸಾಧಿಸಿದೆ. ಈ ಅವಧಿಯಲ್ಲಿ ಬಂಗಾಳ ರೇಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ತಲಾ ಒಂದು ಅಂಕದಿಂದ ಮುನ್ನಡೆ ಸಾಧಿಸಿತು. ಹೀಗಾಗಿ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿತ್ತು.

Pro Kabaddi League Bengal Warriorz beat Bengaluru Bulls

ಎರಡನೇ ಅವಧಿಯ ಪಂದ್ಯದಲ್ಲಿ ಬಂಗಾಳ ಅಮೋಘ ಆಟವನ್ನು ಆಡಿತು. ಈ ಅವಧಿಯ ದಾಳಿಯಲ್ಲಿ ಬಂಗಾಳ ರೇಡಿಂಗ್‌ನಲ್ಲಿ 16 ಅಂಕಗಳನ್ನು ಕಲೆ ಹಾಕಿತು. ಬುಲ್ಸ್‌ ಈ ಅವಧಿಯಲ್ಲಿ ರೈಡಿಂಗ್‌ನಲ್ಲಿ 13 ಅಂಕ ಸೇರಿಸಿದರೆ, ವಾರಿಯರ್ಸ್‌ 16 ಅಂಕಗಳನ್ನು ಕಲೆ ಹಾಕಿತು. ಇದೇ ಅವಧಿಯಲ್ಲಿ ಬುಲ್ಸ್‌ ಎರಡು ಬಾರಿ ಆಲೌಟ್ ಆಯಿತು.

ವಿಜೇತ ತಂಡದ ಪರ ನಿತೀನ್‌ ಕುಮಾರ್‌ 23 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 11 ಟಚ್‌ ಪಾಯಿಂಟ್ ಹಾಗೂ 3 ಬೋನ್ಸ್‌ ಅಂಕವನ್ನು ಕಲೆ ಹಾಕಿದರು. ಮಣೀಂದರ್‌ 10 ಅಂಕ ಸೇರಿಸಿದರು. ಪರಾಜಿತ ತಂಡದ ಪರ ಅಕ್ಷಿತ್ 11, ಅಜಿಂಕ್ಯ ಪವಾರ 8 ಅಂಕ ಬಾಚಿಕೊಂಡರು.

ಜಿದ್ದಾಜಿದ್ದಿನ ಫೈಟ್‌ ಗೆದ್ದ ತೆಲುಗು

ಇದಕ್ಕೂ ಮೊದಲು ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 34-33ರಿಂದ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿತು. ಈ ಮೂಲಕ ತೆಲುಗು ಟೈಟನ್ಸ್‌ ಆಡಿದ 8 ಪಂದ್ಯಗಳಲ್ಲಿ 5 ಜಯ, 3 ಡ್ರಾ ಸಾಧಿಸಿದ್ದು 26 ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಈ ಪಂದ್ಯದಲ್ಲಿ ಸೋತರೂ ಪುಣೇರಿ ಪಲ್ಟನ್‌ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಪುಣೇರಿ ಸಹ 8 ಪಂದ್ಯಗಳನ್ನು ಆಡಿದ್ದು, 5 ಜಯ, 2 ಸೋಲು, 1 ಡ್ರಾ ಸಾಧಿಸಿದ್ದು, 30 ಅಂಕಗಳನ್ನು ಕಲೆ ಹಾಕಿದೆ.

Pro Kabaddi League Bengal Warriorz beat Bengaluru Bulls

ತೆಲುಗು ಟೈಟಾನ್ಸ್‌ ತಂಡದ ಸ್ಟಾರ್ ಆಟಗಾರ ಪವನ್‌ ಶೇರವಾತ್‌ 12, ವಿಜಯ್‌ ಮಲಿಕ್‌ 13 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪಂಕಾಜ್‌ ಮೋಹಿತ್‌ 9 ಅಂಕ ಕಲೆ ಹಾಕಿ ಅಬ್ಬರಿಸಿದರು.

ಉಭಯ ತಂಡಗಳು ಮೊದಲಾವಧಿಯ ಆಟದಲ್ಲಿ ಜಿದ್ದಾಜಿದ್ದಿನ ಆಟವನ್ನು ಆಡಿದವು. ಈ ಅವಧಿಯಲ್ಲಿ ಉಭಯ ತಂಡಗಳು ತಲಾ 20 ಅಂಕಗಳನ್ನು ಕಲೆ ಹಾಕಿದವು. ರೈಡಿಂಗ್‌, ಟ್ಯಾಕಲ್‌ನಲ್ಲಿ ಸಮಬಲದ ಹೋರಾಟ ನೀಡಿದ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದವು. ಅಲ್ಲದೆ ಈ ಅವಧಿಯಲ್ಲಿ ಎರಡೂ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಎರಡನೇ ಅವಧಿಯ ಆಟದಲ್ಲಿ ತೆಲುಗು ಸ್ಥಿರ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಟೈಟಾನ್ಸ್‌ 12 ಅಂಕಗಳನ್ನು ರೈಡಿಂಗ್ ಕಲೆ ಹಾಕಿತು. ಆದರೆ ಟ್ಯಾಕಲ್‌ನಲ್ಲಿ ಕೊಂಚ ಹಿನ್ನಡೆಯನ್ನು ಅನುಭವಿಸಿತು. ಇದರ ಪರಿಣಾಮ ಆಟದ ಮೇಲೆ ಕಂಡಿತು. ಈ ಅವಧಿಯಲ್ಲಿ ತೆಲುಗು ಒಮ್ಮೆ ಆಲೌಟ್ ಆದರೂ, ಕೊನೆಯಲ್ಲಿ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿತು.

Story first published: Saturday, November 9, 2024, 22:42 [IST]
Other articles published on Nov 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+