
ಮುಂಬೈ: ದೇಶದ ಮಣ್ಣಿನ ಕ್ರೀಡೆ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಮರಳಿ ಬಂದಿದೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಪ್ರೊ ಕಬಡ್ಡಿ ಲೀಗ್ ಸೀಸನ್ 8 ನಡೆಯಲಿದೆ. ಇದಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಮುಂಬೈಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಆಗಸ್ಟ್ 30ರ ಸೋಮವಾರ ಆಟಗಾರರ ಹರಾಜು ನೇರಪ್ರಸಾರಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್‌ಸ್ಟಾರ್‌ನಲ್ಲಿ ನೀವು ಲೈವ್ ವೀಕ್ಷಿಸಬಹುದು.
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜಿನಲ್ಲಿ ಒಟ್ಟು 450 ಆಟಗಾರರು ಹರಾಜು ಕಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 12 ತಂಡಗಳು ಬಲಿಷ್ಠರನ್ನು ತಮ್ಮ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲಿವೆ. ಈಗಾಗಲೇ ಒಟ್ಟು 59 ಆಟಗಾರರನ್ನು ಬೇರೆ ಬೇರೆ ತಂಡಗಳು ತಮ್ಮಲ್ಲೇ ಉಳಿಸಿಕೊಂಡಿವೆ.
ಉಳಿದಂತೆ ಹರಾಜಿನಲ್ಲಿ ಬೇರೆ ಬೇರೆ ತಂಡ ಸೇರಿದ ಆಟಗಾರರ ಪಟ್ಟಿ ಕೆಳಗಿದೆ
* ದೀಪಕ್ ನಿವಾಸ್ ಹೂಡ, 30 ಲಕ್ಷ ರೂ. ಮೂಲಬೆಲೆ, 55 ಲಕ್ಷ ರೂ.ಗೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಪಾಲಾಗಿದ್ದಾರೆ.
* ರೋಹಿತ್ ಗುಲಿಯಾ, ಹಿಂದಿನ ತಂಡ ಗುಜರಾತ್ ಜೇಂಟ್ಸ್, ಮೂಲ ಬೆಲೆ 30 ಲಕ್ಷ ರೂ., 83 ಲಕ್ಷ ರೂ.ಗೆ ಹರ್ಯಾಣ ಸ್ಟೀಲರ್ಸ್ ಪಾಲಾಗಿದ್ದಾರೆ.
* ರವೀಂದರ್ ಪಹಾಲ್, ಮೂಲ ಬೆಲೆ 30 ಲಕ್ಷ ರೂ., 74 ಲಕ್ಷ ರೂ.ಗೆ ಗುಜರಾತ್ ಜೇಂಟ್ಸ್ ಸೇರಿಕೊಂಡಿದ್ದಾರೆ.
* ವಿಶಾಲ್ ಭಾರದ್ವಾಜ್, ಮೂಲ ಬೆಲೆ 30 ಲಕ್ಷ ರೂ., 60 ಲಕ್ಷಕ್ಕೆ ಪುಣೆರಿ ಪಲ್ಟಾನ್ ಪಾಲಾಗಿದ್ದಾರೆ.
* ಬಲದೇವ್ ಸಿಂಗ್, ಮೂಲ ಬೆಲೆ 30 ಲಕ್ಷ ರೂ., 60 ಲಕ್ಷಕ್ಕೆ ಪುಣೆರಿ ಪಲ್ಟಾನ್ ಪಾಲಾಗಿದ್ದಾರೆ.
* ಸುರೇಂದರ್ ಸಿಂಗ್, ಮೂಲ ಬೆಲೆ 30 ಲಕ್ಷ ರೂ., 55 ಲಕ್ಷ ರೂ. ತೆಲುಗು ಟೈಟಾನ್ಸ್ ಸೇರಿದ್ದಾರೆ.
* ಸಂದೀಪ್ ಕುಮಾರ್ ದುಲ್, ಮೂಲ ಬೆಲೆ 30 ಲಕ್ಷ ರೂ., 45 ಲಕ್ಷ ರೂ.ಗೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆ ಮಾರಾಟವಾಗಿದ್ದಾರೆ.
* ಪಿಒ ಸುರ್ಜೀತ್ ಸಿಂಗ್, ಹಿಂದಿನ ತಂಡ ಪುಣೆರಿ ಪಲ್ಟಾನ್ಸ್, ಮೂಲ ಬೆಲೆ 30 ಲಕ್ಷ ರೂ., 75 ಲಕ್ಷ ರೂ.ಗೆ ತಮಿಳು ತಲೈವಾಸ್ ಪಾಲಾಗಿದ್ದಾರೆ.
* ಮಹೇಂದರ್ ಸಿಂಗ್, ಹಿಂದಿನ ತಂಡ ಬೆಂಗಳೂರು ಬುಲ್ಸ್, ಮೂಲ ಬೆಲೆ 30 ಲಕ್ಷ ರೂ., 50 ಲಕ್ಷ ರೂ.ಗೆ ಪಾಟ್ನಾ ಪೈರೇಟ್ಸ್ ಸೇರಿಕೊಂಡಿದ್ದಾರೆ.
* ರಾಹುಲ್ ಚೌಧರಿ, ಮೂಲ ಬೆಲೆ 30 ಲಕ್ಷ ರೂ., 40 ಲಕ್ಷ ರೂ.ಗೆ ಪುಣೆರಿ ಪಲ್ಟಾನ್ ಗೆ ಮಾರಾಟವಾಗಿದ್ದಾರೆ.
* ಪರ್ದೀಪ್ ನರ್ವಾಲ್, ಹಿಂದಿನ ತಂಡ ಪಾಟ್ನಾ ಪೈರೇಟ್ಸ್, ಮೂಲ ಬೆಲೆ 30 ಲಕ್ಷ ರೂ., 1.65 ಕೋಟಿ ರೂ.ಗೆ ಯುಪಿ ಯೋಧಾ ಸೇರಿಕೊಂಡಿದ್ದಾರೆ.
* ಮನ್‌ಜೀತ್ ಸಿಂಗ್, ಹಿಂದಿನ ತಂಡ ಪುಣೆರಿ ಪಲ್ಟಾನ್ಸ್, ಮೂಲ ಬೆಲೆ 30 ಲಕ್ಷ ರೂ., 92 ಲಕ್ಷಕ್ಕೆ ತಮಿಳು ತಲೈವಾಸ್ ಪಾಲಾಗಿದ್ದಾರೆ.
* ಶ್ರೀಕಾಂತ್ ಜಾಧವ್, ಮೂಲ ಬೆಲೆ 30 ಲಕ್ಷ ರೂ, 72 ಲಕ್ಷ ರೂ.ಗೆ ಯುಪಿ ಯೋಧ ಸೇರಿಕೊಂಡಿದ್ದಾರೆ.
* ರೋಹಿತ್ ಕುಮಾರ್, ಹಿಂದಿನ ತಂಡ ಬೆಂಗಳೂರು ಬುಲ್ಸ್, ಮೂಲ ಬೆಲೆ 30 ಲಕ್ಷ ರೂ., ತೆಲುಗು ಟೈಟಾನ್ಸ್ 36 ಲಕ್ಷ ರೂ.ಗೆ ಖರೀದಿಸಿದೆ.
* ಚಂದ್ರನ್ ರಂಜಿತ್, ಮೂಲ ಬೆಲೆ 30 ಲಕ್ಷ ರೂ., 80 ಲಕ್ಷ ರೂ.ಗೆ ಬೆಂಗಳೂರು ಬುಲ್ಸ್ ಸೇರಿಸಿಕೊಂಡಿದ್ದಾರೆ.
* ವಿಕಾಸ್ ಜಗ್ಲನ್, ಮೂಲ ಬೆಲೆ 20 ಲಕ್ಷ ರೂ., ಹರ್ಯಾಣ ಸ್ಟೀಲರ್ಸ್ 20 ರೂ.ಗೆ ಖರೀದಿಸಿದೆ.
* ಸಂದೀಪ್ ನರ್ವಾಲ್, ಮೂಲ ಬೆಲೆ 20 ಲಕ್ಷ ರೂ., 60 ಲಕ್ಷ ರೂ.ಗೆ ದಬಾಂಗ್ ಡೆಲ್ಲಿ ಪಾಲಾಗಿದ್ದಾರೆ.