ಪ್ರೊ ಕಬಡ್ಡಿ 2018-19: ಅಂತಿಮ ಹಣಾಹಣಿಗೆ ಸಜ್ಜಾಗಿವೆ ಬೆಂಗಳೂರು-ಗುಜರಾತ್

ಮುಂಬೈ, ಜನವರಿ 5: ವಿವೋ ಪ್ರೊ ಕಬಡ್ಡಿ ಲೀಗ್ 2018-19ರ 6ನೇ ಆವೃತ್ತಿ ಕೊನೆಗೊಳ್ಳುವುದರಲ್ಲಿದೆ. ಅಂತಿಮ ಹಣಾಹಣಿಗಾಗಿ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡಗಳು ಸಜ್ಜಾಗಿವೆ. ಪ್ರಶಸ್ತಿ ಸುತ್ತಿನ ಪಂದ್ಯ ಜನವರಿ 5ರ ಶನಿವಾರ ಮುಂಬೈಯಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಎ ಝೋನ್‌ನಲ್ಲಿರುವ ಗುಜರಾತ್ ಫಾರ್ಚೂನ್ ಜೈಂಟ್ಸ್ 22 ಪಂದ್ಯಗಳಲ್ಲಿ 17 ರಲ್ಲಿ ಜಯ ಸಾಧಿಸಿ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇತ್ತ ಬಿ ಝೋನ್‌ನಲ್ಲಿರುವ ಬೆಂಗಳೂರು ಬುಲ್ಸ್ 22ರಲ್ಲಿ 13ರಲ್ಲಿ ಗೆದ್ದು 2ರಲ್ಲಿ ಸಮಬಲ ಸಾಧಿಸಿತ್ತು. ಈ ಲೆಕ್ಕಾಚಾರದಲ್ಲಿ ನೋಡಿದರೆ ಬೆಂಗಳೂರಿಗಿಂತ ಗುಜರಾತ್ ಕೊಂಚ ಬಲಿಷ್ಠ ತಂಡವಾಗಿ ತೋರುತ್ತಿದೆ. ಆದರೂ ಗೆಲ್ಲುವ ನೆಚ್ಚಿನ ತಂಡವಾಗಿ ಬೆಂಗಳೂರೇ ಕಾಣುತ್ತಿದೆ.
ಕುತೂಹಲಕಾರಿ ಫೈನಲ್ ಪಂದ್ಯವು ಮಹಾರಾಷ್ಟ್ರದ ಮುಂಬೈನಲ್ಲಿರುವ ಸರ್ದಾರ್ ವಲ್ಲಭ ಭಾಯ್ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ (ಜ.5) ರಾತ್ರಿ 8pmಗೆ ಆರಂಭಗೊಳ್ಳಲಿದೆ. ಪಂದ್ಯವು ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿಯಲ್ಲಿ ನೇರ ಪ್ರಸಾರಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications