For Quick Alerts
ALLOW NOTIFICATIONS  
For Daily Alerts

Pro Kabaddi: ಮುಂಬಾ ಮಣಿಸಿದ ಸ್ಟೀಲರ್ಸ್‌ಗೆ ಅಗ್ರ ಪಟ್ಟ: ಬುಲ್ಸ್‌, ಜೈಪುರ ಕಾದಾಟ

ನೋಯ್ಡಾದ ಇಂದೋರ್‌ ಅಂಗಳದಲ್ಲಿ ನಡೆಯುತ್ತಿರುವ 11ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ 40-27 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಾಟ್ನಾ ಆಡಿದ 8 ಪಂದ್ಯಗಳಲ್ಲಿ 5 ಜಯ, 3 ಸೋಲು ಕಂಡಿದ್ದು, 27 ಅಂಕಗಳನ್ನು ಕಲೆ ಹಾಕಿದೆ. ಗುಜರಾತ್ ಜೈಂಟ್ಸ್‌ ಟೂರ್ನಿಯಲ್ಲಿ ಏಳನೇ ಸೋಲು ಕಂಡಿತು. ಪಾಟ್ನಾ ತಂಡದ ಗೆಲುವಿನಲ್ಲಿ ಅಯನ್‌ ಮಿಂಚಿದರು.

ಸೋಮವಾರ ನಡೆದ ಮೊದಲ ಪಂದ್ಯದ ಮೊದಲಾವಧಿಯಿಂದಲೂ ಪಾಟ್ನಾ ಪೈರೇಟ್ಸ್ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಮೊದಲಾವಧಿಯಲ್ಲಿ ಪಾಟ್ನಾ ಅಂಕ ಬೇಟೆಯಲ್ಲಿ 5 ಅಂಕಗಳ ಮುನ್ನಡೆ ಸಾಧಿಸಿತ್ತು. ಈ ವೇಳೆ ಗುಜರಾತ್ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯ ಆಟದಲ್ಲಿ ಗುಜರಾತ್‌ ಜೈಂಟ್ಸ್‌ ತಂತ್ರವನ್ನು ಮೆಟ್ಟಿನಿಂತ ಪಾಟ್ನಾ ಅಂಕಗಳನ್ನು ಕಲೆ ಹಾಕುತ್ತಾ ಸಾಗಿ ಜಯ ಸಾಧಿಸಿತು.

Pro Kabaddi Patna Pirates beat Gujarat Giants Bengaluru Bulls Set to Face Jaipur Pink Panthers

ಪಾಟ್ನಾ ಒಟ್ಟು 40 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 18 ರಲ್ಲಿ ಯಶ ಕಂಡಿತು. ಜೈಂಟ್ಸ್ 39 ಬಾರಿ ದಾಳಿ ನಡೆಸಿ 8 ಅಂಕಗಳನ್ನು ಸೇರಿಸಿತು. ಗುಜರಾತ್‌ ಟ್ಯಾಕಲ್‌ನಲ್ಲಿ 25 ಬಾರಿ ಪ್ರಯತ್ನ ಸಾಧಿಸಿ 10 ಅಂಕ ಸಾಧಿಸಿತು. ಇನ್ನು ಪಾಟ್ನಾ 19 ಬಾರಿ ಎದುರಾಳಿಯನ್ನು ಹಿಡಿಯುವಲ್ಲಿ 14 ಬಾರಿ ಸಫಲರಾದರು.

ಹರಿಯಾಣಕ್ಕೆ ಅಗ್ರ ಸ್ಥಾನ

ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ 48-39 ರಿಂದ ಯು ಮುಂಬಾ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ. ಆಡಿದ 8 ಪಂದ್ಯಗಳಲ್ಲಿ 6 ಜಯ, 2 ಸೋಲು ಕಂಡಿದ್ದು 31 ಅಂಕಗಳನ್ನು ಹರಿಯಾಣ ಕಲೆ ಹಾಕಿದೆ. ಈ ಪಂದ್ಯದಲ್ಲಿ ಸೋತರೂ ಮಂಬಾ ಮೂರನೇ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ.

ವಿಜೇತ ತಂಡದ ಪರ ಮೊಹಮ್ಮದ್ರೇಜಾ 10 ಅಂಕ ಹಾಗೂ ವಿಶಾಲ್‌ ಹಾಗೂ ಶಿವಂ ಪಟಾರೆ ತಲಾ 11 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಅಜಿತ್ ಚೌಹಾಣ್ 18 ಅಂಕಗಳನ್ನು ಸೇರಿಸಿದರು.

Pro Kabaddi Patna Pirates beat Gujarat Giants Bengaluru Bulls Set to Face Jaipur Pink Panthers

ಮೂರನೇ ಗೆಲುವಿನ ಹುಡುಕಾಟದಲ್ಲಿ ಬುಲ್ಸ್‌

ಮಂಗಳವಾರ ನಡೆಯಲಿರುವ ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಮೊದಲು ಉಭಯ ತಂಡಗಳು ಈಗಾಗಲೇ 20 ಬಾರಿ ಕಾದಾಟ ನಡೆಸಿದ್ದು, ಉಭಯ ತಂಡಗಳು ತಲಾ ಎರಡು ಬಾರಿ ಟೈ ಆಗಿದೆ. ಬುಲ್ಸ್ ತಂಡ ಟೂರ್ನಿಯ ಮೂರನೇ ಗೆಲುವಿನ ಹುಡುಕಾಟದಲ್ಲಿದೆ. ಜೈಪುರ ಪಿಂಕ್ ಪ್ಯಾಂಥರ್ಸ್‌ ಆಡಿದ 7 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು, 20 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

ಎರಡೂ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ಅಂಕಗಳನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಬೇಕಿದೆ. ಜೈಪುರ ಪರ ಅರ್ಜುನ್ ದೇಶ್ವಾಲ್‌ ದಾಳಿಯಲ್ಲಿ ಈಗಾಗಲೇ ಟೂರ್ನಿಯಲ್ಲಿ 73 ಅಂಕ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಬುಲ್ಸ್ ತಂಡದ ಪರ ಅಜಿಂಕ್ಯ ಪವಾರ್ 40 ಅಂಕ ಬಾಚಿಕೊಂಡಿದ್ದಾರೆ. ಟ್ಯಾಕಲ್‌ನಲ್ಲಿ ನಿತೀನ್‌ ರಾವಲ್‌ ಎದುರಾಳಿಗಳನ್ನು ಕಾಡಬಲ್ಲರು. ಈಗಾಗಲೇ ಇವರ ಬುಟ್ಟಿಯಲ್ಲಿ ಒಟ್ಟು 26 ಅಂಕಗಳು ಇವೆ. ಜೈಪುರ ಪರ ಅಂಕುಶ್‌ 21 ಬಾರಿ ಎದುರಾಳಿ ರೈಡರ್‌ ಕಟ್ಟಿ ಹಾಕುವಲ್ಲಿ ಸಫಲರಾಗಿದ್ದಾರೆ.

ಮಂಗಳವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ದಬಾಂಗ್‌ ದೆಹಲಿ ಕೆ.ಸಿ. ಹಾಗೂ ಪುಣೇರಿ ಪಲ್ಟನ್‌ ತಂಡಗಳು ಕಾದಾಟ ನಡೆಸಲಿವೆ.

Story first published: Monday, November 11, 2024, 22:49 [IST]
Other articles published on Nov 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+