Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ಮಂಬಾ ಸವಾಲು ಮೀರಿದ ಪಾಟ್ನಾ ಪೈರೇಟ್ಸ್‌

ಭರವಸೆಯ ಆಟಗಾರ ಸಚಿನ್ ಅವರ ಅಬ್ಬರದ ಪ್ರದರ್ಶನದ ಫಲದಿಂದ ಪಾಟ್ನಾ ಪೈರೇಟ್ಸ್‌ 44-23 ಯು ಮುಂಬಾ ತಂಡವನ್ನು ಮಣಿಸಿತು.

ಈ ಗೆಲುವಿನೊಂದಿಗೆ ಪಾಟ್ನಾ ಪೈರೇಟ್ಸ್‌ ಆಡಿದ 20 ಪಂದ್ಯಗಳಲ್ಲಿ 10 ಗೆಲುವು, 7 ಸೋಲು, 3 ಡ್ರಾ ಸಾಧಿಸಿದ್ದು, 63 ಅಂಕಗಳನ್ನು ಕಲೆ ಹಾಕಿ ಮುಂದಿನ ಹಂತಕ್ಕೆ ಪ್ರವೇಶಿಸುವ ಕನಸನ್ನು ಹಸಿರಾಗಿಸಿದೆ. ಇನ್ನು ಯು-ಮುಂಬಾ ಆಡಿದ 19 ಪಂದ್ಯಗಳಲ್ಲಿ 6 ಗೆಲುವು, 11 ಸೋಲು, 2 ಡ್ರಾ ಸಾಧಿಸಿದ್ದು, 42 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.

Pro Kabaddi League: Patna Pirates Beat U Mumba


ಮೊದಲಾವಧಿಯ 20 ನಿಮಿಷದಲ್ಲಿ ಪಾಟ್ನಾ ಅಬ್ಬರದ ಆಟವನ್ನು ಆಡಿತು. ಈ ಮೂಲ ದಾಳಿಯಲ್ಲಿ 9, ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಮುಂಬಾ ತಂಡವನ್ನು ಒಂದು ಬಾರಿ ಆಲೌಟ್ ಮಾಡಿ ಬೋನಸ್ ಅಂಕವನ್ನು ಕಲೆ ಹಾಕಿತು. ಇದೇ ಅವಧಿಯಲ್ಲಿ ಮುಂಬಾ ಒಟ್ಟು 10 ಅಂಕಗಳನ್ನು ಕಲೆ ಹಾಕಿತು. ದಾಳಿಯಲ್ಲೇ ಮಾಜಿ ಚಾಂಪಿಯನ್ ಮುಂಬಾ ಹೆಚ್ಚು ಅಂಕಗಳನ್ನು ಸೇರಿಸಿತು.

ಎರಡನೇ ಅವಧಿಯ ಆಟದಲ್ಲಿ ಪಾಟ್ನಾ ಮೊದಲಾವಧಿಯಲ್ಲಿ ಸಾಧಿಸಿದ್ದ ಹಿಡಿತವನ್ನು ಬಿಟ್ಟು ಕೊಡಲಿಲ್ಲ. ಈ ಅವಧಿಯಲ್ಲಿ ಪಾಟ್ನಾ 25-13 ಅಂಕಗಳಿಂದ ಯು ಮುಂಬಾ ವಿರುದ್ಧ ಮೇಲುಗೈ ಸಾಧಿಸಿತು. ಪಂದ್ಯದ ಯಾವುದೇ ಹಂತದಲ್ಲಿ ಮುಂಬಾ ತಂಡ ಪುಟಿದೇಳುವ ಸೂಚನೆಯನ್ನು ನೀಡಲೇ ಇಲ್ಲ. ಎರಡನೇ ಅವಧಿಯ ಆಟದಲ್ಲೂ ಮುಂಬಾ ಎರಡೂ ಬಾರಿ ಆಲೌಟ್ ಆಯಿತು. ಈ ಅವಧಿಯಲ್ಲಿ ವಿಜೇತ ತಂಡದ ದಾಳಿ ಹಾಗೂ ಟ್ಯಾಕಲ್‌ ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು.
ವಿಜೇತ ತಂಡದ ಪರ ಸಚಿನ್‌ 10, ಸುಧಾಕರ್ ಎಂ.7 ಅಂಕ ಸೇರಿಸಿದರು. ಪರಾಜಿತ ತಂಡದ ಪರ ಅಮಿರ್‌ಮೊಹಮ್ಮದ್‌ 12 ಅಂಕ ಕಲೆ ಹಾಕಿದರು.

ಬಂಗಾಳ್‌ಗೆ ಭರ್ಜರಿ ಜಯ

10ನೇ ಆವೃತ್ತಿಯ ಪ್ರೊ ಕಬಡ್ಡಿಯ 114ನೇ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್‌ 55-35ರಿಂದ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿತು. ಈ ಮೂಲಕ ಬಂಗಾಳ ಆಡಿದ 19 ಪಂದ್ಯಗಳಲ್ಲಿ 8 ಜಯ, 9 ಸೋಲು,
2 ಡ್ರಾ ಸಾಧಿಸಿದ್ದು, 49 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇನ್ನು ತೆಲುಗು ಟೈಟನ್ಸ್‌ ಮೂರನೇ ಗೆಲುವಿನ ಆಸೆ ಕಮರಿದೆ. ಒಟ್ಟಾರೆ 40 ನಿಮಿಷದ ಪಂದ್ಯದಲ್ಲಿ ಬಂಗಾಳ 4 ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿ ಬೋನ್ಸ್‌ ಅಂಕವನ್ನು ಕಲೆ ಹಾಕಿತು. ಇನ್ನು ತೆಲುಗು ಟೈಟನ್ಸ್ ಒಂದು ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿತು.

Pro Kabaddi League: Patna Pirates Beat U Mumba


ಬಂಗಾಳ ಪರ ನಿತಿನ್ ಕುಮಾರ್ 13, ಮನಿಂದರ್ ಸಿಂಗ್ 8 ಅಂಕಗಳನ್ನು ಕಲೆ ಹಾಕಿದರು. ಇನ್ನು ಪರಾಜಿತ ತಂಡದ ಪರ ಪ್ರಫುಲ್‌ 8 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

Story first published: Sunday, February 11, 2024, 7:00 [IST]
Other articles published on Feb 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+