Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೋ ಕಬಡ್ಡಿ ಫೈನಲ್: ಚಾಂಪಿಯನ್ ಪಟ್ಟಕ್ಕೆರಿದ ದಬಾಂಗ್ ಡೆಲ್ಲಿ: ರೋಚಕ ಪಂದ್ಯದಲ್ಲಿ ಪಾಟ್ನಾಗೆ ಸೋಲು

Pro Kabaddi League Final: Dabang Delhi KC won against Patna Pirates become champions of Season 8

ಪ್ರೋ ಕಬಡ್ಡಿ ಲೀಗ್‌ನ 8ನೇ ಆವೃತ್ತಿಯ ಚಾಂಪಿಯನ್ ತಂಡವಾಗಿ ದಬಾಂಗ್ ಡೆಲ್ಲಿ ಹೊರಹೊಮ್ಮಿದೆ. ಈ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲಿ ಮೊದಲ ಬಾರಿಗೆ ದಬಾಂಗ್ ಡೆಲ್ಲಿ ಟ್ರೋಫಿಯನ್ನು ಎತ್ತಿಹಿಡಿದಿದೆ. ಫೆಬ್ರವರಿ 25ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ ರಣರೋಚಕ ಸೆಣೆಸಾಟದಲ್ಲಿ 37-36 ಅಂಕಗಳಿಂದ ಗೆದ್ದು ಬೀಗಿದೆ.

ಆರಂಭದಿಂದ ಅಂತಿಮ ಹಂತದವರೆಗೂ ಅತ್ಯಂತ ರೋಚಕವಾಗಿ ಸಾಗಿದ ಪಂದ್ಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಪ್ರತಿಕ್ಷಣವೂ ರೋಚಕ ತಿರುವು ನೀಡುತ್ತಾ ಸಾಗಿದ ಪಂದ್ಯದಲ್ಲಿ ಎರಡೂ ತಂಡಗಳು ಕೂಡ ಗೆಲ್ಲುವ ಸಮಾನ ಅವಕಾಶವನ್ನು ಹೊಂದಿದ್ದವು. ಅಂತಿಮ ಕ್ಷಣದಲ್ಲಿ ದಬಾಂಗ್ ಡೆಲ್ಲಿ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಪಾಟ್ನಾ ಪೈರೇಟ್ಸ್ ತಂಡದ ನಾಲ್ಕನೇ ಬಾರಿ ಟ್ರೋಫಿ ಗೆಲ್ಲುವ ಕನಸನ್ನು ಭಗ್ನಗೊಳಿಸಿ ಚಾಂಪಿಯನ್ ಆಗಿ ಮೆರೆದಿದೆ.

ಪಂದ್ಯದ ಮೊದಲಾರ್ಧದಲ್ಲಿ ಪಾಟ್ನಾ ಪೈರೇಟ್ಸ್ ತಂಡ ಸಣ್ಣ ಮುನ್ನಡೆಯನ್ನು ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಡೆಲ್ಲಿ ದಬಾಂಗ್ ತನ್ನ ಆಕ್ರಮಣಕಾರಿ ಆಟವನ್ನು ಮತ್ತಷ್ಟು ಚುರುಕುಗೊಳಿಸಿತು. ಇದರಲ್ಲಿ ಐಶಸ್ಸು ಸಾಧಿಸಿದ ತಂಡ ಮುನ್ನಡೆಸಾಧಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಅಂತಿಮ ಹಂತದಲ್ಲಿ ವಿಜಯ್ ಮಲಿಕ್ ಸೂಪರ್ ರೇಡ್ ದಿಲ್ಲಿ ತಂಡಕ್ಕೆ ದೊಡ್ಡ ತಿರುವು ನೀಡಿತು. ಈ ಮೂಲಕ ಹೆಚ್ಚು ಅಂಕವನ್ನು ದಿಲ್ಲಿ ಸೇರ್ಪಡೆಗೊಳಿಸಿತು. ಅಂತಿಮವಾಗಿ ನವೀನ್ ಚಾಣಾಕ್ಷ ರೈಡಿಂಗ್ ಮೂಲಕ ಗೆಲುವು ಕೈ ತಪ್ಪದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಕಳೆದ ಆವೃತ್ತಿಯಲ್ಲಿಯೂ ಸೆಮಿಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ದಬಾಂಗ್ ಡೆಲ್ಲಿ ಫೈನಲ್‌ನಲ್ಲಿ ಎಡವಿತ್ತು. ಬೆಂಗಾಲ್ ವಾರಿಯರ್ಸ್ ಡೆಲ್ಲಿಯನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಬಾರಿಯೂ ಬೆಂಗಳೂರು ಬುಲ್ಸ್ ವಿರುದ್ಧ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸಿದ ಡೆಲ್ಲಿ ಫೈನಲ್‌ನಲ್ಲಿಯೂ ಗೆಲುವು ಸಾಧಿಸಿದೆ. ಈ ಮೂಲಕ ಪ್ರೋ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಟ್ರೋಫಿಯನ್ನು ಎತ್ತಿಹಿಡಿದಿದೆ.

Story first published: Saturday, February 26, 2022, 9:13 [IST]
Other articles published on Feb 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+