Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೋ ಕಬಡ್ಡಿ 8ನೇ ಆವೃತ್ತಿ: ಮೊದಲ ಹಂತದ ವೇಳಾಪಟ್ಟಿ ಅಧಿಕೃತ ಪ್ರಕಟ

Pro Kabaddi League Season 8 Schedule and Venue Announced: Complete details

ಕೊರೊನಾವೈರಸ್‌ನ ಬಳಿಕ ಪ್ರೋ ಕಬ್ಬಡ್ಡಿ ಲೀಗ್ ಮತ್ತೊಮ್ಮೆ ಪ್ರೇಕ್ಷಕರನ್ನು ಮನರಂಜಿಸಲು ಸಿದ್ಧವಾಗಿದೆ. 8ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಈ ಬಾರಿಯ ಆವೃತ್ತಿ ಆಯೋಜಿಸಲು ಸಿದ್ಧತೆಗಳು ನಡೆದಿತ್ತು ಮೊದಲ ಹಂತದ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದೆ. ಪಂ್ಯಗಳು ನಡೆಯುವ ತಾಣವನ್ನು ಕೂಡ ಘೋಷಿಸಲಾಗಿದೆ.

ಮಾಷಾಲ್ ಸ್ಪೋರ್ಟ್ಸ್ ಆಯೋಜನೆ ಮಾಡುತ್ತಿರುವ ಪ್ರೋ ಕಬಡ್ಡಿ ಲೀಗ್‌ನ 8ನೇ ಆವೃತ್ತಿಯ ಪಂದ್ಯಗಳಿಗಾಗಿ ವಿಶೇಷವಾಗಿ ಕ್ರೀಡಾಂಗಣವನ್ನು ಸಿದ್ಧಪಡಿಸಲಾಗಿದೆ. ಅಂದರೆ ಈ ಬಾರಿ ಈ ಹಿಂದಿನ ಆವೃತ್ತಿಯ ಪ್ರೋ ಕಬಡ್ಡಿಗಳಂತೆ ಕ್ರೀಡಾಂಗಣದಲ್ಲಿ ನಡೆಯುವ ಬದಲಾಗಿ ಹೋಟೆಲ್‌ನಲ್ಲಿ ಕಬಡ್ಡಿ ಅಂಗಣವನ್ನು ಸಿದ್ಧಪಡಿಸಲಾಗಿದ್ದು ಅಲ್ಲಿಯೇ ಪಂದ್ಯಗಳು ನಡೆಯಲಿದೆ ಎಂಬುದು ವಿಶೇಷ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರೆಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಈ ಟೂರ್ನಿಯ ಸಂಪೂರ್ಣ ಪಂದ್ಯಗಳು ನಡೆಯಲಿದ್ದು ಈ ಪಂದ್ಯಾವಳಿಗಾಗಿ ಹೋಟೆಲ್‌ನ ಸಭಾಂಗಣವನ್ನು ಕಬಡ್ಡಿ ಕ್ರೀಡಾಂಗಣದ ಮಾದರಿಯಲ್ಲಿ ಸಜ್ಜುಗೊಳಿಸಲಾಗಿದೆ. ಕೊರೊನಾ ಭೀತಿಯಿಂದಾಗಿ ಪ್ರೇಕ್ಷಕರ ಅಲಭ್ಯತೆಯಲ್ಲಿ ಈ ಟೂರ್ನಿಯನ್ನು ಆಯೋಜಕರು ನಡೆಸಲು ತೀರ್ಮಾನಿಸಿದ್ದಾರೆ.

8ನೇ ಆವೃತ್ತಿಯ ಪ್ರೋ ಕಬಡ್ಡಿ ಪಂದ್ಯಗಳು ಡಿಸೆಂಬರ್ 22ರಿಂದ ಆರಂಭವಾಗಲಿದೆ. ಹೀಗಾಗಿ ಇಂದು (ಬುಧವಾರ) ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಇನ್ನು ಈ ಬಾರಿಯ ಪ್ರೋ ಕಬಡ್ಡಿ ಲೀಗ್‌ನ ವಿಶೇಷವೆಂಬಂತೆ ಮೊದಲ ನಾಲ್ಕು ದಿನಗಳಲ್ಲಿ "ತ್ರಿಪಲ್ ಹೆಡ್ಡರ್ಸ್' ಅಂದರೆ ಮೂರು ಪಂದ್ಯಗಳು ನಡೆಯಲಿದೆ. ದೇಶದ ಎಲ್ಲಾ ಭಾಗದ ಕಬಡ್ಡಿ ಅಭಿಮಾನಿಗಳು ಕೂಡ ತಾವು ಪ್ರೋತ್ಸಾಗಿಸುವ ತಂಡದ ಪಂದ್ಯಗಳು ಆರಂಭದಲ್ಲಿಯೇ ನೋಡಲು ಲಭ್ಯವಾಗುವಂತೆ ಈ ರೀತಿ ಆಯೋಜನೆ ಮಾಡಲಾಗಿದೆ. ಇನ್ನು ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ 'ಯು ಮುಂಬಾ' ಹಾಗೂ 'ಬೆಂಗಳೂರು ಬುಲ್ಸ್' ತಂಡಗಳು ಮುಖಾಮುಖಿಯಾಗಲಿದೆ.

ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಮತ್ತೊಂದು ದಕ್ಷಿಣ ಭಾರತದ ತಂಡವಾದ ತಮಿಳ್ ತಲೈವಾಸ್ ವಿರುದ್ಧ ಸೆಣೆಸಾಡಿದರೆ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ಗೆ ಯುಪಿ ಯೋಧಾಸ್ ತಂಡ ಪೈಪೋಟಿ ನೀಡಲಿದೆ. ಇನ್ನು ಈ ಬಾರಿಯ ಆವೃತ್ತಿಯಲ್ಲಿ ಎಲ್ಲಾ ಶನಿವಾರದಂದು ಟ್ರಿಪಲ್ ಪಂಗಾ ಅಂದರೆ ಮೂರು ಪಂದ್ಯಗಳು ನಡೆಯಲಿದೆ. ಈ ಮೂಲಕ ಕಬಡ್ಡಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲು ಪ್ರೋ ಕಬಡ್ಡಿ ಸಂಪೂರ್ಣವಾಗಿ ಸಜ್ಜಾಗಿದೆ.

Story first published: Thursday, December 2, 2021, 14:44 [IST]
Other articles published on Dec 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+