For Quick Alerts
ALLOW NOTIFICATIONS  
For Daily Alerts

Pro Kabaddi: ಬೆಂಗಳೂರು ಬುಲ್ಸ್‌, ಗುಜರಾತ್‌ ಪಂದ್ಯ ಟೈ

11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 89ನೇ ಪಂದ್ಯ ರೋಚಕತೆಯಿಂದ ಕೂಡಿತ್ತು. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಹಾಗೂ ಗುಜರಾತ್ ಟೈಟನ್ಸ್‌ ನಡುವಣ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಈ ಮೂಲಕ ಬುಲ್ಸ್ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಟೈ ಸಾಧಿಸಿದ ಹಿರಿಮೆ ತನ್ನದಾಗಿಸಿಕೊಂಡಿತು. ಈ ಪದ್ಯದಲ್ಲಿ ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡವು. ಬೆಂಗಳೂರು 19 ಅಂಕಗಳೊಂದಿಗೆ 12ನೇ ಸ್ಥಾನ, 29 ಅಂಕಗಳೊಂದಿಗೆ ಜೈಂಟ್ಸ್‌ 10ನೇ ಸ್ಥಾನದಲ್ಲಿದೆ.

ಮೊದಲ ಪಂದ್ಯದಿಂದ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಈ ಹಂತದಲ್ಲಿ ಬುಲ್ಸ್ 15-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ತಲಾ ಏಳು ಅಂಕಗಳನ್ನು ಹಾಕಿಕೊಂಡವು. ಈ ಅವಧಿಯಲ್ಲಿ ಯಾವುದೇ ತಂಡ ಆಲೌಟ್ ಆಗಲೇ ಇಲ್ಲ.

Pro Kabaddi League Bengaluru Bulls Gujarat Giants Match Tied

ಎರಡನೇ ಅವಧಿಯಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಈ ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಬಾರಿ ಬೋಸ್‌ ಅಂಕವನ್ನು ಕಲೆ ಹಾಕಿದವು. ಈ ವೇಳೆ ಉಭಯ ತಂಡಗಳು ಅಂಕಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಕೊನೆಯ ಎರಡು ನಿಮಿಷದ ಆಟ ನಿಜಕ್ಕೂ ರೋಚಕತೆಯಿಂದ ಕೂಡಿತ್ತು. ಕೊನೆಯ ಕ್ಷಣದ ಆಟದಲ್ಲಿ ಉಭಯ ತಂಡಗಳು ಅಮೋಘ ಆಟದ ಪ್ರದರ್ಶನ ನೀಡಿ ಮಿಂಚಿದವು.

ಬುಲ್ಸ್‌ ಪರ ನಿತೀನ್‌ ರಾವಲ್‌ 7, ಪ್ರದೀಪ್ ನರ್ವಾಲ್‌ 6 ಅಂಕ ಕಲೆ ಹಾಕಿದರು. ಗುಜರಾತ್ ತಂಡದ ಪರ ನೀರಜ್ ಕುಮಾರ್‌ 5 ಅಂಕ ಸೇರಿಸಿದರು.

Pro Kabaddi League Bengaluru Bulls Gujarat Giants Match Tied

ಮುಂಬಾಗೆ ಮೂರನೇ ಸ್ಥಾನ

ಎರಡನೇ ಪಂದ್ಯದಲ್ಲಿ ಯು ಮುಂಬಾ 43-29 ಅಂಕಗಳೊಂದಿಗೆ ಪುಣೇರಿ ಪಲ್ಟನ್ ವಿರುದ್ಧ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅಜಿತ್ ಚೌಹಾಣ್‌ ಅಮೋಘ ಪ್ರದರ್ಶನ ನೀಡಿ 12 ಅಂಕ ಕಲೆ ಹಾಕಿದವು. ಈ ಪಂದ್ಯದಲ್ಲಿ ಜಯ ಸಾಧಿಸುತ್ತಿದ್ದಂತೆ ಮುಂಬಾ ತಂಡ 51 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯುತು. ಮುಂಬಾ ಟೂರ್ನಿಯಲ್ಲಿ ಸಾಧಿಸಿದ 9ನೇ ಗೆಲುವು ಇದಾಗಿದೆ. ಪುಣೇರಿ ಟೂರ್ನಿಯಲ್ಲಿ ಆರನೇ ಸೋಲು ಕಂಡಿದ್ದು 47 ಅಂಕಗಳನ್ನು ಸೇರಿಸಿದ್ದು, ಆರನೇ ಸ್ಥಾನವನ್ನು ಹೊಂದಿದೆ.

ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ಅಮೋಘ ಪ್ರದರ್ಶನ ನೀಡಿ ಅಂಕಗಳ ಬೇಟೆಯನ್ನು ನಡೆಸಿತು. ಈ ವೇಳೆ ಪುಣೇರಿ ಟ್ಯಾಕಲ್‌ ಹಾಗೂ ರೈಡಿಂಗ್‌ನಲ್ಲಿ ತಲಾ 8 ಅಂಕಗಳನ್ನು ಕಲೆ ಹಾಕಿದವು. ಇದೇ ವೇಳೆ ಮುಂಬಾ ತಂಡ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಮುಂಬಾ 27-10 ಅಂಕಗಳನ್ನು ಸೇರಿಸಿತು. ಈ ವೇಳೆ ಮುಂಬಾ ಹಾಕಿಕೊಂಡ ಯೋಜನೆಯಂತೆ ಆಡಿತು. ಈ ವೇಳೆ ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ತಲಾ 11 ಅಂಕಗಳನ್ನು ಕಲೆ ಹಾಕಿತು. ಇದೇ ವೇಳೆ ಪುಣೇರಿ ಎರಡು ಬಾರಿ ಆಲೌಟ್ ಆಯಿತು.

Story first published: Tuesday, December 3, 2024, 23:25 [IST]
Other articles published on Dec 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+