Pro Kabaddi: ನರೇಂದ್ರ ಅಬ್ಬರ: ತಮಿಳು ತಲೈವಾಸ್ ಜಯ
ಸ್ಟಾರ್ ರೇಡರ್ ನರೇಂದ್ರ ಅವರ ಅಬ್ಬರದ ಪ್ರದರ್ಶನದ ಫಲವಾಗಿ 10ನೇ ಆವೃತ್ತಿಯ 108ನೇ ಪಂದ್ಯದಲ್ಲಿ ತಮಿಳು ತಲೈವಾಸ್ 32-25ರಿಂದ ಯು.ಪಿ ಯೋಧಾಸ್ ವಿರುದ್ಧ ಜಯ ಸಾಧಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ತಮಿಳು ತಲೈವಾಸ್ ಟೂರ್ನಿಯಲ್ಲಿ ಎಂಟನೇ ಜಯ ದಾಖಲಿಸಿತು. ತಲೈವಾಸ್ ಆಡಿದ 19 ಪಂದ್ಯಗಳಲ್ಲಿ 11 ಸೋಲು ಕಂಡಿದ್ದು 45 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಇನ್ನು ಯುಪಿ ಯೋಧಾಸ್ ಆಡಿದ 18 ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದು, 13 ಸೋಲು ಕಂಡಿದ್ದು 29 ಅಂಕಗಳನ್ನು ಕಲೆ ಹಾಕಿದ್ದು, 11ನೇ ಸ್ಥಾನದಲ್ಲಿದೆ.

ಪಂದ್ಯದ ಮೊದಲಾವಧಿಯ ತಮಿಳು ತಲೈವಾಸ್ ತಂಡ ಅಬ್ಬರದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ದಾಳಿ ಹಾಗೂ ಟ್ಯಾಕಲ್ ನಡೆಸಿ ಅಬ್ಬರಿಸಿತು. ಈ ಅವಧಿಯಲ್ಲಿ ತಮಿಳು ತಲೈವಾಸ್ 21-16 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಅಲ್ಲದೆ ದಾಳಿಯಲ್ಲಿ 11 ಹಾಗೂ ಟ್ಯಾಕಲ್‌ನಲ್ಲಿ 7 ಅಂಕ ಸೇರಿಸಿತು. ಈ ಅವಧಿಯಲ್ಲಿ ಒಂದು ಬಾರಿ ಎದುರಾಳಿಯನ್ನು ಆಲೌಟ್ ಮಾಡಿತು.
ಎರಡನೇ ಅವಧಿಯಲ್ಲಿ ತಲೈವಾಸ್ ತಂಡದ ರಣ ತಂತ್ರವನ್ನು ಮೆಟ್ಟಿನಿಂತು ಅಂಕಗಳನ್ನು ಕಲೆ ಹಾಕುವ ತಲೈವಾಸ್ ಆಸೆ ಫಲಿಸಲಿಲ್ಲ. ಈ ಅವಧಿಯಲ್ಲೂ ತಲೈವಾಸ್ ಆರ್ಭಟಿಸಿತು. ತಲೈವಾಸ್ 11-9 ರಿಂದ ಅಬ್ಬರಿಸಿತು. ದಾಳಿಯಲ್ಲಿ ತಮಿಳು ಕೇವಲ 4 ಅಂಕಗಳನ್ನು ಕಲೆ ಹಾಕಿದರೆ, ಟ್ಯಾಕಲ್‌ನಲ್ಲಿ 7 ಅಂಕವನ್ನು ಸೇರಿಸಿತು.

ಒಟ್ಟಾರೆ ಪಂದ್ಯದಲ್ಲಿ ತಮಿಳು ತಲೈವಾಸ್ 48 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 15 ಅಂಕ ಕಲೆ ಹಾಕಿದರೆ, ಯುಪಿ ದಾಳಿಯಲ್ಲಿ 13 ಅಂಕ ಸೇರಿಸಿತು. ರಕ್ಷಣಾ ವಿಭಾಗದ ಆಟದಲ್ಲಿ ತಮಿಳು ಆಟಗಾರರು ಅಬ್ಬರ ನಡೆಸಿ 14 ಅಂಕಗಳನ್ನು ಕಲೆ ಹಾಕಿದರು. ಈ ವಿಭಾಗದಲ್ಲಿ ಯು.ಪಿ 9 ಅಂಕ ಕಲೆ ಹಾಕಿತು.
ತಮಿಳು ತಲೈವಾಸ್ ತಂಡದ ಪರ ನರೇಂದ್ರ ಒಟ್ಟು 16 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 10 ಅಂಕ ಸೇರಿಸಿತು. ಇನ್ನು ಪರಾಜಿತ ತಂಡದ ಪರ ಗಗನ್ 6 ಅಂಕ ಸೇರಿಸಿದರು.
ಇಂದು ಬುಲ್ಸ್ ಹಾಗೂ ಪಲ್ಟನ್ ಫೈಟ್
ಇಂದು ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟನ್ 10ನೇ ಆವೃತ್ತಿಯ 109ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದು ಬುಲ್ಸ್ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ. ಇನ್ನೊಂದು ಪಂದ್ಯದಲ್ಲಿ ದಬಾಂಗ್ ದೆಹಲಿ ಕೆ.ಸಿ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications