ಮಂಗಳವಾರ ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಅಬ್ಬರಿಸಿದೆ. ತೆಲುಗು ಟೈಟಾನ್ಸ್ ವಿರುದ್ಧ 36-38 ಅಂಕಗಳ ಅಂತರದಿಂದ ಜಯ ಸಾಧಿಸಿದ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಲೀಗ್ ಸೀಸನ್ 10 ರ ಪ್ಲೇಆಫ್‌ಗೆ ಅರ್ಹತೆ ಪಡೆದ 5 ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಂಜೀತ್ 8 ಅಂಕಗಳೊಂದಿಗೆ ಪಾಟ್ನಾ ಪೈರೇಟ್ಸ್ ತಂಡದ ಗೆಲುವಿನಲ್ಲಿ ಮಿಂಚಿದರು. ತೆಲುಗು ಟೈಟಾನ್ಸ್ ನಾಯಕ ಪವನ್ ಸೆಹ್ರಾವತ್ ಅವರ ಅಮೋಘ 16 ಅಂಕಗಳ ಪ್ರದರ್ಶನವು ವ್ಯರ್ಥವಾಯಿತು.

ಪಾಟ್ನಾ ಪೈರೇಟ್ಸ್ 7-ಪಂದ್ಯಗಳ ಅಜೇಯ ಓಟವನ್ನು ಮುಂದುವರಿಸಿ ಪ್ಲೇಆಫ್‌ಗೆ ಮೊದಲೇ ಫಾರ್ಮ್ ಕಂಡುಕೊಂಡಿತು. ಪವನ್ 2 ಬ್ಯಾಕ್ ಟು ಬ್ಯಾಕ್ ಮಲ್ಟಿ-ಪಾಯಿಂಟ್ ರೈಡ್‌ಗಳನ್ನು ನಡಿಸಿದ ಕಾರಣ ಪಾಟ್ನಾ ತಂಡ ಹಿನ್ನಡೆ ಅನುಭವಿಸಿತು. ಈ ಅವಧಿಯಲ್ಲಿ ಪಾಟ್ನಾ ಸಹ ಕೆಲವು ತಪ್ಪುಗಳನ್ನು ಮಾಡಿದ್ದರಿಂದ ಆರಂಭದಲ್ಲಿ ಅಂಗಳವನ್ನು ಖಾಲಿ ಮಾಡಿತು. ಅಲ್ಲದೆ ಎದುರಾಳಿ ತಂಡಕ್ಕೆ ಬೋನಸ್ ಅಂಕವನ್ನು ನೀಡಿತು.
ತೆಲುಗು ಟೈಟಾನ್ಸ್ 10-3 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಪಾಟ್ನಾ ಪೈರೇಟ್ಸ್‌ನ ರಕ್ಷಣಾ ವಿಭಾಗವು ಈ ಅವಧಿಯಲ್ಲಿ ಮಂಕಾದಂತೆ ಕಂಡು ಬಂದಿತು. ಇದರ ಸಂಪೂರ್ಣ ಲಾಭ ಪಡೆದ ಪವರ ಆರಂಭಿಕ 15 ನಿಮಿಷದಲ್ಲೇ ಸೂಪರ್ 10 ಪೂರೈಸಿದರು. ಈ ಸಮಯದಲ್ಲಿ ಸ್ಕೋರ್‌ಕಾರ್ಡ್ ತೆಲುಗು ಟೈಟಾನ್ಸ್ ಪರವಾಗಿ 20-12 ಇತ್ತು.
ಪಾಟ್ನಾ ಪೈರೇಟ್ಸ್ ಈ ಅವಧಿಯ ಕೊನೆಯ 5 ನಿಮಿಷಗಳಲ್ಲಿ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಸಂದೀಪ್ ಕುಮಾರ್ ಒಂದೆರಡು ಪ್ರಮುಖ ದಾಳಿಗಳನ್ನು ನಡೆಸಿದರು. ಮತ್ತು ಪವನ್ ಆಟಕ್ಕೆ ಪಾಟ್ನಾ ರಕ್ಷಣಾ ವಿಭಾಗ ಬ್ರೇಕ್ ಹಾಕುವಲ್ಲಿ ಸಫಲವಾಯಿತು. ಪರಿಣಾಮ ಈ ಅವಧಿಯಲ್ಲಿ ಪಾಟ್ನಾ 20-22 ಅಂಕಗಳಿಂದ ಹಿನ್ನಡೆ ಸಾಧಿಸಿತು.
ಎರಡನೇ ಅವಧಿಯ ಆರಂಭದಿಂದಲೂ ಯೋಜನಾ ಬದ್ಧ ಆಟವನ್ನು ಪಾಟ್ನಾ 23ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ಇದೇ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದ ತೆಲುಗು ತಂಡ ಅಂಕಗಳಿಕೆಯಲ್ಲಿ ಮತ್ತೆ ಮುನ್ನಡೆ ಕಾಯ್ದುಕೊಂಡಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳು ಅಂಕಗಳನ್ನು ಸುಲಭವಾಗಿ ನೀಡಲಿಲ್ಲ.
ಕೊನೆಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಪಾಟ್ನಾ ಪಂದ್ಯ ಗೆದ್ದು ಬೀಗಿತು. ಎರಡನೇ ಅವಧಿಯಲ್ಲಿ ಪಾಟ್ನಾ 18-14 ಅಂಕಗಳ ಮುನ್ನಡೆ ಸಾಧಿಸಿ ಜಯ ತನ್ನದಾಗಿಸಿಕೊಂಡಿತು. ಎರಡನೇ ಅವಧಿಯಲ್ಲಿ ರೇಡ್ ಹಾಗೂ ಟ್ಯಾಕಲ್‌ನಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದವು.
10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 120ನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆ.ಸಿ ಹಾಗೂ ತಮಿಳು ತಲೈವಾಸ್ ತಂಡಗಳು ಕಾದಾಟ ನಡೆಸಲಿವೆ. ಇನ್ನೊಂದು ಪಂದ್ಯದಲ್ಲಿ ಬಂಗಾಳ್ ವಾರಿಯರ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಮುಖಾಮುಖಿ ಆಗಲಿವೆ.