Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ: ಪಿಂಕ್ ಪ್ಯಾಂಥರ್ಸ್ ಮಣಿಸಿ ಪ್ಲೇ ಆಫ್‌ಗೆ ಮುನ್ನುಗ್ಗಿದ ವಾರಿಯರ್ಸ್!

Pro Kabaddi: Maninder stars as Bengal Warriors beat Jaipur Pink Panthers

ಜೈಪುರ್, ಸೆಪ್ಟೆಂಬರ್ 23: ಮಣೀಂದರ್ ಸಿಂಗ್ ಅವರ ಆಕರ್ಷಕ ಆಟದ ನೆರವಿನಿಂದ ಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಸೀಸನ್ 7ರಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿದೆ. ರಾಜಸ್ಥಾನ್‌ನ ಜೈಪುರ್‌ನಲ್ಲಿನ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ (ಸೆ.22) ನಡೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್, ಆತಿಥೇಯ ಜೈಪುರ್ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 41-40ರ ರೋಚಕ ಗೆಲುವು ಸಾಧಿಸಿತು.

ಪ್ರೊ ಕಬಡ್ಡಿ 2019ರ ವೇಳಾಪಟ್ಟಿ, ಫಲಿತಾಂಶ, ಪಾಯಿಂಟ್‌ ಟೇಬಲ್- ಸೇರಿದಂತೆ ಹೆಚ್ಚಿನ ಮಾಹಿತಿಗಳು ಇಲ್ಲಿವೆ

ವಿಜೇತ ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ 19 (18 ರೈಡ್, 1 ಬೋಸನ್), ಕೆ ಪ್ರಪಂಜನ್ 5, ಬಲ್‌ದೇವ್ ಸಿಂಗ್ 3, ರಿಂಕು ನರ್ವಾಲ್ 3, ಇಸ್ಮಾಯಿಲ್ ನಬಿಬಖ್ಷ್ 2, ರವೀಂದ್ರ ರಮೇಶ್ 2, ವಿರಾಜ್ ವಿಷ್ಣು 1, ಜೀವ ಕುಮಾರ್ 1 ಅಂಕ ಸೇರಿಸಿ ಬೆಂಬಲವಿತ್ತರು.

ಜೈಪುರ್ ಪಿಂಕ್ ಪ್ಯಾಂಥರ್ಸ್‌ನಿಂದ ನೀಲೇಶ್ ಸಾಲುಂಕೆ 15, ದೀಪಕ್ ನಿವಾಸ್ ಹೂಡಾ 10, ದೀಪಕ್ ನರ್ವಾಲ್ 3, ಸಂತಪನಾಸೆಲ್ವಮ್ 3, ವಿಶಾಲ್ 2, ಸಂದೀಪ್ ದುಲ್ 2 ಪಾಯಿಂಟ್‌ ನೀಡಿ ಇತ್ತಂಡಗಳ ಪೈಪೋಟಿಗೆ ಕಾರಣರಾದರು. ಪಾಯಿಂಟ್‌ ಟೇಬಲ್‌ನಲ್ಲೀಗ ಡೆಲ್ಲಿ, ಬೆಂಗಾಲ್, ಹರ್ಯಾಣ ಮೊದಲ 3 ಸ್ಥಾನದಲ್ಲಿವೆ. ಬೆಂಗಳೂರು 6ನೇ ಸ್ಥಾನದಲ್ಲಿದೆ.

Story first published: Monday, September 23, 2019, 0:41 [IST]
Other articles published on Sep 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+