For Quick Alerts
ALLOW NOTIFICATIONS  
For Daily Alerts

Pro Kabaddi League: ಯು ಮುಂಬಾ ಗುಮ್ಮಿದ ಬೆಂಗಳೂರು ಗೂಳಿಗಳು; ಅಂಕಪಟ್ಟಿಯಲ್ಲಿ ಬುಲ್ಸ್ ಜಿಗಿತ

ಭಾನುವಾರ, ಜನವರಿ 4ರಂದು ನವದೆಹಲಿ ತ್ಯಾಗರಾಜ್ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆದ 2023-24ರ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ನ ರೋಚಕ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್ ಭರ್ಜರಿ ಗೆಲುವು ಸಾಧಿಸಿತು.

ಸುಶೀಲ್ ಮತ್ತು ಅಕ್ಷಿತ್ ಅವರ ಅಮೋಘ ರೈಡಿಂಗ್ ಸಾಹಸದಿಂದ ಬೆಂಗಳೂರು ಬುಲ್ಸ್ ತಂಡವು ನಿರ್ಣಾಯಕ ಪಂದ್ಯದಲ್ಲಿ ಬಲಿಷ್ಠ ಯು ಮುಂಬಾ ತಂಡದ ವಿರುದ್ಧ 42-37 ಅಂತರದಲ್ಲಿ ಗೆದ್ದು ಬೀಗಿತು.

Pro Kabaddi League: Bengaluru Bulls Beat U Mumba by 42-37 Points in Thriller Match

ಬೆಂಗಳೂರು ಬುಲ್ಸ್ ಪರ ಸುಶೀಲ್ ಸೂಪರ್ 10 ಮತ್ತು ಅಕ್ಷಿತ್ ಎಂಟು ಅಂಕಗಳನ್ನು ಪಡೆದು ಮಿಂಚಿದರೆ, ರಾನ್ ಸಿಂಗ್ 5 ಟ್ಯಾಕಲ್ ಅಂಕಗಳನ್ನು ಪಡೆದರು. ಇನ್ನು ಯು ಮುಂಬಾ ರೈಡರ್ ಜೈ ಭಗವಾನ್ ಅವರ 10 ಅಂಕಗಳ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ ಗೆಲ್ಲುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

ಯು ಮುಂಬಾ ಭರ್ಜರಿಯಾಗಿಯೇ ಆರಂಭ ಪಡೆದುಕೊಂಡಿತು. ಆದರೆ ಬೆಂಗಳೂರು ಬುಲ್ಸ್ ಎದುರಾಳಿ ತಂಡಕ್ಕೆ ಹೆಚ್ಚು ಹೊತ್ತು ಅವಕಾಶ ನೀಡಲಿಲ್ಲ.

ಲೆಫ್ಟ್ ಕವರ್ ಪಾರ್ಟೀಕ್ ಮತ್ತು ಆಲ್‌ರೌಂಡರ್ ರಾನ್ ಸಿಂಗ್ ಅವರ ಅತ್ಯುತ್ತಮ ಸೂಪರ್ ಟ್ಯಾಕಲ್‌ಗಳ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಆಲೌಟ್ ಆಗುವ ಅವಕಾಶವನ್ನು ಯಶಸ್ವಿಯಾಗಿ ತಡೆಯಿತು.

Pro Kabaddi League: Bengaluru Bulls Beat U Mumba by 42-37 Points in Thriller Match

ಬೆಂಗಳೂರು ಬುಲ್ಸ್ ತಂಡವನ್ನು ಅಸ್ಥಿರಗೊಳಿಸಲು ಯು ಮುಂಬಾದ ರೈಡರ್ ಜೈ ಭಗವಾನ್ ತಮ್ಮ ತಂಡಕ್ಕೆ ಪಂದ್ಯದ ಮೊದಲ ಆಲೌಟ್ ಅಂಕಗಳನ್ನು ಗಳಿಸಿಕೊಟ್ಟರು.

ಬೆಂಗಳೂರು ಬುಲ್ಸ್ ತಂಡವನ್ನು ದೂರವಿಡಲು ಯು ಮುಂಬಾ ಸಾಕಷ್ಟು ಶ್ರಮಿಸಬೇಕಾಯಿತು. ಈ ವೇಳೆ ಅಕ್ಷಿತ್ ಅವರ ನಾಲ್ಕು ಅಂಕಗಳ ಸೂಪರ್ ರೈಡ್ ಬೆಂಗಳೂರು ಬುಲ್ಸ್ ತಂಡದ ಪುನರುಜ್ಜೀವನಕ್ಕೆ ಪ್ರಮುಖವಾಗಿತ್ತು.

ನಂತರ ಯು ಮುಂಬಾ ತಂಡವನ್ನು ಬೆಂಗಳೂರು ಬುಲ್ಸ್ ಆಲೌಟ್ ಮಾಡಿದರು. ದ್ವಿತೀಯಾರ್ಧದ ವೇಳೆಗೆ ಸ್ಕೋರ್ 22-24 ಅಂತರದ ಮೂಲಕ ಹಿನ್ನಡೆಯನ್ನು ಕೇವಲ ಎರಡು ಅಂಕಗಳಿಗೆ ತಗ್ಗಿಸಿದರು.

ಸೋಂಬೀರ್ ತನ್ನ 5 ಅಂಕಗಳ ಟ್ಯಾಕಲ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಲು ತನ್ನ ಉತ್ತಮ ಫಾರ್ಮ್ ಪ್ರದರ್ಶಿಸಿದರು. ಆದರೆ ಯು ಮುಂಬಾ ರೈಡರ್‌ಗಳು ತಮ್ಮ ಡಿಫೆಂಡರ್‌ಗಳ ಪ್ರದರ್ಶನವನ್ನು ದ್ವಿತೀಯಾರ್ಧದಲ್ಲಿ ಮುನ್ನಡೆಸಲು ಸಾಧ್ಯವಾಗಲಿಲ್ಲ.

ಇದು ಬೆಂಗಳೂರು ಬುಲ್ಸ್ ರೈಡರ್ ಸುಶೀಲ್ ಮುನ್ನಡೆ ಸಾಧಿಸುವ ಅವಕಾಶವನ್ನು ನೀಡಿತು. ಪಂದ್ಯವು ನೆಕ್‌-ಟು-ನೆಕ್‌ಗೆ ಹೋದಾಗ ರಾನ್ ಸಿಂಗ್‌ ಕೂಡ ತಮ್ಮ 5 ಅಂಕಗಳ ಟ್ಯಾಕಲ್‌ಗಳನ್ನು ಪೂರ್ಣಗೊಳಿಸಿದರು.

ಪಂದ್ಯದ ರೋಚಕತೆಯು ಕೊನೆಯವರೆಗೂ ಮುಂದುವರೆಯಿತು. ಆದರೆ ಅಮೀರ್ ಮೊಹಮ್ಮದ್ ಜಫರ್ದಾನೇಶ್ ಅವರನ್ನು ಪಾರ್ಟೀಕ್ ಟ್ಯಾಕಲ್ ಮಾಡಿದ ನಂತರ, ಯು ಮುಂಬಾ ತಂಡವನ್ನು ಬೆಂಗಳೂರು ಬುಲ್ಸ್ ಮತ್ತೊಮ್ಮೆ ಆಲೌಟ್ ಆಯಿತು.

ಇದು ಬೆಂಗಳೂರು ಬುಲ್ಸ್‌ಗೆ ಮುನ್ನಡೆ ಕಾಯ್ದುಕೊಳ್ಳಲು ಸಾಕಾಗಿತ್ತು. ಅದನ್ನು ಅವರು ಕೊನೆಯವರೆಗೂ ಉಳಿಸಿಕೊಂಡು ಅಂತಿಮವಾಗಿ ಗೆಲುವಿನ ಮುದ್ರೆಯೊತ್ತಿದರು.

Story first published: Monday, February 5, 2024, 6:45 [IST]
Other articles published on Feb 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+