Pro Kabaddi 2023: ಗುಜರಾತ್ ಮಣಿಸಿದ ಪಾಟ್ನಾಗೆ ಅಂಕ ಪಟ್ಟಿಯಲ್ಲಿ ಬಡ್ತಿ
ಸಂಘಟಿತ ಆಟದ ಪ್ರದರ್ಶನ ನೀಡಿದ ಪಾಟ್ನಾ ಪೈರೇಟ್ಸ್ 32-20 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಸೋಮವಾರ ಪಾಟ್ಲಿ ಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 96ನೇ ಪಂದ್ಯದಲ್ಲಿ ಪಾಟ್ನಾ ಅಬ್ಬರಿಸಿತು. ಈ ಗೆಲುವಿನ ಮೂಲಕ ಪಾಟ್ನಾ ಆಡಿದ 17 ಪಂದ್ಯಗಳಲ್ಲಿ 8 ಜಯ, 7 ಸೋಲು, 2 ಡ್ರಾ ಸಾಧಿಸಿದ್ದು 50 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಗುಜರಾತ್ ಜೈಂಟ್ಸ್ ಟೂರ್ನಿಯಲ್ಲಿ 7ನೇ ಸೋಲು ಕಂಡಿತು. ಈ ಮೂಲಕ ಗುಜರಾತ್ 49 ಅಂಕಗಳನ್ನು ಕಲೆ ಹಾಕಿದ್ದು ಆರನೇ ಸ್ಥಾನದಲ್ಲಿದೆ.

ಮೊದಲಾವಧಿಯ 20 ನಿಮಿಷದಲ್ಲಿ ಗುಜರಾತ್ ಜೈಂಟ್ಸ್ ತಂಡ 12-10 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಗುಜರಾತ್ ಆಟಗಾರರು ಸ್ಥಿರ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ ಗುಜರಾತ್ ದಾಳಿಯಲ್ಲಿ 7, ಟ್ಯಾಕಲ್‌ನಲ್ಲಿ 5 ಅಂಕ ಸೇರಿಸಿತು. ಇನ್ನು ಪಾಟ್ನಾ ಈ ಅವಧಿಯಲ್ಲಿ ದಾಳಿಯಲ್ಲಿ 6, ಟ್ಯಾಕಲ್‌ನಲ್ಲಿ 4 ಅಂಕ ಸಂಪಾದಿಸಿತು.
ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಪಾಟ್ನಾ ತಂಡದ ಆಟ ಎರಡನೇ ಅವಧಿಯಲ್ಲಿ ಕಳೆ ಗಟ್ಟಿತು. ಭರ್ಜರಿ ಆಟವನ್ನು ಆಡಿದ ಪಾಟ್ನಾ ಅಂಕದ ಬೇಟೆ ನಡೆಸಿತು. ಈ ಅವಧಿಯಲ್ಲಿ ಪಾಟ್ನಾ ತಂಡದ ರಕ್ಷಣಾ ವಿಭಾಗದ ಮನಮೋಹಕ ಆಟದ ಮುಂದೆ ಗುಜರಾತ್ ರೈಡರ್ಸ್ ತಲೆ ಬಾಗಿದರು. ಈ ಅವಧಿಯಲ್ಲಿ ಹಾಕಿಕೊಂಡ ಯೋಜನೆಯಂತೆ ಆಡಿದ ಪಾಟ್ನಾ ಅಬ್ಬರಿಸಿತು. ಪಾಟ್ನಾ 22-8 ಅಂಕಗಳಿಂದ ಮುನ್ನಡೆ ಸಾಧಿಸುವುದಲ್ಲದೆ, ಮೊದಲಾವಧಿಯಲ್ಲಿ ಕಂಡಿದ್ದ ಅಂಕಗಳ ಹಿನ್ನಡೆಯನ್ನು ಹಿಗ್ಗಿಸಿತು. ಪರಿಣಾಮ ಪಾಟ್ನಾ ತವರಿನಲ್ಲಿ ಮತ್ತೊಂದು ಜಯದ ನಗೆ ಬೀರಿತು.

ಎರಡನೇ ಅವಧಿಯಲ್ಲಿ ಪಾಟ್ನಾ ದಾಳಿಯಲ್ಲಿ 9 ಹಾಗೂ ಟ್ಯಾಕಲ್‌ನಲ್ಲಿ 11 ಅಂಕ ಸೇರಿಸಿತು. ಅಲ್ಲದೆ ಒಮ್ಮೆ ಗುಜರಾತ್ ತಂಡದ ಅಂಗಳವನ್ನು ಖಾಲಿ ಮಾಡಿ ಅಬ್ಬರಿಸಿತು. ಪಾಟ್ನಾ ಪರ ಸಂದೀಪ್ ಕುಮಾರ್ 7, ಆಲ್‌ರೌಂಡರ್ ಅಂಕಿತ್ 6 ಅಂಕವನ್ನು ಕಲೆ ಹಾಕಿದರು. ಪರಾಜಿತ ತಂಡದ ಪರ ಅಂಕಿತ ದಹಿಯಾ 6 ಅಂಕ ಬಾಚಿಕೊಂಡರು.
ಹರಿಯಾಣಕ್ಕೆ ಜಯ
ಇದಕ್ಕೂ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 41-36 ರಿಂf ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ 9ನೇ ಜಯದ ನಗೆ ಬೀರಿತು. ಈ ಜಯದ ಮೂಲಕ ಹರಿಯಾಣ ಆಡಿದ 16 ಪಂದ್ಯಗಳಿಂದ 50 ಅಂಕ ಕಲೆ ಹಾಕಿದೆ. ಇನ್ನು ಟೂರ್ನಿಯಲ್ಲಿ ಎಂಟನೇ ಸೋಲನ್ನು ಕಂಡಿರುವ ಬೆಂಗಾಲ್ ವಾರಿಯರ್ಸ್ 39 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ವಿಜೇತ ತಂಡದ ಪರ ಸಿದ್ಧಾರ್ಥ್ ದೇಸಾಯಿ 11, ಶಿವಂ ಪತ್ರೆ 12 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಬೆಂಗಾಲ್ ತಂಡದ ಪರ ಮಣಿಂದರ್ ಸಿಂಗ್ 13, ನಿತೀನ್ ಕುಮಾರ್ 9 ಅಂಕವನ್ನು ಕಲೆ ಹಾಕಿ ಸೋಲಿನಲ್ಲಿ ಎಲ್ಲರ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications