For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2019: ತಮಿಳ್ ತಲೈವಾಸ್ ಹಿಮ್ಮೆಟ್ಟಿಸಿದ ಹರ್ಯಾಣ ಸ್ಟೀಲರ್ಸ್‌

Pro Kabaddi League: Haryana Steelers beat Tamil Thalaivas

ಪುಣೆ, ಸೆಪ್ಟೆಂಬರ್ 15: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್‌ ಹಾಲ್‌ನಲ್ಲಿ ಶನಿವಾರ (ಸೆಪ್ಟೆಂಬರ್ 15) ನಡೆದ ಪ್ರೊ ಕಬಡ್ಡಿ ಲೀಗ್ 90ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ 43-35ರ ಗೆಲುವನ್ನಾಚರಿಸಿದೆ. ವಿಕಾಸ್ ಖಂಡೋಲಾ ಮತ್ತು ವಿನಯ್‌ಯ ಚತುರ ಆಟ ಸ್ಟೀಲರ್ಸ್‌ಗೆ 10ನೇ ಗೆಲುವು ತಂದಿತು.

ಹರ್ಯಾಣ ಸ್ಟೀಲರ್ಸ್‌ನಿಂದ ವಿಕಾಸ್ ಖಂಡೋಲಾ 13 (10 ರೈಡ್, 3 ಬೋನಸ್), ವಿನಯ್ 10 (9 ರೈಡ್, 1 ಬೋನಸ್), ಸುನಿಲ್ 4, ವಿಕಾಸ್ ಕಾಲೆ 4, ಧರ್ಮರಾಜ್ 3, ರವಿ ಕುಮಾರ್ 3, ಚಂದ್ ಸಿಂಗ್ 1 ಅಂಕ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು.

ತಮಿಳ್ ತಲೈವಾಸ್‌ನಿಂದ ರಾಹುಲ್ ಚೌಧರಿ ಗಮನಾರ್ಹ ಆಟ ಆಡಿದ್ದು ಕಂಡುಬಂತು. ಚೌಧರಿ 10, ವಿ ಅಜಿತ್ ಕುಮಾರ್ 9, ವಿಕ್ಟರ್ ಒಬಿಯೆರೊ 5, ಮೋಹಿತ್ ಛಿಲ್ಲರ್ 4, ಮನ್ಜೀತ್ ಛಿಲ್ಲರ್ 2, ರಣ್ ಸಿಂಗ್ 1 ಅಂಕ ಸೇರಿಸಿ ಎದುರಾಳಿಗೆ ತಕ್ಕ ಮಟ್ಟಿನ ಪೈಪೋಟಿ ನೀಡಲು ನೆರವಾದರು.

ಇದಕ್ಕೂ ಮೊದಲು ಇದೇ ಸ್ಟೇಡಿಯಂನಲ್ಲಿ ನಡೆದ ಪುಣೆ ಲೆಗ್‌ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಫಾರ್ಚ್ಯೂನ್‌ ಜಿಯಾಂಟ್ಸ್‌ ವಿರುದ್ಧ ಪುಣೇರಿ ಪಲ್ಟಾನ್ 43-33ರ ಜಯ ಗಳಿಸಿತು. ಅಂಕಪಟ್ಟಿಯಲ್ಲೀಗ ಡೆಲ್ಲಿ, ಬೆಂಗಾಲ್, ಹರ್ಯಾಣ, ಬೆಂಗಳೂರು, ಯು ಮುಂಬಾ ಮೊದಲ ಐದು ಸ್ಥಾನಗಳಲ್ಲಿವೆ.

Story first published: Saturday, September 14, 2019, 22:55 [IST]
Other articles published on Sep 14, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+